ಅಜ್ಜನಾದ ದತ್ತಣ್ಣ: ಕೊನೆಯ ಹಂತಕ್ಕೆ ಭರದ ಚಿತ್ರೀಕರಣ

ಚಿಕ್ಕನೆಟಕುಂಟೆ ಜಿ.ರಮೇಶ್
ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಪಾತ್ರಗಳ ಮೂಲಕ ತಮ್ಮ ಪ್ರತಿಭೆ ಮತ್ತು ಸಾಮರ್ಥ್ಯವನ್ನು ಸಾಬೀತು ಮಾಡಿರುವ ಹಿರಿಯ ಕಲಾವಿದ ದತ್ತಣ್ಣ ಅಜ್ಜ ನಾಗಿ ಬಡ್ತಿ ಪಡೆದಿದ್ದಾರೆ. ಅವರು ವಯಸ್ಸಿನಲ್ಲಿ ಅಜ್ಜನೇ. ಆದರೆ ದತ್ತಣ್ಣ ಅವರನ್ನು ತೆರೆಯ ಮೇಲೆ ಅಜ್ಜನನ್ನಾಗಿಸಿದ್ದಾರೆ ಹಿರಿಯ ಚಿತ್ರ ಜೀವನದಲ್ಲಿ ಹಿರಿಯ ನಿರ್ದೇಶಕ ವೇಮಗಲ್ ಜಗನ್ನಾಥರಾವ್.

ಈ ಮೂಲಕ ಅಜ್ಜನ್ನು ಮುಂದಿಟ್ಟುಕೊಂಡು ಚಿತ್ರರಂಗದ ಗಮನ ಸೆಳೆಯಲು ಮುಂದಾಗಿದ್ದಾರೆ. ಚಿತ್ರಕ್ಕೆ ಈಗಾಗಲೇ ಮೊದಲ ಹಂತದ ಚಿತ್ರೀಕರಣವನ್ನು ಪೂರ್ಣಗೊಂಡಿದೆ. ಮೈಸೂರಿನ ಕೆ ಪಿ ಚಿದಾನಂದ್  ನಿರ್ಮಾಣದಲ್ಲಿ ಚಿತ್ರ ಮೂಡಿ ಬರುತ್ತಿದೆ. ೧೮ ದಿವಸಗಳಲ್ಲಿ ಮಡಿಕೇರಿ ಸುತ್ತ ಮುತ್ತ ಸಂಪೂರ್ಣಗೊಳಿಸಿ ಅಂತಿಮ ಹಂತದ  ಚಿತ್ರೀಕರಣಕ್ಕೆ ತಂಡ ಮುಂದಾಗಿದೆ.

ಕುಮಟಾ, ಬಸರೂರು ಹಾಗೂ ಇತರ ಸ್ಥಳಗಳಲ್ಲಿ ಹತ್ತು ದಿನಗಳ ಕಾಲ ಚಿತ್ರೀಕರಣ ಮಾಡಲು ಚಿತ್ರತಂಡ ಮುಂದಾಗಿದೆ. ಎರಡು ಭಾರಿ ಅತ್ಯುತ್ತಮ ಪೋಷಕ ಕಲಾವಿದ  ರಾಷ್ಟ್ರ ಪ್ರಶಸ್ತಿ ಪಡೆದಿರುವ ದತ್ತಣ್ಣ ‘ಅಜ್ಜ’ನಾಗಿ ವೈವಿಧ್ಯಮಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಶೀರ್ಷಿಕೆಗೆ ‘ಆನ್ ಟೋಲ್ಡ್ ರಿಯಲ್ ಮಿಸ್ಟರಿ’ ಎಂದು ಉಪ ಶೀರ್ಷಿಕೆ ಇಟ್ಟುಕೊಂಡಿದ್ದಾರೆ. ಇದು ಕುತೂಹಲ ತುಂಬಿರುವ ಕಥಾವಸ್ತು. ಅಂದರೆ ಈ ‘ಅಜ್ಜ’ನ ಬಗ್ಗೆ ತಿಳಿದುಕೊಳ್ಳಬೇಕು. ಈತ ಮಹಾನ್ ಬುದ್ದಿಜೀವಿ, ಟೆಲಿಪತಿ ಕೂಡಾ ಗೊತ್ತು, ಚಿತ್ರ ಬಿಡುಸುವುದರಲ್ಲಿಯೂ ನಿಸ್ಸೀಮ. ಈ ‘ಅಜ್ಜ’ ಇರುವ ಮನೆಗೆ ನಾಲ್ಕು ಜನ ವೈದಕೀಯ ವಿಧ್ಯಾರ್ಥಿಗಳ ತಂಡ ಬರುವುದು. ಹಳ್ಳಿಯ ಗುಡ್ಡಗಾಡು ಪ್ರದೇಶದಲ್ಲಿ ಉಚಿತ ವೈದ್ಯಕೀಯ ಸೌಲಭ್ಯ ನೀಡುವ ಈ ತಂಡ ಹೇಗೆ ಸಿಕ್ಕಿಹಾಕಿಕೊಂಡು ಹೋರಾಟ ನಡೆಸುವ ಸಂದರ್ಭ ಎಂಬುದು ಚಿತ್ರದ ಕಥಾ ಹಂದರವೊಂದಿದೆ.

ದತ್ತಣ್ಣ ಅವರ ಜೊತೆ ಬೇಬಿ ಕೃತಿಶ್ರೀ, ದೀಪಕ್ ರಾಜ್, ರಾಜ್ ನವೀನ್, ಮಾಧುರಿ, ಆಶಿನಿ, ಲತೀಶ್ ಕೂರ್ಗ್ ಹಾಗೂ ಇನ್ನಿತರರು ತಾರಾಗಣದಲ್ಲಿ ಇದ್ದಾರೆ. ಸಾಯಿ ಕಿರಣ್ ಎರಡು ಹಾಡುಗಳಿಗೆ ರಾಗ ಸಂಯೋಜನೆ ಮಾಡಲಿದ್ದಾರೆ, ರಾಜು ಶಿರಾಳಕೊಪ್ಪ ಚಿತ್ರದ ಛಾಯಾಗ್ರಾಹಕರು. ಶಿವಯಾದವ್ ಸಂಕಲನ ಇದೆ.

ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಹಿರಿಯ ನಟ ದತ್ತಣ್ಣ, ಅಜ್ಜನಾಗಿ ಕಾಣಿಸಿಕೊಂಡಿದ್ದಾರೆ. ಇದುವರಗೂ ಮಾಡಿರುವ ಪಾತ್ರಗಳಲ್ಲಿ ಅಜ್ಜ ದತ್ತಣ್ಣನಿಗೆ ವಿಶೇಷವಾದುದು.

Leave a Comment