ಅನುಷ್ಕಾ ಥ್ರಿಲ್ಲರ್, ಫ್ಯಾಂಟಸಿ

ಡೇಂಜರ್ ಜೋನ್, ನಿಶಬ್ಧ-೨ ಚಿತ್ರಗಳ ಬಳಿಕ ನಿರ್ದೇಶಕ ದೇವರಾಜ್ ಕುಮಾರ್, ಇದೀಗ ೩ನೇ ಚಿತ್ರ ಅನುಷ್ಕಾ ಚಿತ್ರವನ್ನು ಸದ್ದುಗದ್ದಲವಿಲ್ಲದೇ ಪೂರ್ಣಗೊಳಿಸಿ ಬಿಡುಗಡೆ ಹಂತಕ್ಕೆ ತಂದಿದ್ದಾರೆ.

ರಾಣಿ, ನಾಯಕ,  ನಾಯಕಿ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಹೆಣ್ಣಿನ ಕುರಿತು ಆಗುತ್ತಿರುವ ಶೋಷಣೆಯನ್ನು ೩ ಹಂತಗಳಲ್ಲಿ ತೆರೆಯ ಮೇಲೆ ಕಟ್ಟಿಕೊಡಲು ನಿರ್ದೇಶಕ ದೇವರಾಜ್ ಮುಂದಾಗಿದ್ದಾರೆ. ಹೀಗಾಗಿ ಚಿತ್ರವನ್ನು ಮೈಸೂರು, ಬೆಂಗಳೂರು, ಅರಸೀಕೆರೆ, ಸಾವನದುರ್ಗ, ತಾವರೆಕೆರೆ, ಹಾಡುಗಳನ್ನು ಬ್ಯಾಂಕಾಂಕ್ ಸುತ್ತಮುತ್ತ ಚಿತ್ರೀಕರಣ ನಡೆಸಿದ್ದಾರೆ.

anushaka_166

೨ ದಿನಗಳ ಮಾಂಟೇಜ್ ಚಿತ್ರೀಕರಣ ಬಾಕಿ ಉಳಿದಿದ್ದು ಅದನ್ನು ಸಂತೇ ಬೆನ್ನೂರು, ಚಿತ್ರದುರ್ಗ, ಮೇಲು ಕೋಟೆ, ನಾಯಕನ ಹಟ್ಟಿ, ಮತ್ತಿತ್ತರ ಕಡೆ ಚಿತ್ರೀಕರಣ ಮಾಡಲು ಮುಂದಾಗಿದ್ದಾರೆ.

ಇತ್ತೀಚೆಗೆ ಚಿತ್ರದ ಫೋಟೋ ಶೂಟ್ ಹಮ್ಮಿಕೊಳ್ಳಲಾಗಿದೆ. ಇದೇ ವೇಳೆ ಚಿತ್ರ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಚಿತ್ರದ ಬಗ್ಗೆ ಮಾಹಿತಿ ನೀಡಿದ ನಿರ್ದೇಶಕ ದೇವರಾಜು ಕುಮಾರ್ ೬೫ ದಿನಗಳ ಕಾಲ ಚಿತ್ರೀಕರಣ ಮಾಡಿದು ದೀಪಾವಳಿಗೆ ತೆರೆಗೆ ತರುವ ಉದ್ದೇಶವಿದೆ. ಇದೊಂದು ಥ್ರಿಲ್ಲರ್, ಫ್ಯಾಂಟಸಿ ಕಥೆಯಾಗಿದೆ. ಎಂದರು.

anushaka_176ಅನುಷ್ಕಾ ಹೆಸರಿರುವುದರಿಂದ ಚಿತ್ರದ ಟೀಜರ್ ಬಿಡುಗಡೆಗೆ ಕನ್ನಡದವರೇ ಆದ ತೆಲುಗು ನಟಿ ಅನುಷ್ಕಾ ಶೆಟ್ಟಿ ಅವರನ್ನು ಕರೆತರುವ ಬಗ್ಗೆ ಮಾತುಕಥೆ ನಡೆದಿದೆ. ಅವರು ಸಮತ್ತಿಸಿದ್ದರೆ ಬೆಂಗಳೂರು, ಹೈದರಾಬಾದ್, ಇಲ್ಲವೇ ಚೈನ್ನೈ ನಲ್ಲಿ ಟೀಜರ್ ಬಿಡುಗಡೆ ಮಾಡಲಾಗುವುದು. ಈ ಬಗ್ಗೆ ಇನ್ನು ದಿನಾಂಕ ನಿಗದಿಪಡಿಸಿಲ್ಲ ಎಂದು ಹೇಳಿಕೊಂಡರು.

ಹೊಸದಾಗಿ ಮದುವೆಯಾದ ಹುಡುಗ, ಹುಡುಗಿ, ಹನಿಮೂನ್ ಗೆಂದು ಸ್ಥಳಕ್ಕೆ ಹೋದಾಗ ಅಲ್ಲಿ ನಡೆಯುವ ಘಟನೆಗಳನ್ನು ಚಿತ್ರದಲ್ಲಿ ಹೇಳುವ ಪ್ರಯತ್ನ ಮಾಡಿದ್ದೇವೆ. ಇದರ ಜೊತೆಗೆ ರಾಣಿ ಪಾತ್ರ ಹಾಗೂ ಹೆಣ್ಣಿನ ಮೇಲೆ ಆಗುತ್ತಿರುವ ಶೋಷಣೆಗೆ ಸಂಬಂಧದ ಕಥೆ ಕ್ಲೈಮಾಕ್ಸ್ ನಲ್ಲಿ ಒಟ್ಟುಗೂಡುತ್ತವೆ. ನಂತರ ಎನ್ನು ಎನ್ನುವುದು ಚಿತ್ರದ ತಿರುಳು ಎಂದು ಮಾಹಿತಿ ನೀಡಿದರು.

ಅಮೃತಾ ಅಯ್ಯಂಗಾರ್ ಇದೇ ಮೊದಲ ಬಾರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ೫ ಫೈಟ್ ಗಳಿವೆ. ನಾಯಕರಾಗಿ ರೂಪ್ ಶೆಟ್ಟಿ ಇದ್ದಾರೆ. ಚಿತ್ರಕ್ಕೆ ಎಸ್.ಕೆ.ಗಂಗಾಧರ್ ಬಂಡವಾಳ ಹಾಕಿದ್ದಾರೆ ಎಂದು ವಿವರ ನೀಡಿದರು.

Leave a Comment