ಅತಿ ವೇಗದಲ್ಲಿ ಕರಗುತ್ತಿವೆ ಗ್ರೀನ್ ಲ್ಯಾಂಡ್ ಹಿಮ ನದಿಗಳು

  • ಉತ್ತನೂರು ವೆಂಟಕೇಶ್

ಗ್ರೀನ್ ಲ್ಯಾಂಡ್‌ನ ಹಿಮ ನದಿಗಳು ವಬಿಜ್ಞಾನಿಗಳು ಅಂದಾಜಿಸಿದ್ದಕ್ಕೂ ಅತಿ ಹೆಚ್ಚಿನ ವೇಗದಲ್ಲಿ ಕರಗುತ್ತಿವೆ. ೨೦೦೨ ರಂದ ಇವುಗಳ ಕರಗುವಿಕೆ ಪ್ರಮಾಣ ನಾಲ್ಕುಪಟ್ಟು ಅಧಿಕ ಗೊಂಡಿದೆ. ವಾರ್ಷಿಕವಾಗಿ ೨೮೦ ಶತಕೋಟಿ ಟನ್‌ನಷ್ಟು ಹಿಮಭಂಡೆಗಳು  ಕರಗುತ್ತಿವೆ ಎಂದು ಹೊಸ ಅಧ್ಯಯನ ವರದಿಯೊಂದು ಹೇಳಿದೆ.

ಹೀಗೆ ಹಿಮ ನದಿಗಳು ಕರಗುವಿಕೆ ಯಿಂದ ಸಾಗರಗಳ ನೀರಿನ ಮಟ್ಟ ವಾರ್ಷಿಕವಾಗಿ ೦.೦೩ ಅಂಗುಲದಷ್ಟು  ಎರಿಕೆ ಯಾಗುತ್ತಿದೆ. ಇದು ಮುಂದೊಂದು ದಿನದ ಗಂಡಾಂತಕ್ಕೆ ಎಚ್ಚರಿಕೆಯ ಗಂಟೆಯಾಗಿದೆ ಎಂದು ವಿಜ್ಞಾನಿಗಳ ತಂಡ ತಮ್ಮ ಅಧ್ಯಯನ ವರದಿಇಯಲ್ಲಿ ಹೇಳಿದ್ದಾರೆ.

ಅತಿ ಹೆಚ್ಚಿನ ಪ್ರಮಾನದಲ್ಲಿ ಹಿಮ ನದಿಗಳನ್ನು ಹೊಂದಿರುವ ಗ್ರೀನ್ ಲ್ಯಾಂಡ್ನಲ್ಲಿಯ ಹಿಮ ನದಿಗಳಲ್ಲಿ ಕರಗುತ್ತಿರುವ  ದೊಡ್ಡ ದೊಡ್ಡ ಹಿಮ ಗಡ್ಡೆಗಳು  ಅಟ್ಲಾಂಟಕ್ ಸಾಗರಕ್ಕೆ ತೇಲಿಬರುತ್ತಿವೆ. ಸಾಗರ ನೀರಿನ ಬಿಸಿಯಲ್ಲಿ ನೀರಾಗುವ ಈ ಹಿಮ ಗಡ್ಡೆಗಳು  ಸಾಗರದ ನೀರಿನ ಮಟ್ಟವನ್ನು ಏರಿಸುತ್ತವೆ. ಸಾಗರಗಳ ನೀರಿನ ಮಟ್ಟ  ಏರಿಕೆಯಿಂದ ಸಗರ ತಟ ಭೂಪ್ರದೇಶಗಳು ಶಗರದ ಆಪೋಷಣೆಗೆ ಒಲಗಾಗುತ್ತವೆ .ಇದು ಜೀವ ಜಾಲಕ್ಕೆ ಭಾರಿ ಗಂಡಾಂತರ ಒಡ್ಡುತ್ತದೆ ಎಂಬುದೆ ಸದ್ಯದ ಆತಂಕ ಎಂದು ಓಹಿಯೊ  ವಿಶ್ವವಿದ್ಯಾನಿಉಲಯದ ಜಿಯೋ ಡೈನಮಿಕ್ ವಿಭಾಗದ ಪ್ರೊಫೆಸರ್‍ಮಿಚೆಲ್ ಬೆವಿಸ್ ಹೇಳಿದ್ದಾರೆ. ಇವರು  ಹೊಸ ಅಧ್ಯಯನ ವರದಿ ನೀಡಿರುವ ವಿಜ್ಞಾನಿಗಳ ತಂಡದ ಮೂಖ್ಯಸ್ಥರು ಆಗಿದ್ದರೆ .

