ಅದ್ದೂರಿ ಗಣೇಶೋತ್ಸವಕ್ಕೆ ಸಿದ್ಧತೆ

ಬೆಂಗಳೂರು, ಸೆ. ೧೧- ರಾಜಾಜಿನಗರ ಮಿಲ್ಕ್ ಕಾಲೋನಿಯ ಸ್ವಸ್ತಿಕ್ ಯುವಕರ ಸಂಘ 33ನೇ ವರ್ಷದ ಗಣೇಶೋತ್ಸವವನನ್ನು ಅದ್ದೂರಿಯಾಗಿ ಆಚರಿಸಲು ನಿರ್ಧರಿಸಿದೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದ ಸುಬ್ರಮಣ್ಯ ನಗರದ ಪಾಲಿಕೆ ಸದಸ್ಯ ಹೆಚ್. ಮಂಜುನಾಥ್ ಸಮಾಜದಲ್ಲಿ ಧಾರ್ಮಿಕ, ಸೌಹಾರ್ದ ಹಾಗೂ ಜಾಗೃತಿ ಮೂಡಿಸಲು 33 ವರ್ಷಗಳಿಂದ ಗಣೇಶೋತ್ಸವ ಆಚರಿಸಿಕೊಂಡು ಬರಲಾಗುತ್ತಿದೆ ಎಂದರು.
ಸೆ. 13 ರಿಂದ 17ರವರೆಗೆ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಆಹಾರ ಉತ್ಸವ, ಸಿಡಿಮದ್ದು ಪ್ರದರ್ಶನ, ಹೆಸರಾಂತ ಗಾಯಕ ರಾಜೇಶ್ ಕೃಷ್ಣನ್ ಸೇರಿದಂತೆ ಪ್ರಖ್ಯಾತ ಗಾಯಕರಿಂದ ಸುಗಮ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ರಾಜ್ಯದ ಕಲೆ, ಸಂಸ್ಕೃತಿ ಮೂಡಿಸುವ ಉದ್ದೇಶದಿಂದ ಪ್ರತಿವರ್ಷ ನಾಡಿನ ಹೆಸರಾಂತ ಐತಿಹಾಸಿಕ ದೇವಾಲಯಗಳ ಪ್ರತಿರೂಪದ ಮಂಟಪ ನಿರ್ಮಿಸಿ 5.5 ಅಡಿ ಎತ್ತರದ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುತ್ತದೆ.
ಈ ಬಾರಿ ಚಿಕ್ಕಮಗಳೂರು ಜಿಲ್ಲೆಯ ಇತಿಹಾಸ ಪ್ರಸಿದ್ಧ ಅಮೃತೇಶ್ವರ ದೇವಾಲಯದ ಪ್ರತಿರೂಪ ನಿರ್ಮಿಸಿ ಅಮೆರಿಕನ ಡೈಮೆಂಡ್ ಹಾಗೂ ನವರತ್ನ ಹರಳುಗಳಿಂದ ಸಿಂಗಾರಗೊಳಿಸಲಾಗುವುದು ಎಂದರು.

Leave a Comment