ಅಧ್ಯಕ್ಷೆ ಹೇಮಲತಾ ಪಿ.ಬೂದೆಪ್ಪ ನೇತೃತ್ವದಲ್ಲಿ

 ಕಾಂಗ್ರೆಸ್ ಸಮಾವೇಶಕ್ಕೆ ಭಾರೀ ಜನ
ರಾಯಚೂರು.ಜ.13- ವಾರ್ಡ್ ನಂ. 19ರ ಹರಿಜನವಾಡ ಬಡಾವಣೆಯಿಂದ ಕಾಂಗ್ರೆಸ್ ಪಕ್ಷದ ಬೃಹತ್ ಬಹಿರಂಗ ಸಮಾವೇಶಕ್ಕೆ ನಗರಸಭೆ ಅಧ್ಯಕ್ಷರಾದ ಹೇಮಲತಾ ಪಿ.ಬೂದೆಪ್ಪ ಅವರ ನೇತೃತ್ವದಲ್ಲಿ ಸಾವಿರಕ್ಕೂ ಅಧಿಕ ಕಾರ್ಯಕರ್ತರು ಭಾಗವಹಿಸಿದ್ದರು.
ಬೃಹತ್ ಬಹಿರಂಗ ಸಮಾವೇಶಕ್ಕೆ ತೆರಳುವ ಮುನ್ನ ನಗರದ ಹರಿಜನವಾಡ ಬಡಾವಣೆಯಲ್ಲಿ ಸೇರಿದ ಕಾರ್ಯಕರ್ತರು ಬೃಹತ್ ಮೆರವಣಿಗೆಯೊಂದಿಗೆ ನವಾಬ್ ಗಡ್ಡ, ಸರ್ದಾರ ವಲ್ಲಭಬಾಯಿ ಪಟೇಲ್ ವೃತ್ತ, ಚಂದ್ರಮೌಳೇಶ್ವರ ವೃತ್ತ, ಮಹಾವೀರ ವೃತ್ತ, ಸೂಪರ್ ಮಾರ್ಕೇಟ್ ಹಾಗೂ ಏಕ್ ಮಿನಾರ್ ಮೂಲಕ ಮಹಿಳಾ ಸಮಾಜ ಆವರಣಕ್ಕೆ ತಲುಪಿದರು.
ವಾರ್ಡ್ ನಂ. 19ರ ವ್ಯಾಪ್ತಿಗೊಳಪಡುವ ನವಾಬ್‌ಗಡ್ಡ, ಏಕ್ಬಾಲ್ ನಗರದಿಂದ ಕಾಂಗ್ರೆಸ್ ಸಮಾವೇಶಕ್ಕೆ ಸಾವಿರಕ್ಕೂ ಅಧಿಕ ಜನರು ಭಾಗವಹಿಸಿರುವುದು ವಿಶೇಷವಾಗಿತ್ತು.
ಈ ಸಂದರ್ಭದಲ್ಲಿ ಪಿ.ತೇಜಪ್ಪ, ಪಿ.ಆಶಣ್ಣ, ಬಿ.ಗೋವಿಂದ, ಮಹಿಬೂಬ್ ಪಾಷಾ, ಹೊಟೇಲ್ ಬೋಳಬಂಡಿ, ಪಿ.ಶ್ರವಣಕುಮಾರ, ಅಮರೇಶ, ಹೋಟೆಲ್ ಖಾದರ್, ತಿಮ್ಮಪ್ಪ, ವಾಜೀದ್ ಅಲಿ, ರಾಜು ಸೇರಿದಂತೆ ನೂರಾರು ಮಹಿಳೆಯರು, ಪುರುಷರು, ಯುವಕರು ಉಪಸ್ಥಿತರಿದ್ದರು.

Leave a Comment