ಅತೃಪ್ತ ಶಾಸಕರ ಪರ ಬ್ಯಾಟ್‌ ಬೀಸಿದ ಸಚಿವ ಕೆ.ಎಸ್‌ ಈಶ್ವರಪ್ಪ

ಬೆಂಗಳೂರು: ಇನ್ನೂ 17, 18 ಜನ ಅಳಿಯಂದಿರಿದ್ದಾರೆ ಅವರಿಗೂ ಸಚಿವ ಸ್ಥಾನ ನೀಡಬೇಕು ಅಂತ ಪರೋಕ್ಷವಾಗಿ ಅತೃಪ್ತ ಶಾಸಕರ ಪರ ಸಚಿವ ಕೆ.ಎಸ್‌ ಈಶ್ವರಪ್ಪನವರು ಬ್ಯಾಟ್‌ ಬೀಸಿದ್ದಾರೆ. ಅವರು ಇಂದು ಮಾಧ್ಯಮವೊಂದಕ್ಕೆ ನೀಡಿರುವ ಹೇಳಿಕೆಯೊಂದರಲ್ಲಿ ಈ ಬಗ್ಗೆ ಮಾತನಾಡಿದ್ದಾರೆ.

ಇದೇ ವೇಳೆ ಅವರು ಮಾತನಾಡಿ, ಅದೇ ಬೇಕು, ಇದೇ ಬೇಕು ಎನ್ನಲು ನಮ್ಮದೇನು ಬಹುಮತದ ಸರ್ಕಾರವೇ? ಇನ್ನೂ 17, 18 ಜನ ಅಳಿಯಂದಿರಿದ್ದಾರೆ. ಅವರಿಗೂ ಸೂಕ್ತ ಸ್ಥಾನಮಾನ ನೀಡುವುದು ನಮ್ಮ ಕರ್ತವ್ಯ ಎಂದು ಹೇಳುವ ಮೂಲಕ ಪರೋಕ್ಷವಾಗಿ ಅತೃಪ್ತ ಶಾಸಕರಿಗೂ ಸಂಪುಟದಲ್ಲಿ ಸ್ಥಾನ ಸಿಗಲಿದೆ ಎನ್ನುವುದರ ಬಗ್ಗೆ ಖಚಿತ ಪಡಿಸಿದ್ದಾರೆ. ಇನ್ನು ನಾನೂ ಸಹ ಯಾವುದೇ ಖಾತೆಗೆ ಬೇಡಿಕೆ ಇಟ್ಟಿಲ್ಲ, ನನಗೆ ಖಾತೆ ಬಗ್ಗೆ ಗೊಂದಲವಿಲ್ಲ, ಯಾವುದೇ ಖಾತೆ ನೀಡಿದರೂ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.

Leave a Comment