ಅನ್ಯಗ್ರಹ ಜೀವಿಗಳಿಗೆ ಸಂದೇಶ ರವಾನೆ

ಭೂಮಿಯ ಆಚೆ ಇರುವ ಅನ್ಯಗ್ರಹಗಳಲ್ಲಿ ಮನುಷ್ಯರನ್ನೇ ಹೋಲುವಂತಹ ಜೀವಿಗಳು ಇರಬಹುದೇ ಎಂಬ ಶೋಧನೆಯಲ್ಲಿ ತೊಡಗಿರುವ ಖಗೋಳ ವಿಜ್ಞಾನಿಗಳು, ಭೂ ಗ್ರಹದ ಸಮೀಪ ಮತ್ತು ವಾಸಯೋಗ್ಯ ವಾತಾವರಣ ಇರಬಹುದಾದ ಗ್ರಹವೊಂದಕ್ಕೆ ರೇಡಿಯೊ ಸಂಕೇತಗಳನ್ನು ರವಾನಿಸಿದ್ದಾರೆ.
ಜಿ.ಜೆ.೨೭೩. ಬಿ ಹೆಸರಿನ ಈ ಗ್ರಹದಲ್ಲಿ ಜನರನ್ನು ಹೋಲುವ ಪ್ರಾಣಿಗಳು ಇರುವ ಸಾಧ್ಯತೆಯನ್ನು ಶಂಕಿಸಿರುವ ವಿಜ್ಞಾನಿಗಳು ನಾರ್ವೆ ದೇಶದಲ್ಲಿರುವ ಖಗೋಳ ವೀಕ್ಷಣಾಲಯದ ಆಂಟೆನಾ ಮೂಲಕ ಕಳೆದ ಅಕ್ಟೋಬರ್ ತಿಂಗಳಲ್ಲಿ ರೇಡಿಯೊ ಸಂಕೇತಗಳ ಮೂಲಕ ಸಂದೇಶ ರವಾನಿಸಲಾಗಿದೆ ಎಂದು ಅನ್ಯಗ್ರಹ ಬುದ್ಧಿಮತ್ತೆ ಸಂಶೋಧನಾ ಶೋಧನಾ ಸಂಸ್ಥೆ ಮೇತಿ ಸಂಸ್ಥೆಯ ಮುಖ್ಯಸ್ಥ ಡೋಗ್ಲಾಸ್ ವಕೋಚ್ ಹೇಳಿದ್ದಾರೆ.
ಈ ಕುರಿತ ವರದಿ ಇತ್ತೀಚಿನ ನ್ಯೂ ಸೈಂಟಿಸ್ಟ್ ನಿಯತ ಕಾಲಿಕದಲ್ಲಿ ವರದಿಯಾಗಿದೆ.
ಕಳುಹಿಸುವ ಸಂದೇಶ ಅನ್ಯಗ್ರಹ ಜೀವಿಗಳಿಗೆ ಅರ್ಥವಾಗುವ ರೀತಿಯಲ್ಲಿ ಹೇಗೆ ಯಾವ ಭಾಷೆಯಲ್ಲಿ ಕಳುಹಿಸಬೇಕು ಎಂಬ ಚರ್ಚೆಗಳು ಈಗಾಗಲೇ ನಡೆದಿದ್ದು, ಅದರಂತೆ ಗಣಿತ ಜಾಮಿಟ್ರಿ, ಟ್ರೆಗ್ನಾಮಿಟ್ರಿ ಸೂತ್ರಗಳನ್ನು ಒಳಗೊಂಡ ರೇಡಿಯೊ ಸಂದೇಶವನ್ನು ರವಾನಿಸಲಾಗಿದೆ.
ಹೀಗೆ ರವಾನಿಸಿರುವ ಸಂದೇಶಕ್ಕೆ ಅಲ್ಲಿಂದ ಮರುಸಂದೇಶ ಬರಲು ೨೫ ವರ್ಷಗಳು ಹಿಡಿಯುತ್ತದೆ ಎಂದು ಡೋಗ್ಲಾಸ್ ವಕೋಚ್ ಹೇಳಿದ್ದಾರೆ.
ಈಗ ಸಂದೇಶ ರವಾನಿಸಿರುವ ಗ್ರಹದಲ್ಲಿ ಜೀವ ವಾಸಯೋಗ್ಯ ವಾತಾವರಣವಿದೆ ಎಂದು ವಿಜ್ಞಾನಿಗಳು ಭಾವಿಸಿದ್ದಾರೆ.
ಜಿ.ಜೆ.೨೭೩ ಬಿ ಗ್ರಹ ಇರುವ ನಕ್ಷತ್ರದಲ್ಲಿ ಎರಡು ಗ್ರಹಗಳಿದ್ದು, ಈಗ ಸುದ್ದಿ ರವಾನೆಯಾಗಿರುವ ಜಿ.ಜೆ. ೨೭೩ ಬಿ ಅದರಲ್ಲಿ ಒಂದು.
ಕುತೂಹಲ ಕೆರಳಿಸಿದ್ದು
ಅನ್ಯಗ್ರಹಗಳಲ್ಲಿ ನಮಗಿಂತ ಬುದ್ಧಿವಂತ ಜನರಿದ್ದಾರೆ ಎಂದು ಖಚಿತವಾಗಿ ನಂಬಿರುವ ಖಗೋಳ ವಿಜ್ಞಾನಿಗಳು ಅಂತಹವರ ಸಂಪರ್ಕಕ್ಕೆ ನಿರಂತರ ಯತ್ನದಲ್ಲಿದ್ದಾರೆ.
ಇಂತಹ ಯತ್ನದಲ್ಲಿರುವ ಜಾಗತಿಕ ಖಗೋಳ ವಿಜ್ಞಾನಿಗಳಿಗೆ ಕುತೂಹಲ ಕೆರಳಿಸಿದ್ದು, ಬ್ರೇಕ್ ತ್ರೂ ಲಿಸನ್ ಪ್ರಾಜೆಕ್ಟ್ ಯೋಜನೆ ಅಡಿಯಲ್ಲಿ ನಿರ್ಮಿಸಲಾಗಿರುವ ಬೃಹತ್ ಆಂಟೆನಾದಲ್ಲಿ ಅನ್ಯಗ್ರಹದಿಂದ ಬಂದಿರುವ ರೇಡಿಯೊ ಸಂಕೇತಗಳು ದಾಖಲಾಗಿದ್ದು, ಹೀಗೆ ಬಂದಿರುವ ೧೫ ನಿಗೂಢ ರೇಡಿಯೊ ಸಂಕೇತಗಳನ್ನು ಆಂಟೆನಾ ದಾಖಲಿಸಿದೆ. ಈ ಹಿಂದೆಯೂ ಒಮ್ಮೆ ಇಂತಹ ಸಂಕೇತಗಳು ರವಾನೆಯಾಗಿದ್ದವು.
ಈ ಸಂಕೇತಗಳು ಅನ್ಯಗ್ರಹ ಜೀವಿಗಳ ಸಂಶೋಧನೆಯಲ್ಲಿ ತೊಡಗಿರುವ ವಿಜ್ಞಾನಿಗಳಲ್ಲಿ ಇನ್ನಷ್ಟು ಶೋಧನೆ ಉತ್ಸಾಹ ಮೂಡಿಸಿತ್ತು.

