ಅತ್ಯಾಚಾರಿ ಬಾಲಕಿ ತಂದೆ ವಿಷ ಸೇವಿಸಿ ಆತ್ಮಹತ್ಯೆ.

ಸಿಂಧನೂರು.ಫೆ.03- ಅತ್ಯಾಚಾರಕ್ಕೊಳಗಾದ ಸಿದ್ರಾಂಪುರ ಗ್ರಾಮದ ಬಾಲಕಿಯ ತಂದೆ ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಜರುಗಿದೆ.
‌ತಾಲೂಕಿನ ಸಿದ್ರಾಂಪುರ ಗ್ರಾಮದ ಆಂಜನೇಯನ ಮಗಳು ಮೊರಾರ್ಜಿ ಶಾಲೆಯಲ್ಲಿ 6 ನೇ ತರಗತಿ ಅಭ್ಯಾಸ ಮಾಡುತ್ತಿದ್ದು, ತನ್ನ ಮಗಳನ್ನು ಆಂಜನೇಯ ಸಿದ್ರಾಂಪುರ ಗ್ರಾಮದ ತನ್ನ ಮನೆಗೆ ಕರೆದುಕೊಂಡು ಹೋಗುವಾಗ ಬಾಲಕಿ ಮೇಲೆ ಅತ್ಯಾಚಾರ ನಡೆಸಿದ ಆರೋಪಿಯ ಬಂಧನಕ್ಕಾಗಿ ಹಲವಾರು ಸಂಘಟನೆಗಳು ಪ್ರತಿಭಟನೆ ನಡೆಸಿ ರಾಜ್ಯಾದ್ಯಂತ ಸುದ್ದಿಯಾಗಿತ್ತು. ಆದರೂ ಆರೋಪಿಯ ಸುಳಿವು ಇಲ್ಲಿತನಕ ಸಿಕ್ಕಿಲ್ಲ.
ಆರೋಪಿಯನ್ನು ಹಿಡಿಯಲು ಗ್ರಾಮೀಣ ಠಾಣೆಯ ಪಿಎಸ್ಐ ರಾಘವೇಂದ್ರ ಹಗಲಿರುಳು ಹುಡುಕಾಡುತ್ತಿದ್ದರೂ ಸಹ ಆರೋಪಿ ಸಿಕ್ಕಿರುವುದಿಲ್ಲ. ಆರೋಪಿ ಬಗ್ಗೆ ಸುಳಿವು ನೀಡುವಂತೆ ಪೋಲಿಸರು ಆಂಜನೇಯನನ್ನು ವಿನಂತಿಸಿದರೂ ಸಹ ಸರಿಯಾಗಿ ಸ್ಪಂದಿಸದೆ ಪೋಲಿಸರ ಕಾರ್ಯಚರಣೆಗೆ ಅಡ್ಡಿಯಾಗಿದ್ದ ಆಂಜನೇಯ ಫೆ.02 ರಂದು ಬೆಳೆಗ್ಗೆ ಮನೆಯಲ್ಲಿ ವಿಷಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಕುರಿತು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆಂಜನೇಯ ಸಾವಿನ ಬಗ್ಗೆ ಸಾರ್ವಜನಿಕರಲ್ಲಿ ಅನುಮಾನ ಹುಟ್ಟಿಕೊಂಡಿದೆ.

Leave a Comment