ಅಣ್ಣನಿಂದ ತಮ್ಮನ ಕೊಲೆ

ತೆಕ್ಕಲಕೋಟೆ,ಮೇ 19 : ಪಟ್ಟಣದ 14ನೇ ವಾರ್ಡನ ಹುಚ್ಚಿರಪ್ಪ ಗುಡಿ ರಸ್ತೆಯ ಉಪ್ಪಾರ ಓಣಿ ಹಿಂದೆ ವಾಸವಿರುವ ಪಿಂಜಾರು ರಂಜಾನ ಸಾಬ್ ಮಗ ಶಾಷವಲಿ(35) ಯನ್ನು ಆತನ ಅಣ್ಣ ಹುಸೇನಿ ಗುರುವಾರ ಮಧ್ಯರಾತ್ರಿ 11ಗಂಟೆ ಸುಮಾರಿಗೆ ಕೊಲೆ ಮಾಡಿದ ಘಟನೆ ತೆಕ್ಕಲಕೋಟೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಣ್ಣ-ತಮ್ಮಂದಿರ ವೈಮನಸ್ಸಿನಿಂದ ಈ ಘಟನೆಯಾಗಿದೆ ಎಂದು ಮೂಲಗಳು ಹೇಳುತ್ತವೆ. ಕೊಲೆಯಾದ ಸ್ಥಳಕ್ಕೆ ಬಳ್ಳಾರಿ ಡಿ.ವೈ.ಎಸ್.ಪಿ.ಸುರೇಶ, ಅಡಿಸೇನಲ್ ಎಸ್.ಪಿ. ಝಂಡೇಕರ, ಸಿರುಗುಪ್ಪ ಸಿ.ಪಿ.ಐ ನಾಗೀರೆಡ್ಡಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.

Leave a Comment