ಅಟಲ್‍ಜೀ ಛಾಯಾಚಿತ್ರ ಉದ್ಘಾಟನೆ ನಾಳೆ

ಹುಬ್ಬಳ್ಳಿ ಸೆ 14 –    ಡಾ. ಗಂಗೂಬಾಯಿ ಹಾನಗಲ್ ಮ್ಯೂಸಿಕ್ ಪೌಂಡೇಶನ್ ಇವರ ವತಿಯಿಂದ   ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ  ಛಾಯಾಚಿತ್ರ   ಉದ್ಘಾಟನೆಯನ್ನು  ನಾಳೆ ಮು. 11 ಗಂಟೆಗೆ  ಇಲ್ಲಿಯ ದೇಶಪಾಂಡೆನಗರದ  ಡಾ. ಗಂಗೂಬಾಯಿ ಹಾನಗಲ್‍ರವರ ನಿವಾಸದಲ್ಲಿ   ಮಾಜಿ ಮುಖ್ಯಮಂತ್ರಿ, ಶಾಸಕ ಜಗದೀಶ ಶೆಟ್ಟರ್ ಹಾಗೂ ಸಂಸದ ಪ್ರಹ್ಲಾದ್ ಜೋಶಿ  ಅವರು ಉದ್ಘಾಟಿಸುವರು.
ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ,  ಹು-ಧಾ ಮಹಾಪೌರ ಸುಧೀರ ಸರಾಫ,  ಮಾಜಿ ಶಾಸಕ ಅಶೋಕ ಕಾಟವೆ,  ಮೋಹನ ಲಿಂಬಿಕಾಯಿ,  ನಾಗೇಶ ಕಲಬುರ್ಗಿ,    ಡಿ. ಗೋವಿಂದರಾವ್,  ರವಿ ನಾಯಕ್,  ಲಿಂಗರಾಜ ಪಾಟೀಲ್,  ಮಹೇಶ ಟೆಂಗಿನಕಾಯಿ,  ಭಾರತಿ ಮಹೇಶ ಸೇರಿದಂತೆ ಇನ್ನಿತರರು ಪಾಲ್ಗೊಳ್ಳಲಿದ್ದಾರೆ.

Leave a Comment