ಅತ್ಯುತ್ತಮ ಬಜೆಟ್ : ಎ.ಪಾಂಡುರಂಗ

ಹಿರಿಯೂರು.ಫೆ.9: ಕಾಂಗ್ರೇಸ್ ಜೆ.ಡಿ.ಎಸ್ ಮೈತ್ರಿ ಸರ್ಕಾರದ ಜನಪ್ರಿಯ ಮುಖ್ಯಮಂತ್ರಿಯವರಾದ ಹೆಚ್.ಡಿ.ಕುಮಾರಸ್ವಾಮಿಯವರು ದೂರದೃಷ್ಟಿಯಿಂದ ಅತ್ಯುತ್ತಮ ಬಜೆಟ್ ಮಂಡಿಸಿದ್ದಾರೆ ಇದು ಸ್ವಾಗತಾರ್ಹ ಎಂದು ರಾಜ್ಯ ಪ್ರಧಾನ ಕಾರ್ಯದರ್ಶಿ ಯುವ ಜನತಾದಳ ಜಾತ್ಯಾತೀತ ಹಿರಿಯೂರಿನ ಎ.ಪಾಂಡುರಂಗ ತಿಳಿಸಿದ್ದಾರೆ. ಬಜೆಟ್‍ನಲ್ಲಿ ರಾಜ್ಯದ ಎಲ್ಲಾ ಭಾಗಗಳಿಗೂ ಆದ್ಯತೆ, ನಾಡಿನ ಪ್ರತಿಯೊಬ್ಬರೂ ಸ್ವಾಭಿಮಾನದಿಂದ ಬದುಕಲು ಸಹಕಾರ, ಕೃಷಿ, ತೋಟಗಾರಿಕೆ, ರೇಷ್ಮೆಗೆ ಆದ್ಯತೆ, ಸಿರಿಯೋಜನೆ, ನೀರಾವರಿ ಯೋಜನೆಗಳಿಗೆ ಆದ್ಯತೆ, ಶಿಕ್ಷಣಕ್ಕೆ ಆದ್ಯತೆ, ಉದ್ಯೋಗ ಸೃಷ್ಟಿ ಬೀದಿ ಬದಿ ವ್ಯಾಪಾರಿಗಳಿಗೆ ಬಡ್ಡಿ ರಹಿತ ಸಾಲ ಸೌಲಭ್ಯ, ಕುಡಿಯುವ ನೀರು, ವಿಜ್ಞಾನ ತಂತ್ರಜ್ಞಾನ, ಮೂಲಭೂತ ಸೌಕರ್ಯ, ಮಾತೃsಶ್ರೀ ಹೆಚ್ಚಳ, ಸಂಧ್ಯಾ ಸುರಕ್ಷಾ ಹೆಚ್ಚಳ ಮಾಡುವ ಮೂಲಕ ಬಡ ಹಿರಿಯ ನಾಗರೀಕರಿಗೆ ಅನುಕೂಲ ಹೀಗೆ ರಾಜ್ಯದ ಅಭಿವೃದ್ಧಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಅನೇಕ ಯೋಜನೆಗಳ ಮೂಲಕ ನಾಡಿನ ಅಭಿವೃದ್ಧಿಗೆ ನೀಡಿರುವ ಅತ್ಯುತ್ತಮ ಬಜೆಟ್ ಇದಾಗಿದೆ ಎಂದು ತಿಳಿಸಿರುತ್ತಾರೆ.

Leave a Comment