ಅಧಿವೇಶನಕ್ಕೂ ಮುನ್ನ ಸರ್ವ ಪಕ್ಷಗಳ ಸಭೆ 16ರಂದು

ನವದೆಹಲಿ, ಜೂ 13 – ಹದಿನೇಳನೆಯ ಲೋಕಸಭೆ ಅಧಿವೇಶನ ಆರಂಭವಾಗುವ ಮುನ್ನ ಜೂನ್ 16ರಂದು ಸರ್ವ ಪಕ್ಷಗಳ ಸಭೆ ನಡೆಸಲು ಸರ್ಕಾರ ನಿರ್ಧರಿಸಿದೆ.

ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಅವರು ಜೂನ್ 16ರಂದು ಬೆಳಗ್ಗೆ 11ಕ್ಕೆ ಸರ್ವ ಪಕ್ಷಗಳ ನಾಯಕರ ಸಭೆ ಕರೆದಿದ್ದು, ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಲೋಕಸಭಾ ಅಧಿವೇಶನ ಜೂನ್ 17ರಂದು ಆರಂಭವಾಗಲಿದ್ದು, ಸಂಸತ್ತಿನ ಕಾರ್ಯಕಲಾಪಗಳು ಸುಸೂತ್ರವಾಗಿ ನಡೆಸಲು ಎಲ್ಲಾ ಪಕ್ಷಗಳ ಜೊತೆ ಒಮ್ಮತ ಮೂಡಿಸುವುದು ಅಧಿವೇಶನದ ಮುನ್ನಾ ದಿನ ಕರೆದ ಸಭೆಯ ಉದ್ದೇಶವಾಗಿದೆ.

 

Leave a Comment