ಅನಿತಾ ಆನಂದ್‌ ಸಂಪುಟ ದರ್ಜೆ ಸಚಿವೆಯಾದ ಮೊದಲ ಹಿಂದೂ ಮಹಿಳೆ

ಒಟ್ಟಾವ: ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೊ ಅವರು ಬುಧವಾರ ಸಚಿವ ಸಂಪುಟವನ್ನು ವಿಸ್ತರಿಸಿದ್ದು, ಭಾರತೀಯ ಮೂಲದ ಅನಿತಾ ಇಂದ್ರ ಆನಂದ್ ಸಂಪುಟ ದರ್ಜೆ ಸಚಿವರಾಗಿ ನೇಮಕಗೊಂಡಿದ್ದಾರೆ. ಕೆನಡಾದ ಮೊದಲ ಹಿಂದೂ ಮಹಿಳಾ ಸಚಿವೆ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ.
ನೂತನ ಸಚಿವ ಸಂಪುಟದಲ್ಲಿ ಮೂವರು ಇಂಡೋ-ಕೆನಡಿಯನ್‌ ಮೂಲದ ಮಂತ್ರಿಗಳಿದ್ದು, ಅವರು ಸಿಖ್‌ ಸಮುದಾಯಕ್ಕೆ ಸೇರಿದವರಾಗಿದ್ದಾರೆ.
ಅಕ್ಟೋಬರ್‌ನಲ್ಲಿ ನಡೆದ ಫೆಡರಲ್ ಚುನಾವಣೆಯಲ್ಲಿ ಮೊದಲ ಬಾರಿಗೆ ಅನಿತಾ ಆಯ್ಕೆಯಾಗಿದ್ದರು, ಅವರಿಗೆ ನಾಗರಿಕ ಸೇವೆ ಖಾತೆಯನ್ನು ನೀಡಲಾಗಿದೆ.
ನೊವಾ ಸ್ಕೊಟಿಯಾ ಪ್ರಾಂತ್ಯದಲ್ಲಿ ಜನಿಸಿರುವ ಅನಿತಾ ಎಸ್‌ವಿ ಅನಂದ್ ಹಾಗೂ ಸರೋಜ ರಾಮ್‌ ದಂಪತಿಯ ಪುತ್ರಿ. ಭಾರತೀಯ ಮೂಲದ ಈ ದಂಪತಿ ವೃತ್ತಿಯಲ್ಲಿ ವೈದ್ಯರಾಗಿದ್ದಾರೆ.
ಟೊರೆಂಟೊ ವಿಶ್ವವಿದ್ಯಾಲಯದ ಕಾನೂನು ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಅನಿತಾ ಸೇವೆ ಸಲ್ಲಿಸಿದ್ದಾರೆ.

Leave a Comment