ಅತಿಯಾದ ಶಬ್ಧ: ಶ್ರವಣ ತೊಂದರೆ

ನಗರ ಜೀವನ ದಿನದಿಂದ ದಿನಕ್ಕೆ ದುತ್ತರವಾಗುತ್ತಿದೆ. ವಾಹನಗಳ ಸಂಖ್ಯೆ ಹೆಚ್ಚಾಗುತ್ತಿದೆ. ಶಬ್ಧ ಮಾಲಿನ್ಯ ಅತಿಯಾಗುತ್ತಿದೆ. ವಾಹನಗಳ ಶಬ್ಧದಿಂದ ಶ್ರವಣ ಸಮಸ್ಯೆಗಳು ಉಂಟಾಗಬಹುದು ಎಂಬ ಆತಂಕವೂ ವ್ಯಕ್ತವಾಗಿದೆ.
ಶಬ್ಧ ಮಾಲಿನ್ಯ ತಡೆಯಲು ಮುಂದಾಗದಿದ್ದರೆ ಶ್ರವಣ ತೊಂದರೆಗಳು ಕಟ್ಟಿಟ್ಟ ಬುತ್ತಿ. ತೀವ್ರ ಶಬ್ಧಕ್ಕೆ ಕಿವಿಗಳು ಹೆಚ್ಚಿನ ಸಮಯ ತೆರೆದುಕೊಳ್ಳುವುದರಿಂದ ಶ್ರವಣ ದೋಷದ ಅಪಾಯ ಜಾಸ್ತಿ. 90 ಡೆಸಿಬಲ್‌ಗಿಂತ ಹೆಚ್ಚು ನಿರಂತರ ಶಬ್ಧ ಶ್ರವಣ ನಷ್ಟಕ್ಕೆ ಕಾರಣವಾಗುತ್ತದೆ ಎಂದು ಹೇಳುವ ಕೊಲಂಬಿಯಾ ಏಷ್ಯಾ ಆಸ್ಪತ್ರೆಯ ಇ.ಎನ್.ಟಿ. ತಜ್ಞ ಡಾ. ಸಂತೋಷ್ ಅತಿಯಾಗಿ ಹಾರನ್ ಮಾಡುವುದು ಜನರ ಮೇಲೆ ದೀರ್ಘಾವಧಿ ಪರಿಣಾಮ ಉಂಟುಮಾಡುತ್ತದೆ. ಶ್ರವಣ ಸಮಸ್ಯೆಯ ಜೊತೆಗೆ ಇತರ ಸಮಸ್ಯೆಗಳಾದ ನಿರಂತರ ತಲೆನೋವು, ಸಿಟ್ಟು, ಕಿರಿಕಿರಿಯೂ ಬಾಧಿಸಬಹುದು ಎನ್ನುತ್ತಾರೆ.
ಅತ್ಯಂತ ಅಗತ್ಯವಿದ್ದಾಗ ಹಾರನ್ ಮಾಡಬೇಕು. ವಸತಿ ಪ್ರದೇಶಗಳಲ್ಲಿ ಭಾರೀ ವಾಹನಗಳ ಸಂಚಾರ ನಿಷೇಧ ಮಾಡಬೇಕು. ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುವವರು ಇಯರ್ ಪ್ಲಾಗ್ ಮತ್ತು ಹೆಲ್ಮೆಟ್‌ಗಳನ್ನು ಬಳಸಿ ಶಬ್ಧ ಮಾಲಿನ್ಯದಿಂದ ರಕ್ಷಣೆ ಪಡೆಯಬಹುದು ಎಂದು ಅವರು ಹೇಳುತ್ತಾರೆ.
ವಾಹನ ಶಬ್ಧವೂ ಕಿವಿಯ ಮೇಲೆ ಹಲವು ರೀತಿಯ ಸಮಸ್ಯೆಯನ್ನು ಉಂಟುಮಾಡುತ್ತದೆ. ಹೀಗಾಗಿ ಸಾಧ್ಯವಾದಷ್ಟೂ ವಾಹನದ ಶಬ್ಧವನ್ನು ಕಡಿಮೆ ಮಾಡಲು ಜಾಗೃತಿ ಅವಶ್ಯವಾಗಿದೆ. ಈ ನಿಟ್ಟಿನಲ್ಲಿ ಪ್ರತಿವರ್ಷ ಏಪ್ರಿಲ್ 26 ರಂದು ಅಂತಾರಾಷ್ಟ್ರೀಯ ಮಾಲಿನ್ಯ ಜಾಗೃತಿ ದಿನವಾಗಿ ಆಚರಿಸಲಾಗುತ್ತಿದೆ.

Leave a Comment