ಅಟಲಜಿ ಚಿತಾಭಸ್ಮಕ್ಕೆ ಗೌರವ ಸಮರ್ಪಣೆ

ಧಾರವಾಡ,ಆ27: ಅಪ್ರತಿಮ ವಾಗ್ಮಿ, ಮಹಾನ್ ದೇಶಭಕ್ತ, ಮಾಜಿ ಪ್ರಧಾನಿ, ಜನನೇತಾ, ಭಾರತರತ್ನ ದಿವಂಗತ ಅಟಲ ಬಿಹಾರಿ ವಾಜಪೇಯಿಯವರ ಚಿತಾಭಸ್ಮವಿದ್ದ ಕುಂಡಲಕ್ಕೆ ಇಲ್ಲಿಯ ಉತ್ತರ ಕರ್ನಾಟಕ ಸೈನಿಕರ ಕಲ್ಯಾಣ ಸಮಿತಿ ಹಾಗೂ ಪುರಸ್ಕಾರ ಸಂಸ್ಥೆಗಳ ಪರವಾಗಿ ಪದಾಧಿಕಾರಿಗಳಾದ ಕೃಷ್ಣ ಜೋಶಿ, ಚಂದ್ರಶೇಖರ ಅಮಿನಗಡ, ಪ್ರಾಣೇಶ ಪಾಶ್ಚಾಪೂರ, ಮುರಳಿಧರರಾವ, ಎ.ಆರ್. ಜೋಶಿ, ಸತೀಶ ಪಾಟೀಲ, ಬಿ. ಆರ್. ದೇಸಾಯಿ ಮತ್ತಿತರರು ಗೌರವ ಸಲ್ಲಿಸಿದರು.
ಅಟಲಜಿಯವರು ಕಡಪಾ ಮೈದಾನದಲ್ಲಿ ಮಾಡಿದ ಭಾಷಣಗಳ ಮೆಲುಕು ಹಾಕಿದ ಕೃಷ್ಣ ಜೋಶಿಯವರು, ಅವರಿಗೆ ಮಾಲಾರ್ಪಣೆ ಮಾಡಿದ್ದನ್ನು ಸ್ಮರಿಸಿ, ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ವೀರಮರಣವನ್ನು ಹೊಂದಿದ ವೀರಜವಾನರ ದೇಹಗಳನ್ನು ಅವರವರ ಊರುಗಳಿಗೆ ಕಳಿಸಿ, ಆ ನಾಡಿನ ಗೌರವ ಸಮರ್ಪಿಸಲು ಕಾರಣರಾಗಿದ್ದರು ಎಂದು ಸ್ಮರಿಸಿದರು.

Leave a Comment