ಅಣ್ಣ-ತಂಗಿಯ ವಾತ್ಯಲ್ಯ ಕುಟುಂಬದ ಬಾಂಧವ್ಯದ ಅನಾವರಣ

ಇತ್ತೀಚಿನ ದಿನಮಾನಗಳಲ್ಲಿ ಸಿನಿಮಾಗಳ ಗುಣಮಟ್ಟಕ್ಕೆ ಯಾವುದರಲ್ಲಿಯೂ ಕೊರತೆ ಇಲ್ಲದಂತೆ ಕಿರುತೆರೆಯ ಧಾರಾವಾಹಿಗಳೂ ಮೂಡಿ ಬರುತ್ತಿವೆ. ಇದರ ಜೊತೆ ಜೊತೆಗೆ ಕಿರುತೆರೆಯಲ್ಲಿ ಜನಪ್ರಿಯತೆ ಪಡೆದವರು ಹಿರಿತೆರೆಯತ್ತ ಮುಖಮಾಡುತ್ತಿದ್ದಾರೆ. ಕಿರುತೆರೆ ಹಿರಿತೆರೆಗೆ ಬರಲು ಉತ್ತಮ ವೇದಿಕೆಯಾಗುತ್ತಿದೆ.

ಕಿರುತೆರೆಯಲ್ಲಿ ಶ್ವೇತಾ ಪಂಡಿತ್ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದು, ನಟ ಸ್ಕಂಧ ನೆಲೆ ನಿಲ್ಲುವ ವಿಶ್ವಾಸದಲ್ಲಿದ್ದಾರೆ. ಅದಕ್ಕೆ ಪೂರಕವಾಗಿ ’ರಾಧಾರಮಣ’ ನಿಲ್ಲಲಿದೆ ಎನ್ನುವ ನಂಬಿಕೆ ಅವರದು.

ಅಣ್ಣ-ತಂಗಿಯರ ಬಾಂಧವ್ಯ,ಪ್ರೀತಿ ಪ್ರೇಮ ಮತ್ತು ಕುಟುಂಬದ ಬಾಂಧವ್ಯದ ಕುರಿತು ’ರಾಧಾರಮಣ’ ಪ್ರೇಕ್ಷಕರನ್ನು ಹಿಡಿದಿಡಲು ಬರಲು ಸಜ್ಜಾಜಿದೆ.ಒಡಹುಟ್ಟಿದವರ ಬಾಂಧವ್ಯ ಬೆಸೆಯುವ ಕತೆ. ಹುಟ್ಟುತ್ತಾ ಒಡಹುಟ್ಟಿದವರು,ಬೆಳೆಯುತ್ತಾ ದಾಯಾದಿಗಳು ಎಂಬ ಮಾತು ಸದಾ ಸತ್ಯ. ಒಂದೇ ತಾಯಿಯ ಮಡಿಲಿನಲ್ಲಿ ಹುಟ್ಟಿದವರೂ ವರ್ತನೆ, ಸ್ವಭಾವದಲ್ಲಿ ತದ್ವಿರುದ್ಧರಾಗಿರುವುದು ಸಾಮಾನ್ಯ. ದಾಯಾದಿಗಳ ನಡುವೆ ಹಗೆತನ ಇಲ್ಲ. ಕೋಟಿ ಕೋಟಿ ದುಡ್ಡಿದೆ. ಆದರೆ ಕೋಟಿಗಿಂತಲೂ ಮಿಗಿಲಾದ ಪ್ರೀತಿ ಇದೆ ಎಲ್ಲವನ್ನೂ ಒಂದುಗೂಡಿಸಿ ಪ್ರೇಕ್ಷಕರ ಮುಂದಿಡಲಾಗುತ್ತಿದೆ. ನಾಳೆಯಿಂದ ಪ್ರತಿದಿನ ರಾತ್ರಿ ೯ಗಂಟೆಗೆ ಕಲರ್‍ಸ್ ವಾಹಿನಿಯಲ್ಲಿ ರಾಧಾರಮಣ ಪ್ರೇಕ್ಷಕರ ಮುಂದೆ ಬರಲಿದೆ.
ಹೊಸ ವಿಷಚಯವನ್ನು ಮುಂದಿಟ್ಟುಕೊಂಡು ಹೊಸತನದ ಧಾರಾವಾಹಿ ತೆರೆಗೆ ತರಲಾಗುತ್ತಿದೆ ಎಲ್ಲರಿಗೂ ಇಷ್ಟವಾಗಲಿದೆ.ಜವಾಬ್ದಾರಿಗಳಿಂದ ದೂರ ಸರಿಯುವ ಒಡಹುಟ್ಟಿದವರಿಗೊಂದು ಸೂಕ್ತ ಪಾಠವಾಗಬಲ್ಲದು ಈ ಧಾರಾವಾಹಿ ಎನ್ನುತ್ತಾರೆ ಕಲರ್ಸ್ ಕನ್ನಡ ವಾಹಿನಿಯ ಬ್ಯುಸಿನೆಸ್ ಹೆಡ್ ಪರಮೇಶ್ವರ ಗುಂಡ್ಕಲ್
ಆರಾಧನಾ -ಶ್ವೇತಾ ಪ್ರದೀಪ್, ರಮಣ್-ಸ್ಕಂಧ, ಅನ್ವಿತಾ-ರಕ್ಷಾ, ಆದಿತ್ಯ-ಸಿಬ್ಬು, ಸೀತಾರಾದೇವಿ-ಸುಜಾತಾ, ಸರಸ್ವತಿ-ಸುಚಿತ್ರ, ದಿನಕರ್ ಪ್ರಸಾದ್-ರಾಜ್ ಗೋಪಾಲ್ ಜೋಷಿ ಕಾಣಿಸಿಕೊಳ್ಳಲಿದ್ದಾರೆ.

Leave a Comment