27vichara2

ಗ್ರೀನ್ ಲ್ಯಾಂಡ್ , ಅಂಟಾರ್ಟಿಕಾ  ದಲ್ಲಿಯ ಹಿಮನದಿಗಳು  ಸೇರಿದಂತೆ  ವಿಶ್ವದ ಪ್ರಮುಖ ಹಿಮನದಿಗಳ ಕರಗುವಿಕೆಗೆ ಕಾರನವಾಗಿರುವ  ಜಾಗತಿಕ ತಾಪಮಾನ ಏರಿಕೆಯನ್ನು ತಡೆಯದಿದ್ದರೆ,ಭರಿ ಪ್ರಮಾಣದ ಭೂ ಭಾಗ ಮತ್ತು ಜೀವಜಾಲ ಗಂಡಾಂತರಕ್ಕೆ ಸಿಗಲಿದೆ ಎಮದು ವಿಜ್ಞಾನಿಗಳು ನಿರಂತರವಾಗಿ ಎಚ್ಚರಿಸುತ್ತ ಬಂದಿದ್ದಾರೆ.ಈ ಎಚ್ಚರಿಕೆಯ ಹಿನ್ನೆಲೆಯಲ್ಲಿಯೇ ಪ್ರೀಸ್‌ನಲ್ಲಿ ನಡೆದ ವಿಶ್ವ ಹವಾಮನ ಶೃಂಗದಲ್ಲಿ  ತಾಪಮನ ತಡೆಗೆ ಮನದಂಡಗಳನ್ನು ಒಳಗೊಂಡ ಒಪ್ಪಂದಕ್ಕೆ  ಅಮೆರಿಕಾ,ಭಾರತ ಸೇರಿದಂತೆ ೬೬ ರಾಷ್ಟ್ರಗಳು ಸಹಿಹಾಕಿವೆ. ಪ್ರಮುಕ ರಾಷ್ಟ್ರಗಳು ಒಪ್ಪಮದಕ್ಕೆ ತೋರಿದಷ್ಟು ಒಲವನ್ನು ಅದರಜಾಯಲ್ಲಿ  ಈಗ ತೋರುತ್ತಿಲ್ಲ. ಅಮೆರಿಕಾವೇ ಇದಕ್ಕೆ ಉತ್ತಮ ಉದಾಹರಣೆ.

ಜಾಗತಿಕ ತಾಪಮಾನ ಏರಿಕೆಯ ಹಿನ್ನೆಲೆಯಲ್ಲಿ  ಗ್ರೀನ್ ಲ್ಯಾಂಡದ್ ಸೇರಿದಂತೆ ಉಳಿದ ಪ್ರದೇಶಗಳಲ್ಲಿಯ ಹಿಮನದಿಗಳು  ವೇಗವಾಗಿ ಕರಗುತ್ತಿವೆ. ವಾರ್ಷಿವಾಗಿ ೨೮೦ ಶತಕೋಟಿ ಟನ್ ನಷ್ಟು ಹಿಮ ಬಂಡೆಗಳು ಕರಗುತ್ತಿದ್ದು, ಇದರಂದ ಸಾಗರದ ಮಟ್ಟ  ಪ್ರಿತಿ ವರ್ಷ ೦.೦೩ ಅಂಗುಲದಷ್ಟು ಏರಿಕೆ ಯಾಗುತ್ತಿದೆ.

ಸಾಗರಗಳ ನೀರಿನ ಮಟ್ಟ ಏರಿಕೆಯಿಂದ ಶಗರ ವಲಯದ ಭಾರೀ ಪ್ರಮಾನದ ಭೂ ಪ್ರದೇಶ ನಿರಿನಲ್ಲಿ ಮುಗುತ್ತದೆ. ಜೀವ ಸಂಕುಲ ನಾಶವಗುತ್ತದೆ. ವಿಜ್ಞಾನಿಗಳ ಸತತ ಈ ಎಚ್ಚರಿಕೆಗೆ ಯಾವ ಪ್ರಮುಖ ರಾಷ್ಟ್ರವೂ ಸಕಾರಾತ್ಮವಾಗಿ ಸ್ಪಂದಿಸರಿವುದೇ ಈಗಿನ ಜಾಗತಿಕ ಆತಂಕ.

Leave a Comment