ಅತಿ ಹೆಚ್ಚು ಸಂಭಾವನೆ ಗಳಿಸುವ ಆಟಗಾರರ ಪಟ್ಟಿಯಲ್ಲಿ ವಿರಾಟ್

ನವದೆಹಲಿ, ಜೂ ೮- ವಿಶ್ವದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ೧೦೦ ಕ್ರೀಡಾಪಟುಗಳ ಪಟ್ಟಿಯಲ್ಲಿ  ಭಾರತದ ಏಕೈಕ ಆಟಗಾರ  ವಿರಾಟ್ ಕೊಹ್ಲಿ ಸ್ಥಾನ ಪಡೆದಿದ್ದಾರೆ.

ಫೋರ್ಬ್ಸ್ ಮ್ಯಾಗಜೀನ್ ಬಿಡುಗಡೆ ಮಾಡಿರುವ ಈ ಪಟ್ಟಿಯಲ್ಲಿ ಕೊಹ್ಲಿಗೆ ೮೯ನೇ ಸ್ಥಾನ ಲಭಿಸಿದೆ. ಎಂದಿನಂತೆ ವಿಶ್ವವಿಖ್ಯಾತ ಫುಟ್ಬಾಲಿಗ ಕ್ರಿಸ್ಟಿಯಾನೊ ರೊನಾಲ್ಡೋ ಅಗ್ರಸ್ಥಾನದಲ್ಲಿದ್ದಾರೆ. ಒಂದು ವರ್ಷಕ್ಕೆ ಕೊಹ್ಲಿ ಪಡೆದಿರೋ ಒಟ್ಟು ಸಂಭಾವನೆ ೨೨ ದಶಲಕ್ಷ ಡಾಲರ್. ಅದರಲ್ಲಿ ೩ ದಶಲಕ್ಷ  ಡಾಲರ್ ವೇತನದ ರೂಪದಲ್ಲಿ ಬಂದಿದ್ದು, ಉಳಿದ ೧೯ ದಶಲಕ್ಷ  ಡಾಲರ್ ಆದಾಯ ಜಾಹೀರಾತುಗಳಿಂದ ದೊರೆತಿದೆ. ಕಳೆದ ವರ್ಷ ಕೊಹ್ಲಿ ರಾಷ್ಟ್ರೀಯ ತಂಡದ ಪರ ಆಡಿದ್ದಕ್ಕೆ ವೇತನವಾಗಿ ೧ ದಶಲಕ್ಷ  ಡಾಲರ್ ಹಣ ಪಡೆದಿದ್ದಾರೆ.

ಐಪಿಎಲ್ ನಲ್ಲಿ ಆರ್ ಸಿ ಬಿ ಯಿಂದ ವಿರಾಟ್ ಗೆ ೨.೩ ದಶಲಕ್ಷ  ಡಾಲರ್ ಹಣ ಲಭಿಸಿದೆ. ಅಗ್ರಸ್ಥಾನದಲ್ಲಿರೋ ರೊನಾಲ್ಡೋರ ವಾರ್ಷಿಕ ಸಂಭಾವನೆ ೯೩ ದಶಲಕ್ಷ ಡಾಲರ್ ಇದೆ. ಎರಡನೇ ಸ್ಥಾನ ಪಡೆದಿರೋ ಬಾಸ್ಕೆಟ್ ಬಾಲ್ ಆಟಗಾರ ಲೆಬಾರ್ನ್ ಜೇಮ್ಸ್, ೮೬.೨ ದಶಲಕ್ಷ  ಡಾಲರ್ ಸಂಭಾವನೆ ಗಿಟ್ಟಿಸಿಕೊಂಡಿದ್ದಾರೆ. ಲಿಯೋನಲ್ ಮೆಸ್ಸಿ, ರೋಜರ್ ಫೆಡರರ್ ಹಾಗೂ ಕೆವಿನ್ ಡ್ಯುರಾಂಟ್ ನಂತರದ ಸ್ಥಾನದಲ್ಲಿದ್ದಾರೆ.

Leave a Comment