ಅತ್ಯಂತ ಸುಸಜ್ಜಿತ ಕಲ್ಯಾಣ ಮಂಟಪ ನಮ್ಮಗುರಿ- ಸಚಿವ ಪುಟ್ಟರಂಗಶೆಟ್ಟಿ

ಚಾಮರಾಜನಗರ ಸೆ. 10- ಅತ್ಯಂತ ಸುಸಜ್ಜಿತ ಕಲ್ಯಾಣ ಮಂಟಪ ನಮ್ಮಗುರಿ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ತಿಳಿಸಿದರು.
ನಗರ ಜೋಡಿರಸ್ತೆ ಸಂತಪೌಲರ ದೇವಾಲಯದ ಅವರಣ ದಲ್ಲಿ 1ಕೋಟಿ ವೆಚ್ಚದ ಕ್ರೈಸ್ತ ಸಮುದಾಯ ಭವನಕ್ಕೆ ಗುದ್ದಲಿ ಪೂಜೆ ನೇರವೇರಿಸಿ ಮಾತನಾಡಿದರು. ಈಸಮುದಾಯ ಭವನ ಸಕಲ ಸೌಕರ್ಯಗಳನ್ನು ಹೊಂದಿರುವ ಕಲ್ಯಾಣ ಮಂಟಪವಾಗಿ ಅಲ್ಪ ಸಂಖ್ಯಾತರಿಗೆ ಎಲ್ಲಾ ರೀತಿಯಲೂ ಬಳಕೆಗೆ ಯೋಗ್ಯವಾಗಿರುವಂತೆ ಶೀಘ್ರ ನಿರ್ಮಾಣವಾಗಿ ಸೇವೆಗೆ ಒದಗಬೇಕು ಎಂಬುದೇ ನಮ್ಮ ಅಶಯ, ಕೆಲ್ಲಂಬಳ್ಳಿ, ಮಸಗಾಪುರ, ಮಾದಾಪುರ ಮುಂತಾದ ಕಡೆ 1ಕೋಟಿ ವೆಚ್ಚದಲ್ಲಿ ಸಮುದಾಯ ಭವನ, ಚರ್ಚ್‍ಗಳ ರಿಪೇರಿ ಕೈಸ್ತ ಸಮುದಾಯ ವಾಸಿಸುವ ಪ್ರದೇಶಗಳಲ್ಲಿ ಸಿ.ಸಿ.ರಸ್ತೆ ಚರಂಡಿ ನಿರ್ಮಿಸಲಾಗಿದೆ. ಚಾಮರಾಜನಗರದ ಈ ಭವನಕ್ಕು ನನ್ನ ಮತ್ತು ಸಂಸದರ ನಿಧಿಯಿಂದ ಇನ್ನು ಹೆಚ್ಚಿನ ಅನುದಾನ ಒದಗಿಸಿ ಸುಂದರ ಸುಸಜ್ಜಿತ ಕಲ್ಯಾಣ ಮಂಟಪ ನಿರ್ಮಾಣಕ್ಕೆ ಬದ್ದರಾಗಿದ್ದೇವೆ. ನಾನು ಈದಿನ ಇಲ್ಲಿ ನಿಂತು ನಿಮ್ಮ ಮುಂದೆ ಮಾತನಾಡಲು ಅಲ್ಪ ಸಂಖ್ಯಾತರು ಕಳೆದ ಚುನಾವಣೆಯಲ್ಲಿ ನೀಡಿದ ಬೆಂಬಲವೇ ಕಾರಣ ಅಲ್ಪ ಸಂಖ್ಯಾತರ 1 ಓಟು ಆಚೀಚೆ ಹೋಗಿಲ್ಲ ಆದರಿಂದ ನಿಮ್ಮ ಋಣ ನನ್ನ ಮೇಲಿದೆ ಅದನ್ನು ತೀರಿಸುವುದು ಸಹ ನನ್ನ ಜವಾಬ್ದಾರಿ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸಂಸದ ಆರ್,ಧ್ರುವನಾರಾಯಣ ಮಾತನಾಡಿ ಈ ಸಮುದಾಯ ಭವನಕ್ಕೆ ಹೆಚ್ಚುವರಿ ಎಷ್ಟೇಹಣ ಖರ್ಚಾಗಲಿ ನಾವು ಭರಿಸಲು ಸಿದ್ದ. ಇಲ್ಲಿ ಮದುವೆಗಳಾಗಿ ಬಡವರ ಸಹಾಯಕ್ಕೆ ಒದಗಬೇಕು ಅತ್ಯುತ್ತಮ ಕಾರ್ಯಕ್ರಮಗಳು ಇಲ್ಲಿ ನಡೆಯಬೇಕು.
