ಅನಿಲ್ ಅಂಬಾನಿಗೆ ಶಾಕ್ ನೀಡಿದ ಬ್ರಿಟನ್ ನ್ಯಾಯಾಲಯ

ಮುಂಬೈ, ಮೇ 23-ಸಾಲಗಳ ಸುಳಿಯಲ್ಲಿ ಸಿಲುಕಿ ದಿವಾಳಿಯತ್ತ ಸಾಗುತ್ತಿರುವ ಪ್ರಮುಖ ಉದ್ಯಮಿ ಅನಿಲ್ ಅಂಬಾನಿ ಅವರಿಗೆ ಬ್ರಿಟನ್ ನ್ಯಾಯಾಲಯವೊಂದು ಭಾರಿ ಶಾಕ್ ನೀಡಿದೆ.
ಸಾಲ ಮರುಪಾವತಿಸದ ಪ್ರಕರಣದಲ್ಲಿ ಮೂರು ಚೈನಾ ಬ್ಯಾಂಕ್ ಗಳಿಗೆ ೭೦೦ ಮಿಲಿಯನ್ ಡಾಲರ್ ಪಾವತಿಸಬೇಕು ಎಂದು ಲಂಡನ್ ನ್ಯಾಯಾಲಯದ ನ್ಯಾಯಾಧೀಶರು ಆದೇಶ ಜಾರಿ ಮಾಡಿದ್ದಾರೆ.
ಭಾರತೀಯ ಕರೆನ್ಸಿಯಲ್ಲಿ ರೂ ೫,೪೪೦ ಕೋಟಿ ರೂಪಾಯಿ ಹಣವನ್ನು ಇನ್ನೂ ೨೧ ದಿನದೊಳಗೆ ಮರು ಪಾವತಿಸಲು ಗಡುವು ವಿಧಿಸಿದೆ. ರಿಲಯನ್ಸ್ ಕಮ್ಯೂನಿಕೇಷನ್ಸ್ ಬ್ಯಾಂಕ್ ಸಾಲಗಳಿಗಾಗಿ ೨೦೧೨ರಲ್ಲಿ ಅನಿಲ್ ಅಂಬಾನಿ ವ್ಯಕ್ತಿಗತ ವೈಯಕ್ತಿಕ ಗ್ಯಾರಂಟಿ ಒದಗಿಸಿದ್ದರು ಎಂದು ನ್ಯಾಯಮೂರ್ತಿ ನಿಗರ್ ಟಿಯರ್ ತಮ್ಮ ತೀರ್ಪಿನಲ್ಲಿ ಹೇಳಿದ್ದಾರೆ.

ಆದರೆ ತಮ್ಮ ಪರವಾಗಿ ಯಾವುದೇ ಸಾಲಗಳಿಗೆ ವಯಕ್ತಿಕ ಗ್ಯಾರಂಟಿ ನೀಡಲು ಯಾರಿಗೂ ಅಧಿಕಾರ ನೀಡಿರಲಿಲ್ಲ ಎಂಬುದು ಅಂಬಾನಿ ಅವರ ವಾದವಾಗಿದೆ
ಆದರೆ, ಬ್ರಿಟನ್ ಕೋರ್ಟ್ ತೀರ್ಪಿನಿಂದಾಗಿ ಪ್ರಸ್ತುತ ತನ್ನ ಆಸ್ತಿ ಮೌಲ್ಯ “ಶೂನ್ಯ” ಎನ್ನುತ್ತಿರುವ ಅನಿಲ್ ಅಂಬಾನಿ ಅವರಿಗೆ ಹೊಸ ಬಿಕ್ಕಟ್ಟು ಸೃಷ್ಟಿಯಾಗಿದೆ ಎಂದು ಉದ್ಯಮ ವರ್ಗಗಳು ಹೇಳುತ್ತಿವೆ.
ಈ ಹಿಂದೆ ಕೂಡಾ ಇಂತಹ ಪರಿಸ್ಥಿತಿ ಉದ್ಭವಗೊಂಡಾಗ ಅನಿಲ್ ಅಂಬಾನಿ ಅಣ್ಣ, ಏಷ್ಯದಲ್ಲೇ ಅತಿದೊಡ್ಡ ಶ್ರೀಮಂತ ಮುಖೇಶ್ ಅಂಬಾನಿ ನೆರವಿಗೆ ದಾವಿಸುತ್ತಿದ್ದರು. ಎರಿಕ್ ಸನ್ ಪ್ರಕರಣದಲ್ಲಿ ಕೊನೆಯ ಕ್ಷಣದಲ್ಲಿ ಮುಖೇಶ್ ಅಂಬಾನಿ ತಮ್ಮನ ಸಾಲದ ಬಾಕಿ ಪಾವತಿಸಿ ಸ್ವಲ್ಪದರಲ್ಲಿಯೇ ಅವರು ಜೈಲಿಗೆ ಹೋಗುವುದನ್ನು ತಪ್ಪಿಸಿದ್ದರು. ಅನಿಲ್ ಅಂಬಾನಿ ವಿರುದ್ದ ಇಂಡಸ್ಟ್ರೀಯಲ್ ಅಂಡ್ ಕರ್ಮಷಿಯಲ್ ಬ್ಯಾಂಕ್ ಸೇರಿ ಮೂರು ಚೈನಾ ಬ್ಯಾಂಕ್ ಗಳು ನ್ಯಾಯಾಲಯದ ಮೊರೆ ಹೋಗಿದ್ದವು.

Leave a Comment