ಅದ್ಧೂರಿಯಾಗಿ ಶ್ರೀ ದ್ಯಾವಮ್ಮ ದೇವಿಯ ಜಾತ್ರಾ ಮಹೋತ್ಸವ

ರಾಯಚೂರು.ಫೆ.19- ಸಿರವಾರ ತಾಲೂಕಿನ ಮಾಚನೂರು ಗ್ರಾಮದ ಗ್ರಾಮ ದೇವತೆ ಶ್ರೀ ದ್ಯಾವಮ್ಮ ದೇವಿಯ ಜಾತ್ರಾ ಮಹೋತ್ಸವ ನಿನ್ನೆ ರಾತ್ರಿಯಿಂದ ಸಕಲ ಕುಂಭಮೇಳದೊಂದಿಗೆ ಅದ್ಧೂರಿಯಾಗಿ ಜರುಗಿತು.
ಗ್ರಾಮದ ಯುವಕರು ದೇವಿಯ ರಥವನ್ನು ಬೀದಿಗಳಲ್ಲಿ ಮೆರವಣಿಗೆ ನಡೆಸಿ, ರಾತ್ರಿ 12 ಗಂಟೆಯವರೆಗೂ ದೇವಿಯ ರಥವನ್ನು ಗ್ರಾಮದ ಅದೇ ಕಟ್ಟೆಯ ಮುಂಭಾಗದಲ್ಲಿ ಕೂರಿಸಿ ವಿವಿಧ ಪೂಜೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಬೆಳಗ್ಗೆ 6 ಗಂಟೆಯವರೆಗೆ ಸೇರಿಸಿದರು. ಬಳಿಗ್ಗೆ 6 ಗಂಟೆಯಿಂದ ಪುನಃ ದೇವಿಗೆ ವಿಶೇಷ ಪೂಜೆ ಪುನಸ್ಕಾರಗಳೊಂದಿಗೆ ನೆರವೇರಿಸಿದರು. ವಿವಿಧ ಗ್ರಾಮದಿಂದ ಆಗಮಿಸಿದ ಭಕ್ತರು ದೇವಿಯ ದರ್ಶನ ಪಡೆದು ಪುನೀತರಾದರು .
ಈ ಸಂದರ್ಭದಲ್ಲಿ ಅರ್ಚಕ ಬಸವರಾಜ್ ವಿಶ್ವಕರ್ಮ, ಎಂ.ಪಿ.ಬಸನಗೌಡ ಪಾಟೀಲ್, ಅಂಬಣ್ಣ ಕಡದೊಡ್ಡಿ, ರಾಜಶೇಖರ್ ಪಾಟೀಲ್, ಮಲ್ಲಿಕಾರ್ಜುನ್ ಪಾಟೀಲ್, ಬಸವರಾಜ್ ಸ್ವಾಮಿ ಸ್ಥಾವರಮಠ, ರಾಜಶೇಖರ್ ಪೋಲೀಸ್ ಪಾಟೀಲ್, ಸಿದ್ದನಗೌಡ ಪೊಲೀಸ್ ಪಾಟೀಲ್ , ಸಿದ್ದರಾಮೇಶ್ ,ಮಂಜುನಾಥ್ ,ವೀರನಗೌಡ ,ಕೇದಾರನಾಥ್, ಶರಣಬಸವ, ರಾಚಯ್ಯಸ್ವಾಮಿ, ವೀರೇಶ್ ಸಜ್ಜನ, ಮಾರ್ತಾಂಡ ಸ್ವಾಮಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Leave a Comment