ಅಟಲ್ ಬಿಹಾರಿ ವಾಜಪೇಯಿ ಅಭಿಮಾನಿಗಳಿಂದ ಶ್ರದ್ದಾಂಜಲಿ

ಚಾಮರಾಜನಗರ, ಆ.18- ಅಟಲ್ ಬಿಹಾರಿ ವಾಜಪೇಯಿ ಅವರು ನಮ್ಮ ದೇಶದ ಅಭಿವೃದ್ದಿಗೆ ಹೆಚ್ಚು ಒತ್ತು ನೀಡಿದ ಮೊದಲ ಪ್ರಧಾನಿ ಮಂತ್ರಿಯಾಗಿದ್ದರು. ಅವರು ಎಲ್ಲಾ ಪಕ್ಷದ ಮುಖಂಡ ಜೊತೆ ಸ್ನೇಹದಿಂದ ವರ್ತಿಸುತ್ತಿದ್ದರು. ಇಂತಹ ಮಹಾಪುರುಷ ಜನ ಮೆಚ್ಚಿನ ರಾಜಕಾರಣಿಯನ್ನು ಕಳೆದುಕೊಂಡು ನಾವು ಅನಾಥರಾಗಿದ್ದೆವೆ ಎಂದು ಮಾಜಿ ನಗರಸಭಾ ಸದಸ್ಯ ಸುದರ್ಶನ್‍ಗೌಡ ತಿಳಿಸಿದರು.
ನಗರದ ನೃಪತುಂಗ ವೃತ್ತದಲ್ಲಿ ಮಾಜಿ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಶ್ರದ್ದಾಂಜಲಿ ಸಲ್ಲಿಸಿ ಮಾತನಾಡಿದರು. ನಾನು ರಾಜಕಿಯ ಪ್ರವೇಶಕ್ಕೆ ಅವರ ಮಾರ್ಗದರ್ಶನವೇ ಕಾರಣ ಇಂತಹ ರಾಜಕಾರಣಿ ನಮಗೆ ಸ್ಪೂರ್ತಿಯಾಗಿದ್ದರು.ಇವರು ಅಗಲಿ ನಮ್ಮ ದೇಶಕ್ಕೆ ನಷ್ಟವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ 1 ನಿಮಿಷ ಮೌನ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಅಟಲ್ ಬಿಹಾರಿ ವಾಜಪೇಯಿರವರ ಮೆಚ್ಚಿನ ಅಭಿಮಾನಿಗಳಾದ ವಿಜಯ್‍ಕುಮಾರ್‍ಗೌಡ, ಮಂಜುನಾಥಗೌಡ, ಶಿವಣ್ಣ, ನಾಗೇಂದ್ರಗೌಡ, ಎಂನಾಗರಾಜು, ಕಾರ್‍ಪ್ರಭುಸ್ವಾಮಿ, ನಂಜುಂಡಸ್ವಾಮಿ.ಶಿವಕುಮಾರ್,ಕಾಳನಾಯ್ಕ, ಕುಮಾರ್ ಹಾಗೂ ಇನ್ನು ಮುಂತಾದವರು ಹಾಜರಿದ್ದರು.

Leave a Comment