ಅಧ್ಯಕ್ಷರಾಗಿ ಪಾಟೀಲ ಅಧಿಕಾರ ಸ್ವೀಕಾರ

ಅಧ್ಯಕ್ಷರಾಗಿ  ಪಾಟೀಲ ಅಧಿಕಾರ ಸ್ವೀಕಾರ
ಹುಬ್ಬಳ್ಳಿ ಸೆ  9 –  ಧಾರವಾಡ ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷರಾಗಿ ಅನಿಲಕುಮಾರ ಪಾಟೀಲ್ ಅಧಿಕಾರ ಸ್ವೀಕರಿಸಿದರು.
ಧಾರವಾಡ ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಸಮಾವೇಶದಲ್ಲಿ  ಪಾಲ್ಗೊಂಡಿದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ  ಈಶ್ವರ ಖಂಡ್ರೆ  ಅವರಿಂದ ಅನಿಲ ಪಾಟೀಲ್ ಅವರು ಅಧಿಕಾರ ವಹಿಸಿಕೊಂಡರು.
ಹಿಂದಿನ ಧಾರವಾಡ ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷರಾಗಿದ್ದ  ವಿ.ಎಚ್. ಮಾಡಳ್ಳಿ ಅವರ ಅಕಾಲಿಕ ನಿಧನದಿಂದ ತೆರವಾಗಿದ್ದ ಸ್ಥಾನವನ್ನು  ಅನಿಲ ಪಾಟೀಲ ಅವರು ವಹಿಸಿಕೊಂಡಿದ್ದಾರೆ.
ಪಕ್ಷದ ಧುರೀಣರಾದ ಎ.ಎಂ. ಹಿಂಡಸಗೇರಿ, ಐ.ಜಿ.ಸನದಿ,  ಅಲ್ತಾಫ್ ಹಳ್ಳೂರ, ವಿಜಯ ಕುಲಕರ್ಣಿ, ಬಂಗಾರೇಶ ಹಿರೇಮಠ ಸೇರಿದಂತೆ  ಇತರ ಪ್ರಮುಖರು ವೇದಿಕೆಯಲ್ಲಿ ಹಾeರಿದ್ದರು.

Leave a Comment