ಅನಂತು ವರ್ಸಸ್ ನುಸ್ರತ್ ಪ್ರೇಮ ಗೀತೆಗಳು

ಪ್ರೀತಿ ಪ್ರೇಮ ವಿಶ್ವಾಸವನ್ನು ಪ್ರಮುಖವಾಗಿಟ್ಟುಕೊಂಡಿರುವ ಅನಂತು ವರ್ಸಸ್ ನುಸ್ರತ್ ಚಿತ್ರದ ಹಾಡುಗಳು ಬಿಡುಗಡೆಯಾಗಿವೆ ಕಳೆದ ಗುರುವಾರ ಕಲಾವಿದರ ಸಂಘದ ಸಭಾಂಗಣದಲ್ಲಿ ನಡೆದ ಹಾಡುಗಳ ಬಿಡುಗಡೆ ಕಾರ್ಯಕ್ರಮದಲ್ಲಿ ರಾಘವೇಂದ್ರರಾಜ್,ಪುನೀತ್ ರಾಜ್‌ಕುಮಾರ್ ಸೇರಿ ಡಾ.ರಾಜ್ ಕುಟುಂಬದವರು ಪಾಲ್ಗೊಂಡಿದ್ದರು.

ananthu-vs-nusrat_136

ಅನಂತು ವರ್ಸಸ್ ನುಸ್ರತ್ ಸಿನೆಮಾದ ಚಿತ್ರೀಕರಣ ಮುಗಿದಿದ್ದು ಬಿಡುಗಡೆಗೆ ಸಿದ್ದತೆ ನಡೆಸುತ್ತಿರವ ಬೆನ್ನಲ್ಲೆ ನಿರ್ಮಾಪಕ ನಾಗಮಂಗಲದ ಕೆಂಪೆಗೌಡ ಹಾಡುಗಳ ಬಿಡುಗಡೆ ಕಾರ್ಯಕ್ರಮವನ್ನು ಆಯೋಜಿಸಿದ್ದರು ಧರ್ಮದ ಆಚರಣೆ, ಸಮಾಜ ಇದರ ಮಧ್ಯೆ  ಪ್ರೀತಿ, ಪ್ರೇಮ, ವಿಶ್ವಾಸ ವಿಷಯಗಳ ಕುರಿತ ಕತೆಯಾಗಿದೆ ಎಂದು ಚಿತ್ರದಲ್ಲಿ ನಟನೆ ಮಾಡಿರುವ ದತ್ತಣ್ಣ ‘ಅನಂತು ವರ್ಸಸ್ ನುಸ್ರತ್ ಚಿತ್ರದ ಧ್ವನಿಸಾಂದ್ರಿಕೆ ಅನಾವರಣ ಕಾರ್ಯಕ್ರಮದಲ್ಲಿ ಕತೆಯ ಒಂದು ಏಳೆಯನ್ನು ತೆರೆದಿಟ್ಟರು.

ananthu-vs-nusrat_147ಶೀರ್ಷಿಕೆಯನ್ನು ಅನಂತು ಮತ್ತು ನುಸ್ರತ್ ಇಡಬಹುದಿತ್ತು,ಈಗಿರುವ ಟೈಟಲ್ ಗೊಂದಲವಿದೆ ಆದರೂ ಕ್ಯಾಚಿಯಾಗಿದೆ ಚಿತ್ರವು ಉತ್ತಮವಾಗಿ ಮೂಡಿಬಂದಿದ್ದು ಕತೆ ಪ್ರೇಕ್ಷಕರಿಗೆ ಇಷ್ಟವಾಗಲಿದೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು.ಇದಕ್ಕೂ ಮುನ್ನ ಮಾತನಾಡಿದ ಸುಧೀರ್‌ಶಾನ್‌ಬೋಗ್ ಪ್ರೇಮಕತೆಯ ಕೌಟಂಬಿಕ ಮೌಲ್ಯಗಳನ್ನು ತೋರಿಸಲಾಗಿದೆ. ಕತೆ ಚಿತ್ರಕತೆಯನ್ನು ನಂಬಿಕೊಂಡು ಬಂಡವಾಳ ಹಾಕಿರುವ ನಿರ್ಮಾಪಕರಿಗೆ ಅಭಿನಂದನೆ ಸಲ್ಲಿಸಿದರು.

ಕುವುಂಪು,ಅಮೀರ್‌ಕುಸ್ರು ಸಾಹಿತ್ಯವನ್ನು  ಬಳಸಿರುವುದು ಸನ್ನಿವೇಶಕ್ಕೆ ಹೊಂದಿಕೊಂಡಿದೆ. ಪಿಆರ್‌ಕೆ ಸಂಸ್ಥೆಯುವರು ಆಡಿಯೋ ಹಕ್ಕುಗಳನ್ನು ತೆಗೆದುಕೊಂಡಿದ್ದು ಖುಷಿ ನೀಡಿದೆ ಎಂದರು ನಾಯಕ ವಿನಯ್ ರಾಜ್‌ಕುಮಾರ್.ತಾಯಿ ಪಾತ್ರ ಮಾಡಿರುವ ಹರಿಣಿ, ಛಾಯಗ್ರಾಹಕ ಅಭಿಷೇಕ್.ಜಿ.ಕಾಸರಗೂಡು ಚುಟುಕು ಮಾತಿಗೆ ವಿರಾಮ ಹಾಕಿದರು. ೧೨ನೇ ಶತಮಾನದ ಘಜಲ್, ಕವಾಲಿಯನ್ನು ಬಳಸಲಾಗಿದೆ ಎಂದು ಸಂಗೀತ ನಿರ್ದೇಶಕ ಸುನಾದ್‌ಗೌತಂ ಮಾಹಿತಿ ನೀಡಿದರು.

ನಾವುಗಳು ಹೇಳುವುದಕ್ಕಿಂತ ಸಿನಿಮಾ ಮಾತಾಡಬೇಕು ಎಂದು ರಾಘವೇಂದ್ರರಾಜ್‌ಕುಮಾರ್, ವಿಜಯಪ್ರಕಾಶ್ ಹಾಡಿರುವ ‘ಈಗ ತಾನೇ ಜಾರಿಯಾಗಿದೆ’ ಗೀತೆ ಚೆನ್ನಾಗಿದೆ ಎಂದರು ಪುನೀತ್‌ರಾಜ್‌ಕುಮಾರ್.  ಡಾ.ರಾಜ್‌ಕುಮಾರ್ ಮೊಮ್ಮಗ ಎಂದು ತಿಳಿದಕೊಡಲೇ ಯೋಚಿಸದೆ ನಿರ್ಮಾಣ ಮಾಡಲಾಯಿತು. ಅವರ ಹೆಸರು ಇದ್ದರೆ ಪುಣ್ಯ. ಇಂದು ಅವರ ಕುಡಿ ಇರುವುದು ಪ್ಲಸ್ ಪಾಯಿಂಟ್. ಆ ನಂಬಿಕೆಯಿಂದಲೇ ಹಣ ಹೂಡಿದ್ದೇನೆಂದು ನಿರ್ಮಾಪಕ ನಾಗಮಂಗಲದ ಕೆಂಪೆಗೌಡ ಹೇಳಿದರು.  ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಯುವರಾಜ್‌ಕುಮಾರ್, ಧೀರಜ್‌ರಾಮ್‌ಕುಮಾರ್, ಡಾ.ರಾಜ್‌ಕುಮಾರ್ ಕುಟುಂಬದವರು ಆಗಮಿಸಿದ್ದರು..

Leave a Comment