ಅಧಿಕಾರಿಗಳ ದಾಳಿ: 17.4 ಲಕ್ಷ ಪತ್ತೆ

ತುಮಕೂರು, ಏ. ೧೩- ಚುನಾವಣೆ ನಿಮಿತ್ತ ಹಣ ಹಂಚಲು ಭಾರಿ ಪ್ರಮಾಣದಲ್ಲಿ ಹಣ ಸಂಗ್ರಹಿಸಿಡಲಾಗಿದೆ ಎಂದು ದೂರಿನ ಮೇರೆಗೆ ನಗರದಲ್ಲಿ ಎರಡು ಮನೆಗಳ ಮೇಲೆ ಚುನಾವಣಾಧಿಕಾರಿಗಳ ತಂಡ ಹಾಗೂ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ತಂಡ ನಡೆಸಿದ ದಾಳಿ ವೇಳೆ ರೂ 17.4 ಲಕ್ಷ ಪತ್ತೆಯಾಗಿದೆ.

‘ದೂರು ಬಂದ ಪ್ರಯುಕ್ತ ವಿನಾಯಕನಗರದ ವಿಶ್ವನಾಥ್ ಹಾಗೂ ಗಾಂಧಿನಗರದ ಅರುಣ್‌ಕುಮಾರ್ ಎಂಬುವರ ಮನೆಗಳಲ್ಲಿ ಪರಿಶೀಲನೆ ನಡೆಸಲಾಯಿತು. ವಿಶ್ವನಾಥ್ ಅವರ ಮನೆಯಲ್ಲಿ ಏನೂ ಪತ್ತೆಯಾಗಿಲ್ಲ. ಅರುಣ್‌ಕುಮಾರ್ ಅವರ ಮನೆಯಲ್ಲಿ ರೂ 17.4 ಲಕ್ಷ ಮೊತ್ತ ಪತ್ತೆಯಾಗಿದೆ.

ಈ ಮೊತ್ತದ ಬಗ್ಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಖಲಾತಿ ಪರಿಶೀಲನೆ ನಡೆಸುತ್ತಿದ್ದಾರೆ. ಬಳಿಕ ಪೂರ್ಣ ವಿವರ ನೀಡಲಿದ್ದಾರೆ ಎಂದು ಚುನಾವಣಾಧಿಕಾರಿ ಹಾಗೂ ಉಪವಿಭಾಗಾಧಿಕಾರಿ ಸೋಮಶೇಖರ್ ತಿಳಿಸಿದರು.

Leave a Comment