ಅಧ್ಯಯನ ಮಾಡಿದರೆ ಎಲ್ಲಾ ಪದವಿಗಳು ಸರಳ

ಬಳ್ಳಾರಿ, ಆ13 : ಯಾವುದೇ ಕಾಲೇಜಾಗಲಿ, ಎಂತದೇ ಪದವಿಯಾಗಲಿ ಅಧ್ಯಯನ ಮಾಡಿದರೆ ಎಲ್ಲವೂ ಸರಳ ಮತ್ತು ಸುಲಭ ಎಂದು ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಮಾಜಿ ಕುಲಪತಿ ಡಾ|| ಕೆ. ಬಾಲವೀರಾ ರೆಡ್ಡಿ ಹೇಳಿದರು.

ಅವರು ನಗರದ ರಾವ್ ಬಹದ್ದೂರ್ ವೈ ಮಹಾಬಲೇಶ್ವರಪ್ಪ ತಾಂತ್ರಿಕ ನಿನ್ನೆ ನಡೆದ ಫ್ರೆಶರ್ ಡೇ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಪ್ರತಿಯೊಬ್ಬ ವಿದ್ಯಾರ್ಥಿಯೂ ತಂದೆತಾಯಿಯರ ಪರಿಶ್ರಮಕ್ಕೆ ಸ್ಪಂದಿಸಿ ಉತ್ತಮ ಪಲಿತಾಂಶವನ್ನು ಹೊಂದಬೇಕಾಗಿದೆ, ಆಗಲೇ ಕಾಲೇಜಿನ ಕ್ಯಾಂಪಸ್ ಹಾಗು ಆಫ್ ಕ್ಯಾಂಪಸ್ ಉದ್ಯೋಗಗಳು ಸಿಗುವಲ್ಲಿ ಸುಲಭವಾಗುತ್ತದೆ. ಅಲ್ಲದೇ ನಿಮ್ಮ ಈ ನಾಲ್ಕು ವರ್ಷದ ಬಿ.ಇ. ಪದವಿಯಲ್ಲಿ ಪಡುವ ಶ್ರಮ ಮುಂದಿನ ನಲವತ್ತು ವರ್ಷದವರೆಗೆ ಸುಖಮಯವಾದ ಹಾದಿ ನೀಡುವುದು ಎಂಬುದನ್ನು ಮರೆಯಬಾರದು ಎಂದರು.

ಹಿರೇಹಡಗಳಿಯ ಹಾಲೇಶ್ವರ ಮಠದ ಹಾಲಶ್ರೀ ಸ್ವಾಮಿಜಿ ವೇದಗಳ ಕಾಲದಿಂದಲೂ ಭಾರತ ವಿಜ್ಞಾನ, ತಂತ್ರಜ್ಞಾನಗಳ ತವರು ಭೂಮಿ. ನಮ್ಮ ವಂಶವಾಹಿಗಳಲ್ಲೇ ನಮ್ಮ ಪರಂಪರೆ, ಪ್ರತಿಭೆ ಅಡಕವಾಗಿವೆ. ಆದರೆ, ಶೇ. 80 ರಷ್ಟು ಭಾರತೀಯ ತಾಂತ್ರಿಕ ವಿದ್ಯಾರ್ಥಿಗಳು ಉದ್ಯೋಗಕ್ಕೆ ಅನರ್ಹರು ಎಂಬ ಟೀಕೆ ಕಳವಳ ಹುಟ್ಟಿಸಿದೆ. ಕೇವಲ ಅಂಕ ಗಳಿಸುವ ಯಂತ್ರಗಳಾಗದೇ, ಹೊಸ ಅವಿಷ್ಕಾರಗಳತ್ತ ತುಡಿಯಿರಿ ಎಂದು ಕರೆ ನೀಡಿದರು.

ವಿವಿ ಸಂಘದ ಕಾರ್ಯದರ್ಶಿ ಟಿ. ಕೊಟ್ರಪ್ಪ ಇಡೀ ಪ್ರಪಂಚವೇ ತಲೆಮೇಲೆ ಬಿದ್ದರು ಜೀವದಲ್ಲಿ ಕಳವಳಗೊಂದದೆ ಲವಲವಿಕೆಯಿಂದ ಇರಬೇಕು. ಬರುವ ಎಲ್ಲಾ ಸಮಸ್ಯಗಳಿಗೆ ಪರಿಹಾರ ಹುಡುಕುವಂತಹ ಧೈರ್ಯ ಶಾಲಿಗಳಾಗಬೇಕೆಂದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಅಲ್ಲಂ ಗುರುಬಸವರಾಜ ಗಣಿತ ಮತ್ತು ವಿಜ್ಞಾನಗಳಲ್ಲಿ ಹೆಚ್ಚಿನ ಆಸಕ್ತಿಯನ್ನು ಹೊಂದಿದ ವಿದ್ಯಾರ್ಥಿಗಳು ಸುಲಭವಾಗಿ ಇಂಜನೀಯರಿಂಗ್ ಕ್ಷೇತ್ರದಲ್ಲಿ ಹೆಸರುವಾಸಿಯಾಗುವುದು ಖಂಡಿತವೆಂದರು.

ಕಾರ್ಯಕ್ರಮದ ಅಧ್ಯಕ್ಚತೆಯನ್ನು ವಹಿಸಿದ್ದ ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಉಡೇದ್ ಬಸವರಾಜ ಇಂದಿನ ವಿದ್ಯಾರ್ಥಿಗಳು ಶಿಕ್ಷಣ ವ್ಯಾಸಂಗದ ಜೊತೆಗೆ ಸುಸಂಸ್ಕೃತಿಯನ್ನು ಅಳವಡಿಸಿಕೊಳ್ಳಬೇಕಾದ ಅವಶ್ಯಕತೆಯಿದೆ ಎಂದರು.

ಈ ಸಂದರ್ಭದಲ್ಲಿ ಪ್ರಾಂಶುಪಾಲ ಡಾ. ಕುಪ್ಪಗಲ್ ವೀರೇಶ್ , ಉಪಪ್ರಾಂಶುಪಾಲರಾದ ಡಾ. ಟಿ. ಹನುಮಂತರೆಡ್ಡಿ, ಡಾ. ಸವಿತಾ ಸೋನಾಲಿ ಹಾಗೂ ಕಾರ್ಯಕ್ರಮ ಸಂಯೋಜಕರಾದ ಡಾ. ಜೇವರ್ಗಿ ಪಕ್ಕೀರಪ್ಪ, ಡಾ.ಬಿ.ಸುಮಂಗಳ ಮತ್ತು ಎಲ್ಲಾ ವಿಭಾಗಗಳ ಮುಖ್ಯಸ್ಥರು, ಉಪನ್ಯಾಸಕರು, ನೂರಾರು ವಿದ್ಯಾರ್ಥಿ ಭಾಗವಹಿಸಿದ್ದರು.

Leave a Comment