ಅನಾಥಶ್ರಮದಲ್ಲಿ ನಟ ಚೇತನ್ ವಿವಾಹ

ಬೆಂಗಳೂರು, ಜ. ೨೧- ಚಿತ್ರನಟ ಹಾಗೂ ಜನಪರ ಹೋರಾಟಗಾರ ಚೇತನ್ ವಿವಾಹ ಫೆ. 2 ರಂದು ಅನಾಥಾಶ್ರಮದಲ್ಲಿ ನಡೆಯಲಿದೆ.
ನಟ ಚೇತನ್ ಅವರ ಕಾಲೇಜು ಸಹಪಾಠಿ ಮೇಘ ಅವರೊಂದಿಗೆ ಚೇತನ್ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ವೃತ್ತಿಯಲ್ಲಿ ಇಂಜಿನಿಯರ್ ಆಗಿರುವ ಮೇಘ ಮತ್ತು ಚೇತನ್ ಪರಸ್ಪರ ಪ್ರೀತಿಸುತ್ತಿದ್ದು, ಇದು ಈಗ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.
ಅನಾಥಾಶ್ರಮವೊಂದರಲ್ಲಿ ಫೆ. 2 ರಂದು ಸರಳವಾಗಿ ವಿವಾಹವಾಗಲು ಈ ಜೋಡಿ ನಿರ್ಧರಿಸಿದ್ದಾರೆ ಎಂದು ಚೇತನ್ ಆಪ್ತರು ಮಾಹಿತಿ ನೀಡಿದ್ದು, ವಿವಾಹ ಕಾರ್ಯಕ್ರಮದಲ್ಲಿ ವಚನ ಗಾಯನ, ಸೂಫಿ ಗಾಯನ, ಸೇರಿದಂತೆ ದೇಶೀ ನೃತ್ಯಗಳ ಹಾಗೂ ಇನ್ನಿತರ ಸಂಸ್ಕೃತಿ ಕಾರ್ಯಕ್ರಮಗಳು ನಡೆಯಲಿದೆ.
ಈಗಾಗಲೇ ವಿವಾಹಕ್ಕೆ ಗಣ್ಯರನ್ನು ಆಹ್ವಾನಿಸಲು ಮುಂದಾಗಿರುವ ಚೇತನ್ ತಮ್ಮ ವಿವಾಹಕ್ಕೆ ಖ್ಯಾತ ನ‌ಟ ಪುನೀತ್ ರಾಜ್‌ಕುಮಾರ್ ಅವರನ್ನು ಆಮಂತ್ರಿಸುವ ಕುರಿತು ತಮ್ಮ ಫೇಸ್ ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.

Leave a Comment