ಸಿದ್ದರಾಮಯ್ಯ ಕಾರಣ
ಬಿ.ಜೆ.ಪಿ ಸರ್ಕಾರವಿದ್ದಾಗ ಅಲ್ಪ ಸಂಖ್ಯಾತರ ಇಲಾಖೆಗೆ ಕೇವಲ 300 ಕೋಟಿ ಇತ್ತು ಸಿದ್ದರಾಮಯ್ಯ ಬಂದ ಬಳಿ 3600 ಕೋಟಿ ಒದಗಿಸಿ ಅಲ್ಪ ಸಂಖ್ಯಾತರಿಗೆ ಚರ್ಚ್, ಮಸೀದಿ ಸಮುದಾಯ ಭವನಗಳ ನಿರ್ಮಾಣಕ್ಕೆ ತುಂಬ ಅನುಕೂಲವಾಗಿದೆ. ಚಾಮರಾಜನಗರ ಜಿಲ್ಲೆಯಲ್ಲಿರುವಷ್ಟು ಅಂಬೇಡ್ಕರ್ ಭವನಗಳು ಬೇರೆ ಯಾವ ಜಿಲ್ಲೆಯಲ್ಲೂ ಇಲ್ಲ ಪ್ರತಿ ಅಂಬೇಡ್ಕರ್ ಭವನಕ್ಕೆ 2 ಕೋಟಿ, 3.5ಕೋಟಿ ಖರ್ಚು ಮಾಡಿ ಕಟ್ಟಸಲಾಗಿದೆ ಯಳಂದೂರಿನಲ್ಲಿ ಇತ್ತಿಚೆಗೆ 2ಕೋಟಿ ವೆಚ್ಚದಲ್ಲಿ ಸುಂದರವಾಗಿ ನಿರ್ಮಾಣ ಮಾಡಲಾಗಿದೆ. ಕೊಳ್ಳೇಗಾಲದಲ್ಲಿ 4ಕೋಟಿ ಖರ್ಚು ಮಾಡಲಾಗಿದೆ. ಚಾಮರಾಜನಗರದ ಅಂಬೇಡ್ಕರ್ ಭವನಕ್ಕೆ ಮುಂದುವರಿದ ಕಾಮಗಾರಿಗೆ ಸಾಕಷ್ಟು ಅನುದಾನ ಬಿಡುಗಡೆ ಗೊಳಿಸಿದ್ದೇವೆ.
ಕ್ರೈಸ್ತ ಸಂಸ್ಥೆಗಳು ಕಾರಣ
ನಾನು ಜೀವನದಲ್ಲಿ ಶಿಸ್ತು ಸಂಯಮ ಹಾಗೂ ಉತ್ತಮ ಶಿಕ್ಷಣ ಪಡೆಯಲು ಕ್ರೈಸ್ಥ ಶಾಲೆಗಳು ಕಾರಣ ಮೈಸೂರಿನ ಸೇಂಟ್ ಜೊಸೇಪ್ಸ್ ಹಾಗೂ ಫಿಲೋಮಿನಾ ಹೈಸ್ಕೂಲಿನಲ್ಲಿ ವೆಲೇರಿಯನ್ ಡಿಸೋಜ, ಬರ್ನಾಡ್ ಮುಂತಾದ ಗುರುಗಳು ಮಾರ್ಗದರ್ಶಕರಾಗಿದ್ದರು ಇತ್ತೀಚೆಗೆ ಸೇಂಟ್ ಫಿಲೋಮಿನಾ ಪ್ರೌಢಶಾಲೆಗೆ 10ಲಕ್ಷ ಅನುದಾನ ಕೊಡುವುದರ ಮೂಲಕ ಋಣ ತೀರಿಸಿದ್ದೇನೆ ಸ್ವಾತಂತ್ರ ಪೂರ್ವದಲ್ಲೆ ನಮ್ಮಜಿಲ್ಲೆಯ ಮೂಲೆಮೂಲೆಯ ಹಳ್ಳಿಗಳಲ್ಲಿ ಶಾಲೆಗಳನ್ನು ಸ್ಥಾಪಿಸಿ ಬಡವರಿಗೆ, ದಲಿತರಿಗೆ ಉತ್ತಮ ಶಿಕ್ಷಣ ನೀಡಲು ಕ್ರೈಸ್ತ ಮೇಷಿನರಿಗಳು ಕಾರಣ ನಮ್ಮ ಸರ್ಕಾರ ಸಹ ಕ್ರೈಸ್ತ ಮೇಷನರಿಗಳ ಕಾರ್ಯ ವನ್ನೆ ಮಾದರಿಯಾಗಿಟ್ಟು ಕೊಂಡು ಶಾಲೆ ಆಸ್ಪತ್ರೆ ತೆರೆದು ಬಡವರಿಗೆ ಸೇವೆ ನೀಡಲಾಗುತ್ತಿದೆ ಎಂದರು.
ಮೈಸೂರಿನ ಶ್ರೇಷ್ಠಗುರು ಸಿ.ರಾಯಪ್ಪ ಅಶೀರ್ವಚನ ನೀಡಿದರು. ಕಾರ್ಯಕ್ರಮದಲ್ಲಿ ಧರ್ಮ ಕೇಂದ್ರದ ಗುರು ಜೋಸೆಫ್ ಮರಿ, ಎ.ಪಿ.ಎಂ.ಸಿ ಅಧ್ಯಕ್ಷ ಬಿ.ಕೆ.ರವಿಕುಮಾರ್, ಮಾಜಿ ಚೂಡಾಧ್ಯಕ್ಷ ಸೈಯದ್‍ರಫಿ, ಮಾಜಿ ನಗರ ಸಭೆ ಸದಸ್ಯರಾದ ಪದ್ಮಪುರುಶೋತ್ತಮ್, ಸೈಮನ್, ರಾಜುಗೌಡ ಬಾಲರಪಟ್ಟಣ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ ಸಹೋದರ ಅಲ್ಪನ್‍ಪಿಂಟೋ, ಸೇಂಟ್‍ಜೊಸೆಫ್‍ಶಾಲೆಯ ಮುಖ್ಯಸ್ಥೆ ಪರಿಮಳ, ಸಲಹ ಮಂಡಳಿ ಸದಸ್ಯರಾದ ವರ್ಗಿಸ್‍ಗಿಲ್ಬರ್ಟ್ ಇಮ್ಯಾನುವೇಲ್ ಜೋಸೆಫ್‍ರಾಜು ಇನ್ನು ಮುಂತಾದರು ಹಾಜರಿದ್ದರು.

Leave a Comment