ಅತಿಯಾದ ಮದ್ಯ ಸೇವನೆ ಲಿವರ್‌ಗೆ ಸಂಚಕಾರ

ನಿಶೆ ಏರಿಸುವ ಮದ್ಯಪಾನ ಪ್ರಿಯರಿಗೆ ಬಹುಪ್ರಿಯ. ಆದರೆ ನಿರಂತರವಾಗಿ ಮದ್ಯ ಸೇವನೆ ಮಾಡುವುದರಿಂದ ಲಿವರ್ ಹಾಗೂ ಟ್ಯಾಂಕ್ರಿಯಾಟಿಕ್‌ಗೆ ಸಂಬಂಧಿಸಿದ ರೋಗಗಳು ಎದುರಾಗುತ್ತದೆ.
ಮದ್ಯಪಾನ ಸೇವಿಸುವ ಪುರುಷರು ಹಾಗೂ ಮಹಿಳೆಯರ ಮೇಲೆ ನಡೆಸಿದ ಸಂಶೋಧನೆಗಳ ಪ್ರಕಾರ ನಿರಂತರವಾಗಿ ಕಳೆದ 15 ವರ್ಷಗಳಿಂದ ಮದ್ಯ ಸೇವನೆ ಮಾಡಿ ಪುರುಷ ಹಾಗೂ ಮಹಿಳೆಯರಲ್ಲಿ ವಿಷತ್ವ ಏರಿಕೆ ಆಗಿ ಯಕೃತ್‌ನ ಪದರಕ್ಕೆ ಶಾಶ್ವತ ಹಾನಿಯಾಗಿದ್ದು ಕಂಡು ಬಂದಿದೆ.
ಉತ್ತರ ಭಾರತದಲ್ಲಿ 2012-2014ರ ಮದ್ಯ ತಜ್ಞವೈದ್ಯರ ತಂಡ ನಡೆಸಿದ ಸಮೀಕ್ಷೆಯಲ್ಲಿ ಲಿವರ್ ಡ್ಯಾಮೇಜ್ ಮತ್ತು ಕ್ರೋನಿಕ್ ಲಿವರ್ ರೋಗ ಸಿರೋಸಿಸ್‌ಗೆ ಪ್ರಮುಖ ಕಾರಣ ಮದ್ಯಪಾನ ಎಂಬುದು ದೃಢಪಟ್ಟಿದೆ ಎಂದು ಬಿ.ಜಿ.ಎಸ್. ಗ್ಗಿನೀಗಲ್ ಆಸ್ಪತ್ರೆಯ ಡಾ. ವಿನೀತ ಶಾ ಹೇಳುತ್ತಾರೆ.
ನಿರಂತರ ಮದ್ಯಪಾನದಿಂದ ಲಿವರ್ ಅಂದರೆ ಯಕೃತ್‌ನಲ್ಲಿ ಕೊಬ್ಬಿನ ಅಂಶ ಹೆಚ್ಚಾಗುತ್ತದೆ. ಇದರ ಪರಿಣಾಮ ಯಕೃತ್‌ನಲ್ಲಿ ಊತ ಕಾಣಿಸಿಕೊಳ್ಳಲಾರಂಭಿಸುತ್ತವೆ. ಈ ಹಂತದಲ್ಲಿ ಪರೀಕ್ಷೆ ನಡೆಸಿ, ವೈದ್ಯರ ಸಲಹೆಯಂತೆ ನಡೆದುಕೊಂಡು ಮದ್ಯ ಸೇವನೆ ಬಿಟ್ಟರೇ ರೋಗಿ ಆರೋಗ್ಯಕರ ಜೀವನ ನಡೆಸಬಹುದು. ಇಲ್ಲದಿದ್ದರೇ ತೊಂದರೆ ಕಟ್ಟಿಟ್ಟ ಬುತ್ತಿ ಎನ್ನುವ ಡಾ. ವಿನೀತ್ ಶಾರವರು. ಆದರೆ ಬಹುತೇಕ ಜನ ಮದ್ಯ ಬಿಡುವ ಬಗ್ಗೆ ನಿರ್ಲಕ್ಷ್ಯ ವಹಿಸಿ ಅಪಾಯವನ್ನು ತಂದುಕೊಳ್ಳುತ್ತಾರೆ ಎನ್ನುತ್ತಾರೆ.
ಮದ್ಯಪಾನ ಬಿಟ್ಟು ಉತ್ತಮವಾದ ಪೌಷ್ಠಿಕಾಂಶ ಆಹಾರ ಸೇವಿಸಿ, ಕಾಲಕಾಲಕ್ಕೂ ಚಿಕಿತ್ಸೆ, ವೈದ್ಯರ ಸಲಹೆ ಪಡೆದರೆ ಕೆಲವು 3 ತಿಂಗಳಲ್ಲಿ ಹಾಳಾಗಿರುವ ಲಿವರ್ ಸರಿಪಡಿಸಬಹುದು. ಒಂದು ವೇಳೆ ಲಿವರ್‌ಗೆ ತುಂಬಾ ಹಾನಿಯಾಗಿದ್ದರೇ ಲಿವರ್ ಕಸಿಯೇ ಪರಿಹಾರ.
ಲಿವರ್ ತೊಂದರೆಗೆ ಸಮರ್ಪಕವಾದ ಚಿಕಿತ್ಸೆ ಪಡೆಯದೆ ಹೋದರೆ ಮೂತ್ರಪಿಂಡಕ್ಕೆ ಹಾನಿಯಾಗಬಹುದು.
ಕೆಲವು ಸಿರೋಸಿಸ್ ಪ್ರಕರಣಗಳನ್ನು ಪತ್ತೆ ಮಾಡಿ ಚಿಕಿತ್ಸೆ ಪಡೆಯದೆ ಹೋದರೆ ಅದು ಲಿವರ್ ಕ್ಯಾನ್ಸರ್ ಪರಿವರ್ತನೆಯಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಮದ್ಯ ವ್ಯಸನಿಗಳು ಎಚ್ಚರಿಕೆ ವಹಿಸಿ, ಕುಡಿತ ಬಿಡುವುದು ಒಳ್ಳೆಯದು.

Leave a Comment