ಅಧಿವೇಶನಕ್ಕೆ ಸುದ್ದಿಮಾಧ್ಯಮಗಳ ಕ್ಯಾಮರಾ ನಿರ್ಬಂಧ : ಅಧಿಕೃತ ಆದೇಶ

ಬೆಂಗಳೂರು.ಅ.೯.ನಾಳೆಯಿಂದ ವಿಧಾನಮಂಡಲ ಅಧಿವೇಶನ ಆರಂಭವಾಗುತ್ತಿದ್ದು, ಈ ವೇಳೆ, ಸುದ್ದಿ ಮಾಧ್ಯಮಗಳ ಕ್ಯಾಮರಾಗಳ ಚಿತ್ರೀಕರಣಕ್ಕೆ ನಿರ್ಬಂಧ ವಿಧಿಸಲಾಗಿದೆ.
ಅಲ್ಲದೇ ಸರ್ಕಾರಿ ವಾಹಿನಿ ನೀಡುವ ದೃಶ್ಯಗಳನ್ನು ಬಳಸಿಕೊಳ್ಳುವಂತೆ ಮಾಧ್ಯಮಗಳಿಗೆ ಸೂಚಿಸಲಾಗಿದೆ. ಈ ಕುರಿತು ವಿಧಾನಸಭೆಯ ಸಚಿವಾಲಯದಿಂದ ಅಧಿಕೃತ ಆದೇಶ ಹೊರಡಿಸಲಾಗಿದೆ.
ಇನ್ನು ಅಧಿವೇಶನಕ್ಕೆ ಸುದ್ದಿಮಾಧ್ಯಮಗಳ ಕ್ಯಾಮರಾ ನಿಷೇಧಿಸುವ ಕುರಿತು ಸ್ಪೀಕರ್ ಇಂದು ಹೊರಡಿಸಿದ್ದ ಅಧಿಸೂಚನೆ ಹಿನ್ನೆಲೆ ಪ್ರತಿಪಕ್ಷಗಳಿಂದ ವಿರೋಧ ವ್ಯಕ್ತವಾಗಿತ್ತು. ವಿಧಾನಸಭೆಯ ಸಚಿವಾಲಯದಿಂದ ಆದೇಶ ಹೊರಡಿಸಿದ್ದು, ಖಾಸಗಿ ಸುದ್ದಿವಾಹಿನಿಗಳ ಕ್ಯಾಮರಾಗಳಿಗೆ ಅವಕಾಶ ನಿರಾಕರಿಸಲಾಗಿದೆ. ಸ್ಪೀಕರ್ ಕಚೇರಿಯ ಆದೇಶಕ್ಕೆ ರಾಜ್ಯ ಸರ್ಕಾರ ಮೌನ ವಹಿಸಿದೆ. ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಕೂಡಲೇ ಮಾಧ್ಯಮಗಳಿಗೆ ಮೂಗುದಾರ ಹಾಕುವ ವಿವಾದಾತ್ಮಕ ನಿರ್ಧಾರವನ್ನು ಕೈಗೊಂಡಿದೆ.

Leave a Comment