ಅತಿ ದೂರದ ಹೊಸ ಸೌರಮಂಡಲ ಪತ್ತೆ

ಮಸುಕು ಮಸುಕಾದ ಹೊಸ ಸೌರಮಂಡಲವನ್ನು ಇತ್ತೀಚೆಗೆ ಖಗೋಳ ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ. ಈ ಸೌರಮಂಡಲ 13.1 ಶತಕೋಟಿ ಜ್ಯೋತಿರ್ವರ್ಷಗಳಷ್ಟು ದೂರದಲ್ಲಿದ್ದು, ಇದು 13.1 ಶತಕೋಟಿ ವರ್ಷಗಳ ಹಳೆಯದು ಎನ್ನಲಾಗಿದೆ.

ಇತ್ತೀಚೆಗೆ ಕ್ಯಾಲಿರ್ಫೋನಿಯಾ ವಿಶ್ವವಿದ್ಯಾನಿಲಯದ ಖಗೋಳ ವಿಜ್ಞಾನಿಗಳು 13.1 ಜ್ಯೋತಿರ್ವರ್ಷಗಳಷ್ಟು ದೂರದಲ್ಲಿರುವ ಹೊಸ ಸೌರಮಂಡಲವನ್ನು ಪತ್ತೆ ಹಚ್ಚಿದ್ದಾರೆ.

ಹೊಸದಾಗಿ ಪತ್ತೆಯಾಗಿರುವ ಈ ಸೌರಮಂಡಲ 13.1 ಶತಕೋಟಿ ವರ್ಷಗಳಷ್ಟು ಹಳೆಯದಾಗಿದ್ದು, ಇದರ ಪತ್ತೆಯಿಂದ ಸೌರಮಂಡಲಗಳು, ಸೌರಮಂಡಲಗಳ ರಚನಾ ಕಾಲ ಕುರಿತಂತೆ ಹೆಚ್ಚಿನ ಮಾಹಿತಿ ದೊರೆಯಲಿದೆ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.

13.1 ಶತಕೋಟಿ ವರ್ಷಗಳ ಹಿಂದಿನಿಂದಲೂ ಮಸುಕಾದ ಬೆಳಕು ಸೂಸುತ್ತಿರುವ ಈ ಹೊಸ ಸೌರಮಂಡಲವನ್ನು ಕ್ಯಾಲಿರ್ಫೋನಿಯಾ ವಿಶ್ವವಿದ್ಯಾನಿಲಯದ ಖಗೋಳ ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ. ಇದಕ್ಕೆ `ಎಂ.ಎ.ಸಿ.ಎಸ್ 1423 – ಝಡ್ 7 ಪಿ 64′ ಎಂದು ಹೆಸರಿಡಲಾಗಿದೆ.

ಪತ್ತೆಯಾಗಿರುವ ಈ ಹೊಸ ಸೌರಮಂಡಲ, ತಾರಾ ಮಂಡಲಗಳ ಪೂರ್ವ ರಚನೆಯ ಕುರಿತಂತೆ, ಹೆಚ್ಚಿನ ಬೆಳಕು ನೀಡಲಿದೆ ಎಂದು ಅನ್ಯ ಸೌರಮಂಡಲಗಳ ಶೋಧನಾ ಕಾರ್ಯದಲ್ಲಿರುವ ಖಗೋಳ ವಿಜ್ಞಾನಿಗಳು ಹೇಳಿದ್ದಾರೆ.

ಅತಿ ದೂರದ ಸೌರಮಂಡಲಗಳ ಶೋಧನೆಗಾಗಿ ಗುರುತ್ವಾಕರ್ಷಣೆ ಆಧಾರದಲ್ಲಿ ಕಾರ್ಯ ನಿರ್ವಹಿಸುವ ಮಸೂರಗಳ ಮತ್ತು ಅತ್ಯಾಧುನಿಕ ಟೆಲಿಸ್ಕೋಪ್‌ಗಳ ಸಹಾಯ ಪಡೆಯಲಾಗುತ್ತಿದೆ. ಸದ್ಯಕ್ಕೆ ಸಿದ್ಧವಾಗುತ್ತಿರುವ ಜೇಮ್ಸ್ ವೆಬ್ ಟೆಲಿಸ್ಕೋಪ್ ಹೆಚ್ಚಿನ ಉಪಯೋಗಕ್ಕೆ ಬರುತ್ತಿರುವ ಇದು 2018ರ ವೇಳೆಗೆ ಸಿದ್ಧವಾಗುತ್ತಿದೆ. ಇದು ಈಗಿರುವ ಹಬಲ್ ಟೆಲಿಸ್ಕೋಪ್‌ಗಿಂತ ದೊಡ್ಡದು ಹಾಗೂ ಶಕ್ತಿಶಾಲಿಯಾದದ್ದು. ಇದರಿಂದ ನಿಲುಕದಷ್ಟು ದೂರದಲ್ಲಿರುವ ಸೌರಮಂಡಲಗಳನ್ನು ಪತ್ತೆ ಹಚ್ಚುವ ವಿಶ್ವಾಸವನ್ನು ವಿಜ್ಞಾನಿಗಳು ಹೊಂದಿದ್ದಾರೆ.

