ಅನಧಿಕೃತ ಹೋಂ ಸ್ಟೇಗಳ ನೋಂದಣಿ ಕಡ್ಡಾಯ: ಕೊಡಗು ಡಿಸಿ

ಮಡಿಕೇರಿ, ಫೆ 19 – ಅನಧಿಕೃತ ಹೋಂ ಸ್ಟೇಗಳ ಮಾಲೀಕರು ಮಾರ್ಚ್ 20 ರ ಮೊದಲು ಆನ್‌ಲೈನ್ ಮೂಲಕ ಪ್ರವಾಸಿ ಇಲಾಖೆಯಲ್ಲಿ ನೋಂದಾಯಿಸಿಕೊಳ್ಳುವಂತೆ ಕೊಡಗು ಜಿಲ್ಲಾಧಿಕಾರಿ ನಿರ್ದೇಶನ ನೀಡಿದ್ದಾರೆ.

ಇದನ್ನು ಪಾಲನೆ ಮಾಡಲು ವಿಫಲರಾದವರನ್ನು ಅನಧಿಕೃತವೆಂದು ಪರಿಗಣಿಸಿ ಅದಕ್ಕೆ ಬೀಗಮುದ್ರೆ ಜಡಿಯಲಾಗುವುದು ಎಂದೂ ಎಚ್ಚರಿಸಿದ್ದಾರೆ.
ಜಿಲ್ಲಾಧಿಕಾರಿ ಆನಿಸ್ ಕಣ್ಮನಿ ಜಾಯ್ ಅವರು ಅನಧಿಕೃತ ಹೋಂ ಸ್ಟೇ ಗಳಿಗೆ ನೋಂದಾಯಿಸಿಕೊಳ್ಳಲು ಸಾಕಷ್ಟು ಅವಕಾಶ ಒದಗಿಸಲಾಗಿದೆ ಎಂದು ಹೇಳಿದರು.

ಆದರೂ , ಕೆಲವರು ನೋಂದಾಯಿಸಿಕೊಂಡಿದ್ದಾರೆ ಮತ್ತು ಕೆಲವರು ನೋಂದಾಯಿಸಿಲ್ಲ. ಆದ್ದರಿಂದ, ನೋಂದಣಿ ವಿಫಲವಾದರೆ ಅವರ ವಿರುದ್ಧ ಒಂದು ತಿಂಗಳ ನಂತರ ಅಗತ್ಯ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.

ಮೊದಲ ಹಂತದ ಸಮೀಕ್ಷೆಯಲ್ಲಿ 350 ಕ್ಕೂ ಹೆಚ್ಚು ಅಕ್ರಮ ಅನಧಿಕೃತ ಹೋಂ ಸ್ಟೇ ಗಳು ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವುದು ಸಮೀಕ್ಷೆಯ ಮೂಲಕ ಗಮನಕ್ಕೆ ಬಂದಿದೆ ಎಂದು ಅವರು ಹೇಳಿದರು.

ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ರಾಘವೇಂದ್ರ ಮಾತನಾಡಿ, 2015-20ರ ಪ್ರವಾಸೋದ್ಯಮ ನೀತಿಯ ಮಾರ್ಗಸೂಚಿಗಳ ಪ್ರಕಾರ, ಹೋಂ ಸ್ಟೇ ಮಾಲೀಕರು ಕಡ್ಡಾಯವಾಗಿ ನೋಂದಾಯಿಸಿಕೊಳ್ಳಬೇಕು ಎಂದರು.

Leave a Comment