ಅನಿಲ್ ಜನ್ಮದಿನ ಸಿಹಿ ಹಂಚಿದ ಅಭಿಮಾನಿಗಳು

ಬಳ್ಳಾರಿ, ಡಿ.7: ನಗರದ ಮಾಜಿ ಶಾಸಕ ಅನಿಲ್ ಲಾಡ್ ಅವರ ಜನ್ಮ ದಿನದ ಅಂಗವಾಗಿ ಇಲ್ಲಿನ ಲಾಡ್ ಬ್ರದರ್ಸ್ ಅಭಿಮಾನಿಗಳ ಬಳಗ ಕಂಟೋನ್ ಮೆಂಟ್ ಪ್ರದೇಶದ ಕಿವುಡ ಮತ್ತು ಮೂಗ ಮಕ್ಕಳ ಶಾಲೆಯಲ್ಲಿನ ವಿಧ್ಯಾರ್ಥಿಗಳಿಗೆ ಸಿಹಿ ಹಾಗು ಹಣ್ಣುಗಳನ್ನು ಹಂಚುವುದರ ಮೂಲಕ ಆಚರಿಸಿತು.

ಬಳ್ಳಾರಿ ಲಾಡ್ ಬ್ರದರ್ಸ್ ಅಭಿಮಾನಿ ಬಳಗದ ಅಧ್ಯಕ್ಷ ಹಾಗು ಮಹಾನಗರಪಾಲಿಕೆಯ ಸದಸ್ಯ ಜಾಸ್ವ ರವರು ನೇತೃತ್ವದಲ್ಲಿ. ಯುವ ಕಾಂಗ್ರೆಸ್ ನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜೆ.ವಿ.ಮಂಜುನಾಥ, ಯುವ ನಾಯಕ ಕೊಳಗಲ್ಲು ಅಂಜಿನಿ, ರಾಮಲಿಂಗ, ಅಸುಂಡಿ ಸೂರಿ, ಹಾಗು ಜಿಲ್ಲಾ ಆರೋಗ್ಯ ರಕ್ಷಾ ಸಮಿತಿ ಸದಸ್ಯ ಬಿ.ಕೆ. ಲಕ್ಷ್ಮಣ ಅಂಬೇಡ್ಕರ್ ಸಂಘದ ಅಧ್ಯಕ್ಷ ಹೊನ್ನೂರಪ್ಪ, ಬೆಳ್ಳಿ ನಾಗಪ್ಪ ದೇವಸ್ಥಾನ ಸಮಿತಿ ಅಧ್ಯಕ್ಷ ತಿಪ್ಪೇಸ್ವಾಮಿ, ಯಾಳಗಿ ಮಲ್ಲಿಕಾರ್ಜುನ, ಹಾಗು ದಿವಾಕರ್, ಮಲ್ಲಯ್ಯ, ವಂಡ್ರಪ್ಪ, ದುರ್ಗೇಶ್, ಸುಭಾನ್, ನೂರ್, ಚಿನ್ನಿಬಾಬು ಹಾಗು ಶಾಲೆಯ ಸಿಬ್ಬಂದಿ ವರ್ಗದವರಾದ ಗೋವಿಂದಪ್ಪ, ಹಾಗು ಮುಂತಾದವರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಅತಿಥಿಗಳು, ಅನಿಲ್ ಲಾಡ್ ಅವರು ತಮ್ಮ ಆಡಳಿತದ ಅವಧಿಯಲ್ಲಿ ಸಾಕಷ್ಟು ಜನಪರ ಅಭಿವೃದ್ದಿ ಕಾರ್ಯಗಳನ್ನು ಮಾಡಿದ್ದನ್ನು ಸ್ಮರಿಸಿದರು. ಈಗಲೂ ಸಹ ಅವರು ಪ್ರತಿಯೊಬ್ಬರಿಗೂ ತಮ್ಮದೇ ಆದ ಶೈಲಿಯಲ್ಲಿ ಸಾರ್ವಜನಿಕ ಸೇವೆಗಳನ್ನು ಮಾಡುತ್ತಿದ್ದಾರೆಂದು ಶುಭ ಹಾರೈಸಿದರು.

Leave a Comment