ಅತ್ಯಾಧುನಿಕ ಕ್ಷಿಪಣಿ ತಯಾರಿಕೆಗೆ ಮುಂದಾದ ಡಿಆರ್‌ಡಿಓ

ನವದೆಹಲಿ ಅ.೨೧ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ( ಡಿಆರ್‌ಡಿಓ) ಮುಂದಿನ ತಲೆಮಾರಿನ ಹೈಪರ್‌ಸಾನಿಕ್ ಶಸ್ತ್ರಾಸ್ರ್ರಗಳ ಅಭಿವೃದ್ಧಿ ತಂತ್ರಜ್ಞಾನವನ್ನು ಕೈಗೆತ್ತಿಕೊಂಡಿದೆ.
ಹೈಪರ್‌ಸಾನಿಕ್ ತಂತ್ರಜ್ಞಾನದಲ್ಲಿ ತಯಾರಾಗುವ ಕ್ಷಿಪಣಿಗಳು ಶಬ್ದವೇಗಕ್ಕಿಂತ ಐದುಪಟ್ಟು ಹೆಚ್ಚಿನ ವೇಗ ದಲ್ಲಿ ಸಾಗಬಲ್ಲವು. ಈ ವೇಗದಲ್ಲಿ ಸಾಗುವುದರಿಂದ ಸದ್ಯದಲ್ಲಿ ಸೂಪರ್ ಸಾನಿಕ್ ವೇಗ ಹೊಂದಿರುವ ಬ್ಯಾಲಸ್ಟಿಕ್ ಮಿಸೈಲ್ ಕ್ಷಿಪಣಿ ನಿರೋಧಕ ವ್ಯವಸ್ಥೆಯ ಕಣ್ಣುತಪ್ಪಿಸಿ ಶತ್ರು ಗುರಿಗಳನ್ನು ನಿಖರವಾಗಿ ಭೇದಿಸಬಲ್ಲವು.
ಇಂತಹ ತಂತ್ರಜ್ಞಾನದಿಂದ ಕೂಡಿದ ಶಸ್ತ್ರಾಸ್ತ್ರಗಳು ಶೀಘ್ರದಲ್ಲಿಯೇ ಭಾರತೀಯ ಸಶಸ್ತ್ರ ಪಡೆಗಳ ಕೈಸೇರಲಿವೆ ಎಂದು ರಕ್ಷಣಾ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.
ಈಗಾಗಲೇ ಹೈಪರ್ ಸಾನಿಕ್ ಶಸ್ತ್ತಾಸ್ತ್ರಗಳ ತಂತ್ರಜ್ಞಾನ ಅಭಿವೃದ್ಧಿಯಲ್ಲಿ ಜಾಗತಿಕವಾಗಿ ಸೇನಾ ಬಲಾಢ್ಯ ದೇಶಗಳಾದ ರಷ್ಯಾ, ಚೀನಾ, ಅಮೇರಿಕ ತೊಡಗಿವೆ ಅತಿವೇಗದಲ್ಲಿ ಬದಲಾಗುತ್ತಿರುವ ಶಸ್ತ್ರಾಸ್ತ್ರಗಳ ತಂತ್ರಜ್ಞಾನ, ಅತ್ಯಾಧುನಿಕ ವಾಗಿ ತಯಾರಾಗುತ್ತಿರುವ ಶಸ್ತ್ರಾಸ್ತ್ರಗಳ ಸಂದರ್ಭದಲ್ಲಿ ಭಾರತವು ಅಂತಹ ತಂತ್ರಜ್ಞಾನವನ್ನು ಅಭಿವೃದ್ದಿ ಪಡಿಸಿಕೊಳ್ಳಬೇಕಿದೆ. ಅದು ಅನಿವಾರ್ಯವೂ ಹೌದು ಎಂದು ಹೆಸರು ಬಹಿರಂಗಪಡಿಸದ ರಕ್ಷಣಾ ಇಲಖೆ ಅಧಿಕಾರಿಗಳು ಹೇಳಿದ್ದಾರೆ.
ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯಲ್ಲಿ ಸೂಪರ್ ಸಾನಿಕ್ ತಂತ್ರಜ್ಞಾನ ಶಸ್ತ್ರಾಸ್ತ್ರಗಳ ತಯಾರಿಕೆಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಶೀಘ್ರದಲ್ಲಿಯೇ ಚಾಲನೆ ನೀಡಲಿದ್ದಾರೆ ಎಂದು ಡಿಆರ್‌ಡಿಓ ಹೇಳಿದೆ.
ಮೇಕ್ ಇನ್ ಇಂಡಿಯಾ ಅಡಿಯಲ್ಲಿ ದೇಶೀಯವಾಗಿಯೇ ಈ ತಂತ್ರಜ್ಞಾನದ ಶಸ್ತ್ರಾಸ್ತ್ರಗಳ ತಯಾರಿಕೆಯಲ್ಲಿ, ರಕ್ಷಣಾ ಸಲಕರಣೆಗಳ ಅಭಿವೃದ್ಧಿಯಲ್ಲಿ ಪಾಲುಗೊಂಡಿರುವ ತನ್ನ ಇತರೆ ತಯಾರಿಕಾ ಸಂಸ್ಥೆಗಳ ಸಹಕಾರವನ್ನು ಪಡೆಯುವುದಾಗಿ ಡಿಆರ್‌ಡಿಒ ಅಧ್ಯಕ್ಷ ಜಿ.ಸತೀಶ್ ರೆಡ್ಡಿ ಹೇಳಿದ್ದಾರೆ.

Leave a Comment