ಅಣ್ಣಿಗೇರಿ ಪುರಸಭೆ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಮಂಡನೆ

ಅಣ್ಣಿಗೇರಿ,ಮಾ.13- ಕಾಂಗ್ರೆಸ ಪಕ್ಷದ ಅಧ್ಯಕ್ಷ ಮುತ್ತು ದ್ಯಾವನೂರ ವಿರುದ್ಧ ಸೋಮವಾರ ಕರೆಯಲಾದ ಅವಿಶ್ವಾಸ ಗೊತ್ತುವಳಿ ಮಂಡನಾ ಸಭೆಯಲ್ಲಿ 15 ಸದಸ್ಯರು ಅವರ ವಿರುದ್ಧ ಕೈ ಎತ್ತುವ ಮೂಲಕ ಅವಿಶ್ವಾಸ ವ್ಯಕ್ತಪಡಿಸಿದರು.
ಪೆ. 12 ರಂದು. 16 ಸದಸ್ಯರು ಅದರಲಿ ಒಬ್ಬ ಕಾಂಗ್ರೆಸ್ ಸದಸ್ಯರನೊಳಗೊಂಡ ಸದಸ್ಯರು ಲಿಖಿತವಾಗಿ ಜಿಲ್ಲಾಧಿಕಾರಿಗಳಿಗೆ ಅವಿಶ್ವಾಸ ಮಂಡನೆಗೆ ಕೋರಿ ಮಾಹಿತಿ ಪತ್ರ ನೀಡಿದರು ಆ ಪ್ರಕಾರ ಸೋಮವಾರ ಪುರಸಭೆ ಸಭಾ ಭವನದಲ್ಲಿ ಉಪಾಧ್ಯಕ್ಷೆ ಸುಧಾ ಜಂತ್ಲಿ ಅದ್ಯಕ್ಷತೆಯಲ್ಲಿ ಪುರಸಭೆ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಮಂಡಿಸಿದರು.
ಸಭೆ ಆರಂಭದಲ್ಲಿ ಮುಖ್ಯಾಧಿಕಾರಿ ಬಿ. ಎಫ್.ಜಿಡ್ಡಿ.  ಅವಿಶ್ವಾಸ ಮಂಡನೆಗಾಗಿ ಸದಸ್ಯರ ಸಂಖ್ಯೆ ಮತ್ತು ಅನುಸರಿಸಬೇಕಾದ ನಿಯಮಾವಳಿಗಳ ಮಾಹಿತಿಯನ್ನು ಸದಸ್ಯರಿಗೆ ತಿಳಿಸಿದರು ಅವಿಶ್ವಾಸ ಪರವಾಗಿ ಕೈ ಎತ್ತುವದನು ತಿಳಿಸಿದ್ದರಿಂದ. ಬಿಜೆಪಿ 4. ಜೆ ಡಿ ಎಸ್10. ಒಬ್ಬ ಪಕ್ಷೇತರ ಸದಸ್ಯ ಸೇರಿ ಒಟ್ಟು 15 ಸದಸ್ಯರ ಬೆಂಬಲ ಅವಿಶ್ವಾಸ ಮಂಡನೆಗೆ ದೊರಕಿತ್ತು. ಕಾಂಗ್ರೆಸನ 8 ಸದಸ್ಯರ ಸಭೆಯಲ್ಲಿ ಪಾಲ್ಗೊಳ್ಳದೆ ಸಭೆ ಮುಕ್ತಾಯ ಹಂತಕ್ಕೆ 4 ಕಾಂಗ್ರೆಸ ಸದಸ್ಯರು ಹಜರಾದರು.
ತಮ್ಮ ವಿರುದ್ದ  ಅವಿಶ್ವಾಸ ಮಂಡನೆಗಾಗಿ ನೋಟಿಸ ನಿಡ್ಡಿದ್ದರಿಂದ ಶನಿವಾರವೆ ಉಪವಿಭಾಗಾಧಿಕಾರಿ ಮಹೇಶ ಕರ್ಜಗಿಯವರಿಗೆ ರಾಜೀನಾಮೆ ಪತ್ರವನ್ನು ನೀಡಿದ್ದಾರೆ. ಪ್ರಭಾರಿ ಅಧ್ಯಕ್ಷರಾಗಿ ಸುಧಾ ಜಂತ್ಲಿ ಮುಂದುವರಿಯಲಿದ್ದಾರೆ.
ಒಟ್ಟು 23 ಸದಸ್ಯರನ್ನು ಹೊಂದಿರುವ ಪುರಸಭೆಯಲ್ಲಿ ಜೆಡಿಎಸ್ 10.ಕಾಂಗ್ರೆಸ 8. ಬಿಜೆಪಿ 4.ಬಿ ಎಸ್ ಆರ್ ನ ಒಬ್ಬ ಸದಸ್ಯರು ಇದ್ದರು ಸುಮಾರು 4 ವರ್ಷಗಳಿಂದ ಯಾವುದೇ ಪ್ರತಿಪಕ್ಷವಿಲ್ಲದೆ ಮೂರು ಪಕ್ಷಗಳ ಒಬ್ಬರಾದ ಮೇಲೋಬ್ಬರು ಆಡಳಿತ ನೆಡೆಸುತ್ತ ಬಂದಿದ್ದರು ಆದರೆ ಅವಿಶ್ವಾಸ ಮಂಡನೆಯಿಂದ 3 ಪಕ್ಷಗಳ ಸ್ನೇಹದಲ್ಲಿ ಬಿರುಕು ಮುಡಿದಂತಾಗಿದೆ.ಮುಖ್ಯಾಧಿಕಾರಿ ಬಿ ಎಫ್ ಜಿಡ್ಡಿ ಹಾಗೂ ಸಿಬಂದಿಗಳು ಉಪಸ್ಥಿತರಿದ್ದರು.

Leave a Comment