‘ಅಡಚಣೆಗಾಗಿ ಕ್ಷಮಿಸಿ’ ಲಿರಿಕಲ್ ವಿಡಿಯೋ ಬಿಡುಗಡೆ

ಸದ್ಗುಣಮೂರ್ತಿ ನಿರ್ಮಿಸಿರುವ ‘ಅಡಚಣೆಗಾಗಿ ಕ್ಷಮಿಸಿ‘ ಚಿತ್ರಕ್ಕಾಗಿ ಭರತ್ ಎಸ್ ನಾವುಂದ ಬರೆದಿರುವ ‘ತಯಾರಿ ಜರೂರಿ‘ ಎಂಬ ಹಾಡಿನ ಲಿರಿಕಲ್ ವಿಡಿಯೋ ಹೊಸವರ್ಷದ ಆರಂಭದ ದಿನ ಬಿಡುಗಡೆಯಾಗಲಿದೆ.

ಲಿರಿಕಲ್ ವಿಡಿಯೋಗಾಗಿ ಪಾಂಡಿಚೆರಿಯಲ್ಲಿ ಚಿತ್ರೀಕರಣ ಮಾಡಲಾಗಿದೆ. ಹಾಡು ಜೆಂಕಾರ್ ಮ್ಯೂಸಿಕ್ ಮುಲಕ ಯೂಟ್ಯುಬ್‌ನಲ್ಲಿ ಬಿಡುಗಡೆಯಾಗಲಿದೆ.  ಸುಶೀಲ್ ನಂಬಿಯಾರ್  ಛಾಯಾಗ್ರಹಣವಿದೆ. ಚೇತನ್ ಗಂಧರ್ವ ಹಾಗೂ ಲಕ್ಷ್ಮೀ ವಿಜಯ್ ಹಾಡನ್ನು ಹಾಡಿದ್ದಾರೆ. ಪ್ರದೀಪ್ ವರ್ಮ ಅಭಿನಯಿಸಿದ್ದಾರೆ.

ಸಾಮಾನ್ಯವಾಗಿ ಲಿರಿಕಲ್ ವಿಡಿಯೋ ಚಿತ್ರೀಕರಣ ಮಾಡುವಾಗ ಛಾಯಾಚಿತ್ರ ಹಾಗೂ ಚಿತ್ರದ ಮೇಕಿಂಗ್  ಬಳಸುತ್ತಾರೆ. ಆದರೆ ಲಿರಿಕಲ್ ವಿಡಿಯೋವನ್ನು ಆಲ್ಬಂ ಸಾಂಗ್ ರೀತಿ ಪಾಂಡಿಚೆರಿಯಲ್ಲಿ ಚಿತ್ರೀಕರಣ ಮಾಡಿದ್ದೇವೆ. ನನಗೆ ತಿಳಿದ ಹಾಗೆ ಕನ್ನಡಲ್ಲಿ ಇದು ಮೊದಲ ಪ್ರಯತ್ನ ಎನ್ನುತ್ತಾರೆ. ಚಿತ್ರದ ಸಂಗೀತ ನಿರ್ದೇಶಕ ಹಾಗೂ ನಟ ಎಸ್.ಪ್ರದೀಪ್ ವರ್ಮ.

ಭರತ್ ಎಸ್ ನಾವುಂದ್ ಚಿತ್ರದ ನಿರ್ದೇಶಕರು.. ಸೈಕಲಾಜಿಕಲ್ ಥ್ರಿಲ್ಲರ್ ಕಥಾ ಹಂದರ ಹೊಂದಿರುವ  ಚಿತ್ರ ಸದ್ಯದಲ್ಲೇ ತೆರೆಗೆ ಬರಲಿದೆ. ರವಿವರ್ಮ ಛಾಯಾಗ್ರಹಣ ಹಾಗೂ ಅರ್ಜುನ್ ಕಿಟ್ಟು ಸಂಕಲನ ಈ ಚಿತ್ರಕ್ಕಿದೆ.

Leave a Comment