ಅನುದಾನರಹಿತ ಶಿಕ್ಷಣ ಸಂಸ್ಥೆಗಳ ಬೇಡಿಕೆಗೆ ಸ್ಪಂದಿಸಲು ಮನವಿ

 

ಕಲಬುರಗಿ ಜ 22:  ಅಳಂದ ತಾಲೂಕಿನ  ಖಾಸಗಿ ಅನುದಾನ ರಹಿತ ಶಾಲೆಗಳನ್ನು 371( ಜೆ) ಕಲಂ ಅಡಿಯಲ್ಲಿ  ಅನುದಾನಕ್ಕೆ ಒಳಪಡಿಸುವಂತೆ ಕಲ್ಯಾಣ ಕರ್ನಾಟಕ ಖಾಸಗಿ ಶಿಕ್ಷಣ ಒಕ್ಕೂಟ ಅಳಂದ ಘಟಕದ ಅಧ್ಯಕ್ಷರಾದ ಖಜೂರಿಯ ಮುರುಘೇಂದ್ರ ಕೋರಣೇಶ್ವರ ಮಹಾಸ್ವಾಮಿಗಳು ಇಂದು ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ಪ್ರಮುಖ 11ಬೇಡಿಕೆಗಳಿಗೆ ಆಗ್ರಹಿಸಿ ಜನವರಿ 29 ರಂದು ಬೆಳಿಗ್ಗೆ 11 ಅಳಂದ ತಾಲೂಕಿನ ಸುಮಾರು 54 ಶಾಲೆಗಳ ಆಡಳಿತ ಮಂಡಳಿಯವರು ಕಲಬುರಗಿ ನಗರದ ವೀರಶೈವ ಕಲ್ಯಾಣ ಮಂಟಪದಿಂದ ಕೆಕೆಆರ್‍ಡಿಬಿ ಕಚೇರಿ ವರೆಗೂ ಪಾದಯಾತ್ರೆ ನಡೆಸಿ ಮನವಿ ಸಲ್ಲಿಸಲಾಗುವದು ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ದತ್ತಾ ಧರ್ಮರಾವ ಹೇಮಾಜಿ,ಶ್ರೀಕಾಂತ, ಬಾಬುರಾವ ಸುಳ್ಳದ,ಶಿವಲಿಂಗ ತೇಲ್ಕರ್ ಮತ್ತಿತರರಿದ್ದರು

ಕಲ್ಯಾಣ ಕರ್ನಾಟಕ ಖಾಸಗಿ ಶಾಲೆಗಳ ಆಡಳಿತ ಮಂಡಳಿಯ ಒಕ್ಕೂಟ::

ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ ಖಾಸಗಿ ಶಾಲೆಗಳ ಆಡಳಿತ ಮಂಡಳಿಯ ಒಕ್ಕೂಟದ ವತಿಯಿಂದ ರಾಜ್ಯದ ಎಲ್ಲ ಜಿಲ್ಲೆ ಮತ್ತು ತಾಲೂಕುಗಳ ಸಂಘಟನೆಯವರು ತಮ್ಮ ಶಾಸಕರುಗಳಿಗೆ ಅನುದಾನ ರಹಿತ ಖಾಸಗಿ ಶಿಕ್ಷಣ ಸಂಸ್ಥೆಗಳ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ, ಜ.26 ರಂದು ರಾಜ್ಯದ ಎಲ್ಲ ಶಾಸಕರುಗಳ ಮೂಲಕ ಮುಖ್ಯಮಂತ್ರಿಗಳಿಗೆ ಮತ್ತು ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸುವರು ಎಂದು ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಬಸವರಾಜ ಭರಶೆಟ್ಟಿ ಇಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸುನೀಲ ಹುಡಗಿ, ಪ್ರಕಾಶ ಗುಡಿಮನಿ, ರಾಮ ಮೋಹನ ಬಳ್ಳಾರಿ,ಅರುಣಕುಮಾರ ಪೊಚಾಲ, ಚನ್ನಬಸಪ್ಪ ಗಾರಂಪಳ್ಳಿ ಸೇರಿದಂತೆ ಹಲವರು ಉಪಸ್ಥಿತರಿದ್ದರು..

Leave a Comment