ಅತ್ಯಾಚಾರಿಯಿಂದ ಬಾಲಕಿ ಮೇಲೆ ಪಂಚಾಯ್ತಿ ಸಭೆಯಲ್ಲೇ ಹಲ್ಲೆ

ರಾಯ್ಪುರ,ಸೆ.೧೨- ಛತ್ತೀಸ್‌ಗಡದ ಕಂಕೇರ್ ಜಿಲ್ಲೆಯಲ್ಲಿ ಅಪ್ರಾಪ್ತ ಬಾಲಕಿ ತನ್ನ ಮೇಲೆ ಅತ್ಯಾಚಾರವಾಗಿರುವ ಬಗ್ಗೆ ವ್ಯಕ್ತಿಯ ವಿರುದ್ಧ ದೂರು ನೀಡಿದ್ದು, ಆಕೆಯ ಮೇಲೆ ಗ್ರಾಮಸ್ಥರ ಸಮ್ಮುಖದಲ್ಲೇ ಹಲ್ಲೆ ನಡೆಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಅತ್ಯಾಚಾರ ಕುರಿತು ಗ್ರಾಮದಲ್ಲಿ ಏರ್ಪಡಿಸಿದ್ದ ನ್ಯಾಯ-ತೀರ್ಮಾನ ಸಭೆಯಲ್ಲಿ ಆರೋಪಿ ವ್ಯಕ್ತಿ 16 ವರ್ಷದ ಸಂತ್ರಸ್ತ ಯುವತಿಗೆ ಥಳಿಸಿದ ವಿಡಿಯೋ ವೈರಲ್ ಆಗಿದೆ, ಇದೇ ಸಭೆಯಲ್ಲಿ ಆರೋಪಿಗೂ ಥಳಿಸಿದ್ದಾರೆ. ಈ ಘಟನೆಯು ಸೆ.೯ರಂದು ಯುವತಿ ದೂರು ದಾಖಲಿಸುವ ಮುನ್ನ ನಡೆದ ಘಟನೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

65 ವರ್ಷದ ನಿರಶು ಬಿಸ್ವಾಸ್ ಎಂಬ ಆರೋಪಿ 16 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಮಾಡಿ ಆಕೆಯನ್ನು ಗರ್ಭಿಣಿ ಮಾಡಿದ ಆರೋಪದ ಮೇಲೆ ಬಾಲಕಿಯ ಪೋಷಕರು ಸೆ.೯ರಂದು ಪೊಲೀಸರಿಗೆ ದೂರು ನೀಡಿದ್ದರು ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರ ಜೈಸ್ವಾಲ್ ತಿಳಿಸಿದ್ದಾರೆ.

ಬಾಲಕಿಯ ಪ್ರಕಾರ ಮೂರು ತಿಂಗಳ ಹಿಂದೆ ತನ್ನ ಮೇಲೆ ಅತ್ಯಾಚಾರ ನಡೆದಿದ್ದು, ತನ್ನ ತಾಯಿಗೆ ಸೆ.8ರಂದು ತಿಳಿಸಿದ್ದಾರೆ. ಮರುದಿನವೇ ಈ ಕುರಿತು ಗ್ರಾಮದಲ್ಲಿ ಸಭೆ ನಡೆಸಲಾಗಿದೆ. ನಂತರ ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಆರೋಪಿಯ ವಿರುದ್ಧ ಪೋಸ್ಕೋ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಅಂದೇ ಆತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Leave a Comment