ಅಗಣ್ಯ – ಅನಂತ

ವಿಶ್ವ ಅಥವಾ ಬ್ರಹ್ಮಾಂಡದಲ್ಲಿ ಕೋಟ್ಯಾಂತರ ತಾರಾ ಮಂಡಲಗಳಿವೆ. ಅವುಗಳಲ್ಲಿ ಈಗ ಪತ್ತೆಯಾಗಿರುವುದಕ್ಕಿಂತ, ಪತ್ತೆಯಾಗದೆ ಇರುವ ತಾರಾಮಂಡಲಗಳು ಲೆಕ್ಕಕ್ಕೆ ಸಿಗದಷ್ಟಿವೆ.

ಒಂದು ತಾರಾ ಮಂಡಲದಲ್ಲಿ ಅನೇಕ ಸೌರಮಂಡಲಗಳು ಇರುತ್ತವೆ. ನಾವು ಅಂದರೆ, ಭೂಮಿ ಇರುವ ಸೌರಮಂಡಲವನ್ನು ಕ್ಷೀರಪಥ (ಮಿಲ್ಕ್ ವೇ) ಎನ್ನುತ್ತೇವೆ. ಇದೂ ತಾರಾಮಂಡಲದ ಒಂದು ಭಾಗ.

ಸೂರ್ಯ ಅಧಿಪತಿಯಾಗಿರುವ ನಮ್ಮ ಸೌರಮಂಡಲದಲ್ಲಿ 9 ಗ್ರಹಗಳು, ಅವುಗಳ ಉಪಗ್ರಹಗಳು, ಲೆಕ್ಕವಿಲ್ಲದಷ್ಟು ಕ್ಷುದ್ರಗ್ರಹಗಳು, ಉಲ್ಕೆಗಳು, ಧೂಮಕೇತುಗಳು ಇವೆಲ್ಲ ಸೂರ್ಯನ ಕುಟುಂಬದ ಸದಸ್ಯರು.

ನಮ್ಮ ಭೂಮಂಡಲ ಇಷ್ಟು ದೊಡ್ಡದಾಗಿದ್ದರೂ ಇದೂ ಸೌರಮಂಡಲದ ಒಂದು ಚಿಕ್ಕಭಾಗ. ಸೌರಮಂಡಲದ ವಿಸ್ತಾರವನ್ನು ಅಳೆಯಲು ಮೈಲಿ ಕಿಲೋ ಮೀಟರ್‌ಗಳಲ್ಲಿ ಸಾಧ್ಯವಿಲ್ಲ. ಹೀಗಾಗಿ ಇವನ್ನು ಜ್ಯೋತಿರ್ವರ್ಷಗಳ ಆಧಾರದಲ್ಲಿ ಅಳೆಯಲಾಗುತ್ತದೆ.

ಸೂರ್ಯನ ಬೆಳಕು ಒಂದು ವರ್ಷದಲ್ಲಿ ಸಾಗುವ ದೂರವನ್ನು ಒಂದು ಜ್ಯೋತಿರ್ವರ್ಷ ಎನ್ನುತ್ತೇವೆ. (ವೈಟ್ ಇಯರ್) ಬೆಳಕಿನ ವೇಗ ಒಂದು ಸೆಕೆಂಡಿಗೆ 1,86,000 ಮೈಲುಗಳು, ಅದರಂತೆ ಒಂದು ವರ್ಷದ ಅದು ಚಲಿಸುವ ದೂರ 5880,000,000,000 ಮೈಲುಗಳು. ಈ ಲೆಕ್ಕಾಚಾರದಲ್ಲಿ ನಾವಿರುವ ಕ್ಷೀರಪಥದ ವಿಸ್ತೀರ್ಣ ಒಂದು ಲಕ್ಷ ಬೆಳಕಿನ ವರ್ಷಗಳು! ಇದು ಕಲ್ಪಿಸಿಕೊಳ್ಳಲೂ ಅಸಾಧ್ಯವಾದ ವಿಸ್ತೀರ್ಣ.

-ಉತ್ತನೂರು ವೆಂಕಟೇಶ್

 

 

 

Leave a Comment