ಅಜ್ಜನ ಆಗಮನ

ಬಹಳ ದಿನಗಳ ನಂತರ ಹಿರಿಯ ನಿರ್ದೇಶಕ ವೇಮಗಲ್ ಜಗನ್ನಾಥ್ ರಾವ್ ’ಅಜ್ಜ’ನ ಸಹವಾಸ ಮಾಡಿದ್ದಾರೆ. ಅರ್ಥಾಥ್ ಅಜ್ಜ ಚಿತ್ರದ ಮೂಲಕ ಮತ್ತೊಮ್ಮೆ ಚಿತ್ರರಂಗದಲ್ಲಿ ತಮ್ಮ ಅದೃಷ್ಠ ಪರೀಕ್ಷೆಗೆ ಮುಂದಾಗಿದ್ದಾರೆ. ಚಿತ್ರದಲ್ಲಿ ಅಜ್ಜನಾಗಿ ಹಿರಿಯ ನಟ ದತ್ತಣ್ಣ ಕಾಣಿಸಿಕೊಂಡಿದ್ದಾರೆ.

ವಿಭಿನ್ನ ಕಥೆ, ಹಾರರ್ ಥ್ರಿಲ್ಲರ್ ಅಂಶವಿರುವ ಚಿತ್ರವನ್ನು ಸಾಮಾಜಿಕ ಕಳಕಳಿಯೊಂದಿಗೆ ತೆರೆಗೆ ತರಲು ಮುಂದಾಗಿದ್ದಾರೆ. ರಾಜ್ಯ ಸರ್ಕಾರ ಇತ್ತೀಚೆಗೆ ವೈದ್ಯಕೀಯ ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ ಗ್ರಾಮೀಣ ವೈದ್ಯಕೀಯ ಸೇವೆ ಮಾಡಲು ಆದೇಶಿಸಿದೆ. ಇದೇ ವಿಷಯವನ್ನು ಮುಂದಿಟ್ಟುಕೊಂಡು ನಿರ್ದೇಶಕರು ಚಿತ್ರವನ್ನು ತೆರೆಗೆ ತರಲು ಮುಂದಾಗಿದ್ದಾರೆ.

ajja_169

ಚಿತ್ರದಲ್ಲಿ ದೀಪಕ್ ರಾಜ್, ರಾಜ್ ಪ್ರವೀಣ್,ಆಶ್ವಿನಿ ಮತ್ತು ಮಾಧುರಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಗ್ರಾಮೀಣ ಸೇವೆ ಮಾಡಲು ಹಳ್ಳಿಗೆ ಹೋಗುವ ಈ ನಾಲ್ವರು ಹುಡುಗರಿಗೆ ತಾತ, ಮೊಮ್ಮಗಳ  ಸುತ್ತ ಕಥೆ ಸಾಗಿದೆ. ಕಾರವಾರ, ಉಡುಪಿ, ಸೇರಿದಂತೆ ಮತ್ತಿತರ ಕಡೆ ಚಿತ್ರೀಕರಣ ಮಾಡಲಾಗಿದೆ ಚಿತ್ರ ಚೆನ್ನಾಗಿ ಮೂಡಿ ಬಂದಿದೆ ಎಲ್ಲರ ಸಹಕಾರ ಮತ್ತು ಬೆಂಬಲ ಅಗತ್ಯ ಎಂದು ಕೇಳಿಕೊಂಡರು.

ಚಿತ್ರಕ್ಕೆ ಚಿದಾನಂದ್ ಬಂಡವಾಳ ಹಾಕಿದ್ದು ಅವರ ಪುತ್ರಿ ಬೇಬಿ ಪೃಥ್ವಿ ಮೊಮ್ಮೊಗಳ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕಳೆದ ವಾರ ಚಿತ್ರದ ಧ್ವನಿ ಸುರುಳಿ ಬಿಡುಗಡೆ ಸಮಾರಂಭವಿತ್ತು. ವಾಣಿಜ್ಯ ಮಂಡಳಿಯ ಅಧ್ಯಕ್ಷ ಎಸ್.ಎ ಚಿನ್ನೇಗೌಡ ಸೇರಿದಂತೆ ಹಲವರು ಆಗಮಿಸಿ ಚಿತ್ರಕ್ಕೆ ಮತ್ತು ತಂಡಕ್ಕೆ ಶುಭ ಹಾರೈಸಿದರು. ಈ ವೇಳೆ ದತ್ತಣ್ಣ ಅವರ ಕೆಲಸ ಮತ್ತು ಪ್ರತಿಭೆಯನ್ನು ಚಿನ್ನೇಗೌಡ ಹಾಡಿ ಹೊಗಳಿದರು.

ajja_163

ಈ ವೇಳೆ ಮಾತಿಗಿಳಿದ ಹಿರಿಯ ನಟ ದತ್ತಣ್ಣ, ನಿರ್ದೇಶಕರು ಚಿತ್ರದಲ್ಲಿ ಹಲವು ಶಾಕ್ ನೀಡಿದ್ದಾರೆ. ಚಿತ್ರ ಎಲ್ಲರಿಗೂ ಇಷ್ಟವಾಗಲಿದೆ ಎನ್ನುವ ವಿಶ್ವಾಸ ವ್ಯಕ್ತ ಪಡಿಸಿದರು. ಸಾಯಿ ಕಿರಣ್ ಚಿತ್ರಕ್ಕೆ ಐದು ಹಾಡುಗಳಿಗೆ ಸಂಗೀತ ನೀಡಿದ್ದಾರೆ.

Leave a Comment