ಅನ್ಯಗ್ರಹ ಜೀವಿಗಳ ಶೋಧನೆಯಲ್ಲಿ ತೊಡಗಿರುವ ಖಗೋಳ ವಿಜ್ಞಾನಿಗಳು ಕಳೆದ ತಿಂಗಳು ಜಿ.ಜೆ.೨೭೩ ಬಿ ಹಸರಿನ ಗ್ರಹಕ್ಕೆ ರೇಡಿಯೊ ಸಂಕೇತಗಳ ಸಂದೇಶ ರವಾನಿಸಿದೆ.
ಈಗ ಕಳುಹಿಸಿರುವ ಸಂದೇಶಕ್ಕೆ ಅಲ್ಲಿಂದ ಸಂದೇಶ ೨೫ ವರ್ಷಗಳ ಒಳಗೆ ಬರುತ್ತದೆ ಎಂದೂ ಸಂದೇಶ ರವಾನಿಸಿರುವ ವಿಜ್ಞಾನಿಗಳು ಹೇಳಿದ್ದಾರೆ.
ನಾರ್ವೆ ದೇಶದ ಖಗೋಳ ಶೋಧನಾಲಯದ ಆಂಟೆನಾದಿಂದ ರವಾನಿಸಲಾಗಿರುವ ಈ ಸಂದೇಶ ಗಣಿತ, ಜಾಮಿಟ್ರಿ, ಟೆಗ್ನಾಮಿಟ್ರಿ ಮತ್ತು ಭೌತಶಾಸ್ತ್ರದ ಸೂತ್ರಗಳಿಂದ ಕೂಡಿದ ರೇಡಿಯೊ ಸಂಕೇತಗಳಿಂದ ಕೂಡಿದೆ ಎಂದೂ ಮೇತಿ ಅನ್ಯಗ್ರಹ ಜೀವಿಗಳ ಬೌದ್ಧಿಕ ಸಾಮರ್ಥ್ಯ ಸಂಶೋಧನಾ ಸಂಸ್ಥೆಯ ವಿಜ್ಞಾನಿಗಳು ಹೇಳಿದ್ದಾರೆ.
ಈ ಕುರಿತ ವರದಿ ನ್ಯೂ ಸೈಂಟಿಸ್ಟ್‌ನ ಇತ್ತೀಚಿನ ಸಂಚಿಕೆಯಲ್ಲಿ ವರದಿಯಾಗಿದೆ.

Leave a Comment