ಅತ್ಕೂರು: ನಾಳೆ ಲಕ್ಷ ದೀಪೋತ್ಸವ ಕಾರ್ಯಕ್ರಮ

ರಾಯಚೂರು.ನ.11- ತಾಲೂಕಿನ ಅತ್ಕೂರು ಗ್ರಾಮದಲ್ಲಿ ಶ್ರೀಪಾದ ಶ್ರೀವಲ್ಲಭ ಮಹಾಂತ ನಾಗಾಬಾಬ ಗಂಗಾಪುರಿಜೀ ಆಶ್ರಮ ವತಿಯಿಂದ ನಾಳೆ ಲಕ್ಷ ದೀಪೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಲಕ್ಷ್ಮಿಕಾಂತರೆಡ್ಡಿ ಹೇಳಿದರು.
ಅವರಿಂದು ಸುದ್ದಿಗಾರೊಂದಿಗೆ ಮಾತನಾಡುತ್ತಾ ಶ್ರೀಬ್ರಹ್ಮ ಚೈತನ್ಯ ರಾಮಚಂದ್ರ ಪಾಟೀಲ್ ಅವರ ಸಮ್ಮುಖದಲ್ಲಿ ಭಾಗವತ ಕಥಾನಾಮ ಜಪ, ಯಜ್ಞ ಜರುಗಿಸಲಾಗುತ್ತದೆ. ವಿಶ್ವದಲ್ಲಿ ಪ್ರಪ್ರಥಮ ಬಾರಿಗೆ ಕಾಮಧೇನು ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗುತ್ತದೆ. ಸಂಜೆ ಕಾಮಧೇನು ಗೋಮಾತ ಮಂದಿರದಲ್ಲಿ ಲಕ್ಷ ದೀಪೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ. ಸಂಸದ ರಾಜಾ ಅಮರೇಶ್ವರ ನಾಯಕ, ಗ್ರಾಮೀಣ ಶಾಸಕ ದದ್ದಲ ಬಸನಗೌಡ ಭಾಗವಹಿಸಲಿದ್ದಾರೆ. ಯಜ್ಞ ಹಾಗೂ ಕಾರ್ಯಕ್ರಮದಲ್ಲಿ ತನು, ಮನ, ಧನಗಳಿಂದ ಸರ್ವ ಭಕ್ತರು ಭಾಗವಹಿಸಿ ದೇವರ ಕೃಪೆಗೆ ಪಾತ್ರರಾಗಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಭೀಮರೆಡ್ಡಿ, ಮಲ್ಲಿಕಾರ್ಜುನ, ಸೂಗೂರೇಶ ಸಾಲಿಮಠ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Leave a Comment