ಅನರ್ಹ ಶಾಸಕರಿಗೆ ಬಿಜೆಪಿ ಟಿಕೆಟ್

ಬೆಂಗಳೂರು, ನ 13- ಕಾಂಗ್ರೆಸ್, ಜೆಡಿಎಸ್  17 ಶಾಸಕರ ಅನರ್ಹತೆ ಕುರಿತು ಸುಪ್ರೀಂಕೋರ್ಟ್ ನೀಡಿದ ತೀರ್ಪನ್ನು ಮುಖ್ಯಮಂತ್ರಿ ಬಿ ಎಸ್ ಯಡಿಯುರಪ್ಪ ಸ್ವಾಗತಿಸಿದ್ದಾರೆ.

ಉಪಚುನಾವಣೆಯಲ್ಲಿ ಸ್ಪರ್ಧಿಸಲು ಪಕ್ಷವು ಅವರಿಗೆ ಟಿಕೆಟ್ ನೀಡುವ ಬಗ್ಗೆ   ಪರಿಶೀಲನೆ ಮಾಡಲಿದೆ  ಎಂದೂ ಪ್ರತಿಕ್ರಿಯೆ ನೀಡಿದ್ದಾರೆ.

ಸುದ್ದಿಗಾರರ ಜೊತೆ ಮಾತನಾಡಿದ  ಯಡಿಯೂರಪ್ಪ ಅವರು, ಪಕ್ಷದ ಕೋರ್ ಸಮಿತಿ ಸಭೆಗೆ  ಅನರ್ಹ ಶಾಸಕರನ್ನು ಸಹ ಆಹ್ವಾನಿಸಲಾಗುವುದು ಎಂದು ಹೇಳಿದರು.

ರಾಜೀನಾಮೆ ನೀಡಿದ ಶಾಸಕರನ್ನು ಚುನಾವಣೆಗೆ ಸ್ಪರ್ಧಿಸುವುದನ್ನು ತಡೆಯುವ ಸ್ಪೀಕರ್ ಆದೇಶವನ್ನು ನ್ಯಾಯಾಲಯ ಅನುಮೋದಿಸಿಲ್ಲ ಎಂದರು.  ಪಕ್ಷದ ಕೇಂದ್ರ ನಾಯಕರು ಉಪಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ,  ಅವರಿಗೆ  ಟಿಕೆಟ್ ನೀಡುವ  ಬಗ್ಗೆ  ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತಾರೆ  ಎಂದು ಹೇಳಿದರು.

ಈ ನಡುವೆ  , ಶಾಸಕರನ್ನು ಅನರ್ಹಗೊಳಿಸಿ, ಹಿಂದಿನ  ಸ್ಪೀಕರ್ ನೀಡಿದ್ದ ಆದೇಶವನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿರುವುದು  ಸಮಂಜಸವಾಗಿದೆ, ಸಾಮಾಜಿಕ ನ್ಯಾಯದ ಪರವಾಗಿದೆ  ಎಂದು  ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

“ಬಿಜೆಪಿಗೆ ತತ್ವಗಳ ಮೇಲೆ ನಂಬಿಕೆಯಿದ್ದರೆ   ಅನರ್ಹ ಶಾಸಕರಿಗೆ  ಟಿಕೆಟ್ ನೀಡಬಾರದು  ಎಂದು ಅವರು ಆಗ್ರಹ ಪಡಿಸಿದರು. ಶಾಸಕರ ಪಕ್ಷಾಂತರಕ್ಕೆ ಸುಪ್ರೀಂ ಕೋರ್ಟ್ ಅನುಮೋದನೆ ನೀಡಿಲ್ಲ ಹೀಗಾಗಿ ಎಲ್ಲ ರಾಜಕೀಯ ಪಕ್ಷಗಳು  ಅವರನ್ನು ದೂರವಿಡಬೇಕು ಎಂದೂ  ಆಗ್ರಹಪಡಿಸಿದರು.

 

Leave a Comment