ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಮನವಿ

ಧಾರವಾಡ, ಡಿ 3-ಹೈದ್ರಾಬಾದನಲ್ಲಿ ಪಶುವೈದ್ಯೆ ಪ್ರಿಯಾಂಕಾ ರೆಡ್ಡಿ ಮೇಲೆ ಅತ್ಯಾಚಾರ ಮತ್ತು ಕೊಲೆ ಮಾಡಿದ ಅಪರಾಧಿಗಳಿಗೆ ತಕ್ಷಣವೇ ಮರಣದಂಡನೆ ವಿಧಿಸಬೇಕೆಂದು ಆಗ್ರಹಿಸಿ ನಗರದ ಅಪರ ಜಿಲ್ಲಾಧಿಕಾರಿ ಅವರಿಗೆ ಧಾರವಾಡ ಕರೋಕೆ ತರಬೇತಿ ಕೇಂದ್ರದಲ್ಲಿ ಮನವಿ ಸಲ್ಲಿಸಿದರು.
ಹೈದರಾಬಾದ್ ಪಶುವೈದ್ಯ ಪ್ರಿಯಂಕಾ ರೆಡ್ಡಿಯವರ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ ಜೀವಂತವಾಗಿ ದಹನ ಮಾಡಿ ಕೊಲೆ ಮಾಡಿದ ತಪ್ಪಿತಸ್ಥರಿಗೆ  ಕಾನೂನು ರೀತಿಯಲ್ಲಿ ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳುವ ಮೂಲಕ ಗಲ್ಲಿಗೇರಿಸಬೇಕೆಂದು ಆಗ್ರಹಿಸಿದರು.
ಈ ವೇಳೆ ಅನೂಪ ಕುಮಾರ, ಅಭಿಷೇಕ ದೇಸಾಯಿ,ಶಾನವಾಜ ಎಮ್.ಬಿ,ಮೋಹನ್ ಅರ್ಕಸಾಲಿ ಪ್ರಭಾಕರ್ ಸೇರಿದಂತೆ ಇತರರು ಇದ್ದರು.

Leave a Comment