ಅಟಲ್ ಜೀಗೆ ಶ್ರದ್ದಾಂಜಲಿ

ಹರಪನಹಳ್ಳಿ.ಆ.18; ಅಧಿಕಾರವಧಿಯಲ್ಲಿ ನೆರೆಯ ರಾಷ್ಟ್ರಗಳನ್ನು ಮಿತ್ರರಂತೆ ಕಂಡು ದೇಶದ ಅಭ್ಯುದಯಕ್ಕೆ ದುಡಿದಿದ್ದಾರೆ. ಅಂಥವರ ಆದರ್ಶಮಯ ಜೀವನ ಎಲ್ಲರಿಗೂ ಮಾದರಿಯಾಗಿದೆ ಎಂದು ಜಿಲ್ಲಾ ಬಿಜೆಪಿ ಯುವ ಘಟಕ ಎಸ್ಟಿ ಮೋರ್ಚಾ ಅಧ್ಯಕ್ಷ ಟಿ.ಎ.ಮಜೋಜ್ ಹೇಳಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಶ್ರದ್ದಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು. ಸರಳ ವ್ಯಕ್ತಿತ್ವ, ಸಜ್ಜನ ರಾಜಕಾರಣಿ ವಾಜಪೇಯಿ ದೇಶಕ್ಕಾಗಿ ಪ್ರಾಣವನ್ನು ಮುಡುಪಿಟ್ಟು ಮೂರು ಬಾರಿ ಪ್ರಧಾನಿಯಾಗಿ ಸಲ್ಲಿಸಿದ ಸೇವೆ ಅನನ್ಯ. ವಿರೋಧ ಪಕ್ಷದವರನ್ನು ಮಿತ್ರರಂತೆ ಕಾಣುವ ಹೃದಯ ವೈಶಾಲತೆ ಹೊಂದಿದ್ದ ವಾಜಪೇಯಿ ಅವರನ್ನು ಕಳೆದುಕೊಂಡ ಈ ದೇಶ ಬರಿದಾಗಿದೆ ಎಂದರು. ಮುಖಂಡರಾದ ಮಾಡ್ಲೀಗೇರಿ ನಾಗರಾಜ್, ಪಾನ್‍ಶಾಪ್ ಶ್ರೀನಿವಾಸ್, ಎಂ.ಅಂಜಿನಪ್ಪ, ನೀಲಗುಂದ ತಿಮ್ಮೇಶ್ ಮತ್ತಿರರಿದ್ದರು.

Leave a Comment