ಅಟ್ಟಯ್ಯ ವರ್ಸಸ್ ಹಂದಿ ಕಾಯೋಳು

  • ಪ್ರಕಾಶ್

ಸ್ಯಾಂಡಲ್‌ವುಡ್‌ನಲ್ಲಿ  ವಿನೂತನ ರೀತಿಯಲ್ಲಿ ಚಿತ್ರದ ಶೀರ್ಷಿಕೆಗಳು ಬರುತ್ತಿವೆ. ಇದರ ಸಾಲಿಗೆ ’ಅಟ್ಟಯ್ಯ ವರ್ಸಸ್ ಹಂದಿ ಕಾಯೋಳು’ ಸಿನಿಮಾವು ಸೇರ್ಪಡೆಯಾಗಿದೆ.

attaya-vs-handi-kayolu-_106

ಹೊಸಬರೇ ಸೇರಿಕೊಂಡು ಸಿದ್ದಪಡಿಸಿರುವುದರಿಂದ ಅಟ್ಟಯ್ಯ ವರ್ಸಸ್ ಹಂದಿ ಕಾಯೋಳು’ ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮವು ಕಳೆದ ಮಂಗಳವಾರ ನಡೆಯಿತು ಕಾರ್ಯಕ್ರಮದಲ್ಲಿ ಚಿತ್ರಕತೆ, ಸಾಹಿತ್ಯ, ಸಂಭಾಷಣೆ, ಒಂದು ಹಾಡಿಗೆ ಕಂಠದಾನ ಮಾಡಿ, ಸಣ್ಣ ಪಾತ್ರಕ್ಕೆ ಬಣ್ಣ ಹಚ್ಚಿ, ನಿರ್ದೇಶನ ಮಾಡಿರುವ ಲೋಕೇಂದ್ರ ಸೂರ್ಯ  ಮಾತನಾಡಿ, ಗಾಂಧಿನಗರ ಸೂತ್ರದಿಂದ ಹೊರಬಂದು ಚಿತ್ರ ಮಾಡಲಾಗಿದೆ. ಟೈಟಲ್‌ನ್ನು ನೊಂದಣಿ ಮಾಡಿಸಲು ವಾಣಿಜ್ಯ ಮಂಡಳಿಗೆ ಅರ್ಜಿ   ಸಲ್ಲಿಸಿದಾಗ, ಎರಡು  ಭೇಟಿ ನಂತರ ಅನುಮೋದನೆ ನೀಡಿದರು.

attaya-vs-handi-kayolu-_128ಮಳವಳ್ಳಿ ಪೋಲೀಸ್ ಠಾಣೆ ವ್ಯಾಪ್ತಿಯಲ್ಲಿ  ನಡೆದ ಘಟನೆಗೆ  ಕೃತಕ ಸನ್ನಿವೇಶಗಳನ್ನು ಸೃಷ್ಟಿಸಲಾಗಿದೆ. ಹಂದಿಯೊಂದಿಗೆ ಶುರುವಾಗಿ, ಮುಂದೆ ಬೆಳಕವಾಡಿ ಗ್ರಾಮದಲ್ಲಿ ಜೋಡಿ ಕೊಲೆಯಾಗುತ್ತದೆ.  ಪೋಲಿಸರು ಯಾವ ರೀತಿಯಲ್ಲಿ ತನಿಖೆ ಮಾಡಿ, ಅಪರಾಧಿಗಳನ್ನು ಬಂಧಿಸಿದರು ಎಂದು ತೋರಿಸಲಾಗಿದೆ. ಮುಂದೆ ಹೇಳಿದರೆ ಚಿತ್ರದ ಸಾರಾಂಶ ತಿಳಿಯುತ್ತದೆ. ಎಂದು ಮಾಹಿತಿ ನೀಡಿದರು.

ಕಾಮಿಡಿ ಟಾಕೀಸ್‌ದಲ್ಲಿ ನಟಿಸಿರುವ ಅರ್ಜುನ್‌ಕೃಷ್ಣಾ ನಾಯಕ. ಗೌಡರ ಮಗಳು, ಕಾಲೇಜು ಜೀವನದಲ್ಲಿ  ಪ್ರೀತಿಯಲ್ಲಿ ಬಿದ್ದು, ಅಪ್ಪ-ಅಮ್ಮನಿಂದ ವಿರೋಧ ಕಟ್ಟಿಕೊಳ್ಳುವ ತುಮಕೂರಿನ ಚೈತ್ರಾ  ನಾಯಕಿ. ವೃತ್ತಿಯಲ್ಲಿ ಶಿಕ್ಷಕ, ಶೀರ್ಷಿಕೆಯಲ್ಲಿರುವ ಅಟ್ಟಯ್ಯನಾಗಿ ಮಹದೇವಯ್ಯ ಮುಂತಾದವರು ಅವಕಾಶ ನೀಡಿದ್ದಕ್ಕೆ ಧನ್ಯವಾದ ಸಲ್ಲಿಸಿದರು.

ಎರಡು ಹಾಡುಗಳಿಗೆ ಸಂಗೀತ ಸಂಯೋಜಿಸಿರುವುದು ಯಶವಂತ್‌ಭೂಪತಿ, ಸಂಕಲನ ಲಕ್ಕ್ಕಿಪ್ರದೀಪ್ ಮತ್ತು ವಿನಯ್‌ಕೂಗ್, ನೃತ್ಯ ರಾಮು, ಛಾಯಗ್ರಹಣ ವಿಜಯ್‌ಚಂದ್ರ ನಿರ್ವಹಿಸಿದ್ದಾರೆ. ಹಂದಿ ಕಾಯೋಳು ಕಲಾವಿದೆಯನ್ನು ಪರಿಚಯಿಸಲಿಲ್ಲ. ಮಲ್ಲತ್‌ಹಳ್ಳಿಯ ಲೋಕೇಶ್‌ಗೌಡ.ಎಂ.ಬಿ ನಿರ್ಮಾಪಕರಾಗಿ ಹೊಸ ಅನುಭವ ಎನ್ನುವಲ್ಲಿಗೆ ಸುಂದರ ಕಾರ್ಯಕ್ರಮಕ್ಕೆ  ಮಂಗಳ ಹಾಡಲಾಯಿತು.  ಸದ್ಯದಲ್ಲೆ ಸೆನ್ಸಾರ್‌ಗೆ ಹೋಗಲಿದ್ದು, ಮುಂದಿನ ತಿಂಗಳು ಬಿಡುಗಡೆ ಮಾಡಲು ಯೋಜನೆಕೈಗೊಳ್ಳಲಾಗಿದೆ.

Leave a Comment