ಅಧಿಕಾರ ಹೋದರೂ ಚಿಂತೆಯಿಲ್ಲ ಜಿಂದಾಲ್ ಅನ್ಯಾಯದ ವಿರುದ್ಧ ಹೋರಾಟ ನಿಲ್ಲಲ್ಲ:ಆನಂದ್ ಸಿಂಗ್

ಬಳ್ಳಾರಿ, ಜೂ.17: ಅಧಿಕಾರ ಇರುತ್ತೆ ಹೋಗುತ್ತೆ ನಾನು ಅಧಿಕಾರಕ್ಕಾಗಿ ಅಂಟಿಕೊಂಡು ಕುಳಿತುಕೊಳ್ಳಲ್ಲ. ಅಧಿಕಾರ ಹೋದರೂ ಚಿಂತೆ ಇಲ್ಲ. ಜಿಂದಾಲ್ ಅನ್ಯಾಯದ ವಿರುದ್ಧ ನನ್ನ ಹೋರಾಟ ನಿಲ್ಲಲ್ಲ ಎಂದು ವಿಜಯನಗರ ಶಾಸಕ ಆನಂದ್ ಸಿಂಗ್ ಹೇಳಿದ್ದಾರೆ.

ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ, ಜಿಂದಾಲ್ ಬಗ್ಗೆ ನನಗೆ ವಯಕ್ತಿಕವಾಗಿ ಯಾವುದೇ ದ್ವೇಷ ಇಲ್ಲ. ಜನ ಸಾಮಾನ್ಯರಿಗೆ ಅನ್ಯಾಯವಾಗುತ್ತಿದೆ ಎನ್ನುವ ಕಾರಣಕ್ಕೆ ನಾನು ಈಗ ಪಕ್ಷಾತೀತವಾಗಿ, ಪ್ರತಿಷ್ಠೆಯನ್ನು ಬದಿಗಿಟ್ಟು ಹೋರಾಟಕ್ಕೆ ಮುಂದಾಗಿರುವೆ. ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳು ಈ ಹೋರಾಟದಲ್ಲಿ ಪಾಲ್ಗೊಳ್ಳಬೇಕೆಂದು ಕೋರುವೆ.

ಕಾರ್ಖಾನೆಗಳು ಬೇಕು ಆದರೆ ಸುತ್ತ ಮುತ್ತಲಿನ ಜನಗಳನ್ನು ನಿರ್ಲಕ್ಷಿಸಬಾರದು, ಸರ್ಕಾರ ಜಮೀನು ಮಾರಾಟ ಮಾಡುವುದು ಬೇಡ. ಲೀಜ್ ನ್ನು ಮುಂದುವರಿಸಲಿ ಜಿಲ್ಲೆಯ ಕೆಲವರು ಜಿಂದಾಲ್ ಪರ ಬ್ಯಾಟಿಂಗ್ ಮಾಡುತ್ತಿರುವುದು ಅವರಿಗೆ ಬಿಟ್ಟ ವಿಚಾರ. ನಾನು ಸ್ಪರ್ಧಿ ಅಲ್ಲ ನನ್ನ ಬೇಡಿಕೆ ಇಷ್ಟೇ. ಜಿಂದಾಲ್ ಈ ವರೆಗೆ ಪಡೆದುಕೊಂಡಿರುವ ಜಮೀನು ಎಷ್ಟು ಅದರಲ್ಲಿ ಎಷ್ಟು ಬಳಕೆ ಮಾಡಿಕೊಂಡಿದೆ. ಎಷ್ಟು ಜನ ಜಿಲ್ಲೆಯ, ರಾಜ್ಯದ ಕನ್ನಡಿಗರಿಗೆ ಯಾವ ದರ್ಜೆಯ ಹುದ್ದೆಗಳನ್ನು ನೀಡಿದೆ ಎಂಬುದನ್ನು ಬಹಿರಂಗ ಪಡಿಸಲಿ ಎಂದರು.

