ಅಡ್ಡಾದಿಡ್ಡಿ ಚಲಿಸಿದ ಟೆಂಪೋ ೨ ಕಾರುಗಳು ಜಖಂ

ಬೆಂಗಳೂರು,ಸೆ.೬-ಕಂಠಪೂರ್ತಿ ಕುಡಿದು ಅಡ್ಡಾದಿಡ್ಡಿಯಾಗಿ ಟೆಂಪೋ ಚಾಲನೆ ಮಾಡಿ ಎರಡು ಕಾರುಗಳಿಗೆ ಡಿಕ್ಕಿ ಹೊಡೆದು ಜಖಂಗೊಳಿಸಿರುವ ಘಟನೆ ಬನಶಂಕರಿಯ ಪುಟ್ಟಲಿಂಗಯ್ಯ ಸರ್ಕಲ್ ಬಳಿ ನಡೆದಿದೆ.
ಬಿಬಿಎಂಪಿ ಗುತ್ತಿಗೆ ಪಡೆದಿರುವ ಟೆಂಪೋ ಚಾಲಕ ಅವಿನಾಶ್ ಸರಿಯಾಗಿ ನಿಲ್ಲಲೂ ಆಗದಷ್ಟು ಪಾನಮತ್ತನಾಗಿ ವಾಹನವನ್ನು ಅಡ್ಡಾದಿಡ್ಡಿ ಚಲಾಯಿಸಿಕೊಂಡು ಬಂದು ಪುಟ್ಟಲಿಂಗಯ್ಯ ಸರ್ಕಲ್ ಬಳಿ ನಿಲ್ಲಿಸಿದ್ದ ಎರಡು ಕಾರುಗಳಿಗೆ ಡಿಕ್ಕಿ ಹೊಡೆದಿದ್ದಾನೆ.
ಕಾರು ಜಖಂಗೊಳಿಸಿದನ್ನು ನೋಡಿ ಪ್ರಶ್ನಿಸಲು ಹೋದ ಸಾರ್ವಜನಿಕರಿಗೆ ಅವಾಚ್ಯ ಪದಗಳಿಂದ ನಿಂದಿಸಿದ್ದಾನೆ ಎಂದು ಆರೋಪಿಸಲಾಗಿದೆ.
ಸುದ್ದಿ ತಿಳಿದ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಬನಶಂಕರಿ ಸಂಚಾರ ಪೊಲೀಸರು ಪಾನಮತ್ತ ಚಾಲಕನನ್ನು ವಶಪಡಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ಬಸ್ ಕಾರು ಡಿಕ್ಕಿಓರ್ವ ಸಾವು
ಬೆಂಗಳೂರು,ಸೆ.೬-ಕೆಎಸ್‌ಆರ್‌ಟಿಸಿ ಬಸ್ ಹಾಗೂ ಇಂಡಿಕಾ ಕಾರ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಓರ್ವ ಸ್ಥಳದಲ್ಲೇ ಸಾವನ್ನಪ್ಪಿ ಮೂವ್ವರು ಗಾಯಗೊಂಡಿರುವ ದುರ್ಘಟನೆ ಕನಕಪುರದ ಕೋಡಿಹಳ್ಳಿ ಬಳಿ ನಡೆದಿದೆ.
ಚಿಕ್ಕಬಳ್ಳಾಪುರ ತಾಲೂಕಿನ ಗಿಡ್ಡನಹಳ್ಳಿಯ ಯಲ್ಲಪ್ಪ ಮೃತ ದುರ್ದೈವಿ. ಕೋಡಿಹಳ್ಳಿ ಬಳಿಯ ದೊಡ್ಡಕಬಳ್ಳಿಯ ಮೊಮ್ಮಗಳನ್ನ ನೋಡಲು ಯಲ್ಲಪ್ಪ ಹಾಗೂ ಆತನ ಕುಟುಂಬದವರು ತೆರಳುತ್ತಿದ್ದರು. ಕೋಡಿಹಳ್ಳಿಯ ಪ್ಲಾಂಟೇಷನ್ ಫಾರಂ ಬಳಿಯ ತಿರುವಿನಲ್ಲಿ ಬಸ್ ಹಾಗೂ ಕಾರ್ ನಡುವೆ ಡಿಕ್ಕಿಯಾಗಿದೆ.
ಘಟನೆಯಲ್ಲಿ ಯಲ್ಲಪ್ಪನ ಜೊತೆ ಕಾರಿನಲ್ಲಿದ್ದ ಭೈರೇಗೌಡ, ಶಿವು, ಹಾಗೂ ಲೋಕೇಶ್ ಎಂಬವರಿಗೆ ತೀವ್ರ ಗಾಯಗಳಾಗಿದ್ದು ಅವರನ್ನು ವಿಕ್ಟೋರಿಯ ಆಸ್ಪತ್ರೆಗೆ ಚಿಕಿತ್ಸೆಗಾಗಿ ರವಾನಿಸಲಾಗಿದೆ. ಕೋಡಿಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಬಸ್ ಚಾಲಕನನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

 

 

Leave a Comment