ಅಣ್ಣನಿಂದಲೇ ತಮ್ಮನ ಕೊಲೆ

ತುಮಕೂರು, ಆ. ೭- ಅಪ್ರಾಪ್ರ ಬಾಲಕನೋರ್ವ ತನ್ನ ತಮ್ಮನನ್ನೇ ಕೊಲೆಗೈದಿರುವ ಧಾರುಣ ಘಟನೆ ಇಲ್ಲಿನ ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯ ಸರಸ್ವತಿಪುರಂನಲ್ಲಿ ತಡ ರಾತ್ರಿ ನಡೆದಿದೆ.

ಸರಸ್ವತಿಪುರಂನ ನಿವಾಸಿ ಲೇಟ್ ಪುಟ್ಟಯ್ಯ ಎಂಬುವರ ಪುತ್ರ ಕಿಶೋರ್ (11) ಎಂಬಾತನೆ ಕೊಲೆಯಾಗಿರುವ ದುರ್ದೈವಿ ಬಾಲಕ. ಈತನ ಅಣ್ಣ ಕಿರಣ್ (17) ಮದ್ಯವ್ಯಸನಿಯಾಗಿದ್ದು, ರಾತ್ರಿ ಚಾಕುವಿನಿಂದ ಹಿರಿದು ತನ್ನ ತಮ್ಮನನ್ನೇ ಹತ್ಯೆ ಮಾಡಿದ್ದಾನೆ.

ಹತ್ಯೆಯಾಗಿರುವ ಕಿಶೋರ್ 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಕೊಲೆಗೈದಿರುವ ಅಣ್ಣ ಕಿರಣ್ ಪಿಯುಸಿ ವಿದ್ಯಾರ್ಥಿ ಎಂದು ತಿಳಿದು ಬಂದಿದೆ. ಈ ಬಾಲಕರ ತಂದೆ ಲೇಟ್ ಪುಟ್ಟಯ್ಯ ಕೇಂದ್ರ ಸರ್ಕಾರಿ ನೌಕರರಾಗಿದ್ದು, ಕಳೆದ 2 ವರ್ಷದ ಹಿಂದೆ ಮರಣ ಹೊಂದಿದ್ದರು. ತಂದೆಯ ಸರ್ಕಾರಿ ನೌಕರಿ ಮಗನಿಗೆ ಅನುಕಂಪದ ಆಧಾರದ ಮೇಲೆ ಸಿಗುವುದರಲ್ಲಿತ್ತು. ಕೊಲೆಯಾಗಿರುವ ಕಿಶೋರ್ ಒಳ್ಳೆಯ ನಡತೆ ಹೊಂದಿದ್ದನು. ಆದರೆ ಕೊಲೆಗೈದಿರುವ ಕಿರಣ ಮದ್ಯವ್ಯಸನಿಯಾಗಿದ್ದು, ಮನಬಂದಂತೆ ನಡೆದುಕೊಳ್ಳುತ್ತಿದ್ದ ಎನ್ನಲಾಗಿದೆ.

ತಂದೆಯ ಕೆಲಸ ತಮ್ಮ ಕಿಶೋರನಿಗೆ ದೊರೆಯುತ್ತದೆ ಎಂದು ತಿಳಿದು ರಾತ್ರಿ ಕೊಲೆಗೈದು ಪರಾರಿಯಾಗಿದ್ದಾನೆ.

ಘಟನೆ ಸುದ್ದಿ ತಿಳಿದ ಕೂಡಲೇ ಜಯನಗರ ಪೊಲೀಸ್ ಠಾಣೆ ಸಬ್ ಇನ್ಸ್‌ಪೆಕ್ಟರ್ ನವೀನ್ ಮತ್ತು ಸಿಬ್ಬಂದಿ ಸ್ಥಳಕ್ಕೆ ತೆರಳಿ ಪರಿಶೀಲಿಸಿ, ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಘಟನಾ ಸ್ಥಳಕ್ಕೆ ತಿಲಕ್ ಪಾರ್ಕ್ ಸರ್ಕಲ್ ಇನ್ಸ್‌ಪೆಕ್ಟರ್ ಪಾರ್ವತಮ್ಮ ಭೇಟಿ ನೀಡಿ ಪರಿಶೀಲಿಸಿದರು.

Leave a Comment