ಸರ್ಕಾರ ತನ್ನ ನಿರ್ಧಾರ ಬದಲಿಸಬೇಕು, ಈ ಕುರಿತು ಸಚಿವರಾದ ಕೆ.ಜೆ.ಜಾರ್ಜ್, ಕೃಷ್ಣೇ ಬೈರೇಗೌಡ, ಶಾಸಕ ಹೆಚ್.ಕೆ.ಪಾಟೀಲ್ ಅವರನ್ನೊಳಗೊಂಡು ರಚಿಸಿರುವ ಸದನದ ಉಪಸಮಿತಿ ಈ ಜಿಲ್ಲೆಗೆ ಬಂದು ಸ್ಥಳೀಯ ಜನರನ್ನು ಭೇಟಿ ಮಾಡಿ ಅಹವಾಲು ಸ್ವೀಕರಿಸಬೇಕೆ ಹೊರತು ವಿಧಾನಸೌಧದಲ್ಲಿ ಕುಳಿತುಕೊಳ್ಳಬಾರದೆಂದರು.
ವರೆಗೆ ಜಿಂದಾಲ್ ನಿಂದ ಆದ ಅನ್ಯಾಯ, ಪರಿಸರಕ್ಕೆ ಹಾನಿ ಕುರಿತು ನಡೆದ ಹೋರಾಟಗಳಲ್ಲಿ ಏಕೆ ನೀವು ಬರಲಿಲ್ಲ ಎಂಬ ಸುದ್ದಿಗಾರರ ಪ್ರಶ್ನೆಗೆ ನನ್ನ ಗಮನಕ್ಕಿರಲಿಲ್ಲ. ಧ್ವನಿ ಎತ್ತಲು ನನಗೆ ಸ್ವತಂತ್ರ ಇದೆ.ಕಾರ್ಖಾನೆಗೆಂದುಜಮೀನು ಪಡೆದು ಲ್ಯಾಂಡ್ ಬ್ಯಾಂಕ್ ಮಾಡಿ ರಿಯಲ್ ಎಸ್ಟೆಟ್ ಮಾಡಲು ಬಿಡುವುದಿಲ್ಲ ಎಂದರು.

ಒಂದು ರೀತಿ ಧ್ವನಿ ಎತ್ತುವವರನ್ನು ನಿಯಂತ್ರಿಸುವ ಮೂಲಕ ರಿಪಬ್ಲಿಕ್ ಆಫ್ ಜಿಂದಾಲ್ ಆಗುತ್ತಿದೆಂದರು.

ದುರಾದೃಷ್ಟ
ಸಚಿವರೂ ಆಗಿರುವ ಸ್ಥಳೀಯ ಶಾಸಕ ಈ.ತುಕರಾಂ ಅವರು, ಜಿಂದಾಲ್ ನಿಂದ ಜನತೆಗೆ ಆಗುವ ಅನ್ಯಾಯಗಳ ಬಗ್ಗೆ ಧ್ವನಿ ಎತ್ತಬೇಕು, ದುರಾದೃಷ್ಟವಶಾತ್ ಆ ಕೆಲಸ ಆಗಿಲ್ಲ. ನಾನಂತು ಬಿಡಲ್ಲ.

ತುಕರಾಂ ಅವರು ಮಾಧ್ಯಮಗಳಲ್ಲಿ ಆನಂದ್ ಸಿಂಗ್ ಅವರು ಬರಿ ಜಿಂದಾಲ್ ಗೆ ಲೆಟರ್ ಕೊಟ್ಟರೆ ಸಾಕಾಗಲ್ಲ, ಖುದ್ದಾಗಿ ಹೋಗಬೇಕೆಂದಿದ್ದಾರೆ. ನಾನೇನು ಜಿಂದಾಲ್ ನಿಂದ ಕಾಂಟ್ರಕ್ಟ್ ಕೇಳಲ್ಲ ಜನರಿಗೆ ಸಹಾಯ ಮಾಡಿ ಉದ್ಯೋಗ ನೀಡಿ ಎಂದು ಹೇಳಿರುವೆ, ನೀಡದಿದ್ದರೆ ಅವರ ಕಾರ್ಖಾನೆಯಲ್ಲಿ ಕೌಂಟರ್ ತೆರೆದು ಕುಳಿತುಕೊಳ್ಳಬೇಕೆ ಎಂದರು.

ಯಾವುದೋ ಒತ್ತಡಕ್ಕೆ ಒಳಗಾಗಿ ತುಕರಾಂ ಅವರು ಹಾಗೆ ಹೇಳಿರಬೇಕು. ಮೊದಲು ಹೆಚ್ಚಿ ಸಮಸ್ಯೆಯಾಗಿರುವುದು ಅವರ ಕ್ಷೇತ್ರದ ಜನರಿಗೆ ಎಂಬುದನ್ನು ತಿಳಿಯಲಿ, ಮೊದಲು ಅವರೇ ಧ್ವನಿ ಎತ್ತಬೇಕೆಂದರು. ಏನೇ ಆಗಲಿ ನಾನು ಮುಂದೆ ಇಟ್ಟ ಹೆಜ್ಜೆ ಹಿಂದೆ ಇಡಲ್ಲ, ಜನಬೇಡ ಎಂದರೆ ಮನೆಯಲ್ಲಿ ಕೂರುತ್ತೇನೆ, ಜನರಿಗಾಗಿ ಹೋರಾಟ ಮಾಡುವೆ ಎಂದರು.

Leave a Comment