ಅಧ್ಯಕ್ಷರಾಗಿ ಎಂ.ಸಿ.ರವಿಕುಮಾರ್ ಅವಿರೋಧ ಆಯ್ಕೆ

ಕೆ.ಆರ್.ಪೇಟೆ,ಆ.10- ತಾಲೂಕಿನ ಮಾಕವಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಎಂ.ಸಿ.ರವಿಕುಮಾರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಕೃಷ್ಣಮೂರ್ತಿ, ನಿರ್ದೇಶಕರಾಗಿ ಪೋಸ್ಟ್ ರಾಜೇಗೌಡ, ಚಿಕ್ಕೇಗೌಡ, ಗೌರಮ್ಮ, ಸಿಂಗೇಗೌಡ, ಚಲುವಯ್ಯ, ಮಂಜೇಗೌಡ, ಮಮತಾಪರಮೇಶ್, ಎಂ.ಟಿ.ಕುಮಾರ್, ಮಂಜೇಗೌಡ ಅವರುಗಳು ಆಯ್ಕೆಯಾಗಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಎಂ.ಸಿ.ರವಿಕುಮಾರ್ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಕೃಷ್ಣಮೂರ್ತಿ ಹೊರತು ಪಡಿಸಿ ಬೇರೆ ಯಾರೂ ಸಹ ನಾಮಪತ್ರ ಸಲ್ಲಸದ ಕಾರಣ ಚುನಾವಣಾಧಿಕಾರಿಯಾಗಿ ಭಾಗವಹಿಸಿದ್ದ ತಾಲೂಕು ಸಹಕಾರ ಅಭಿವೃದ್ಧಿ ಅಧಿಕಾರಿ ಖಲೀದ್ ಅಹಮದ್ ಅವಿರೋಧ ಆಯ್ಕೆಯನ್ನು ಘೋಷಣೆ ಮಾಡಿದರು.
ನೂತನ ಅಧ್ಯಕ್ಷರು-ಉಪಾಧ್ಯಕ್ಷರು ಮತ್ತು ನಿರ್ದೇಶಕರನ್ನು ಗ್ರಾಮದ ಮುಖಂಡರಾದ ಪಟೇಲ್ ದೇವೇಗೌಡ, ಆರ್. ಮಂಜೇಗೌಡ, ಗ್ರಾಮ ಪಂಚಾಯಿತಿ ಅಧ್ಯಕ್ಷ ಬಲರಾಮೇಗೌಡ, ನಾಗೇಶ್, ರಾಮೇಗೌಡ, ದೇವರಸೇಗೌಡ, ರಮೇಶ್, ಮಂಜೇಗೌಡ, ಪ. ಅರುಣ್, ಕುಮಾರಸ್ವಾಮಿ, ರೈತಸಂಘದ ರವಿ, ಸುರೇಶ್, ಶಿವೇಗೌಡ, ನಿಂಗೇಗೌಡ, ದೇವೇಗೌಡ, ಮರೀಗೌಡ, ನಾಗೇಂದ್ರ, ಆನಂದ್, ಶಿವಪ್ಪನ ರಾಜಣ್ಣ, ಚಂದ್ರಶೆಟ್ಟಿ, ಮನು ಇತರರು ಅಭಿನಂದಿಸಿದರು.

Leave a Comment