ಅಧಿಕಾರಿಗಳಿಗೆ ಧಮ್ಕಿ ಹಾಕಿದ ಖದೀಮನ ಬಂಧನ

ಹುಣಸೂರು. ಜೂ.19. ಹಿರಿಯ ಅಧಿಕಾರಿ ಹೆಸರಲ್ಲಿ ಸ್ಥಳೀಯ ಹಿರಿಯ ಅಧಿಕಾರಿಗಳ ಮೋಬೈಲ್‍ಗೆ ಕರೆ ಮಾಡಿ ಬೆದರಿಸಿ ವಂಚಿಸುತ್ತಿದ್ದ ಖದೀಮನನ್ನು ನಗರ ಠಾಣೆ ಪೋಲಿಸರು ಬಂಧಿಸಿ ನ್ಯಾಯಾಂಗ ಬಂಧನಕೊಪ್ಪಿಸಿರುವ ಘಟನೆ ನಿನ್ನೆ ನಡೆದಿದೆ.
ತಾಲ್ಲೂಕಿನ ಕರಣ್ಣ ಕುಪ್ಪೆ ಪಂಚಾಯ್ತಿ ಬೀರತಮ್ಮನ ಹಾಡಿಯ ನಿವಾಸಿ ರತ್ನಗಿರಿ ಅಲಿಯಾಸ್‍ಗಿರೀಶ ಎಂಬುವವನೆ ಬಂಧಿತ ಆರೋಪಿಯಾಗಿದ್ದಾನೆ.
ನಗರದ ಸರ್ಕಾರೇತರ ಸಂಸ್ಥೆಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದ ಗಿರೀಶ, ಕೆಲ ದಿನಗಳಿಂದ ಅಡಿಷನಲ್ ಡಿಸಿ ಸುಧಾ ಎನ್ನುವ ಹೆಸರಲ್ಲಿ ಸ್ಥಳೀಯ ಅಧಿಕಾರಿಗಳಿಗೆ ಕರೆ ಮಾಡಿ ನಾನು ಕಳುಹಿಸುವವರಿಗೆ ಮನೆ ಸೇರಿದಂತೆ ವಿವಿಧ ಸವಲತ್ತುಗಳನ್ನು ನೀಡಬೇಕೆಂದು ಧಮ್ಕಿ ಹಾಕುತ್ತಿದ ಎನ್ನಲಾಗಿದೆ.
ಈತನ ಮೇಲೆ ಅನುಮಾನಗೊಂಡು ಮೋಬೈಲ್ ಕರೆಗಳ ಪರೀಶಿಲನೆ ನಡೆಸಿದ ನಗರ ಪೋಲಿಸರು ಈತನನ್ನು ಬಂಧಿಸಿ ಈತನ ಹಿಂದೆ ಬೇರೆ ವೈಕ್ತಿಗಳ ಕೈವಾಡವಿರುವ ಸಂಶಯದ ಮೇಲೆ ತನಿಖೆ ನಡೆಸಿ ನ್ಯಾಯಾಂಗ ಬಂಧನ ಕೊಪ್ಪಿಸಿದ್ದಾರೆ.

Leave a Comment