ಅಜರಾಮರ ಮುಂದಿನವಾರ

ಹೊಸಬರೇ ಇರುವ ಅಜರಾಮರ ಮುಂದಿನವಾರ ತೆರೆಗೆ ಬರುತ್ತಿದೆ. ನಾಯಕ ತಾರಕ್, ನಾಯಕಿ ರೋಶಿನಿ, ನಿರ್ದೇಶಕ ರವಿ ಕಾರಂಜಿ ಸೇರಿದಂತೆ ಇಡೀ ತಂಡಕ್ಕೆ ಮೊದಲ ಪ್ರಯತ್ನ.

ಸಾಮಾನ್ಯ ಹುಡುಗನೊಬ್ಬ ಅಪ್ರತಿಮ ಸಾಧನೆ ಮಾಡುವ ಮೂಲಕ ಎಲ್ಲರ ಮೆಚ್ಚುಗೆ ಪಡೆಯುತ್ತಾನೆ ಅಂತಹ ತಿರುಳನ್ನು ಮುಂದಿಟ್ಟುಕೊಂಡು ಸಿನಿಮಾ ಮಾಡಲಾಗಿದೆ ಎಂದು ಮಾತಿಗಿಳಿದರು ನಿರ್ದೇಶಕ ರವಿ ಕಾರಂಜಿ.

ಇದು ಮೊದಲ ಚಿತ್ರ. ಪ್ರತಿಭಾವಾನ್ವಿತರೇ ಹೆಚ್ಚಾಗಿ ಇದ್ದಾರೆ. ಪ್ರತಿಭಾನ್ವಿತ ಯುವಕನ ಬಾಳಲ್ಲಿ ಹುಡುಗಿಯೊಬ್ಬಳು ಪ್ರವೇಶಿಸುತ್ತಾಳೆ. ಆ ಬಳಿಕ ಏನೆಲ್ಲಾ ಆಗಲಿದೆ ಎನ್ನುವುದು ಚಿತ್ರದ ತಿರುಳು. ಚಿತ್ರವನ್ನು ವೀಕ್ಷಿಸಿದ ಸೆನ್ಸಾರ್ ಮಂಡಳಿ ಯಾವುದೇ ಕಟ್ ಹೇಳದೆ ಒಳ್ಳೆಯ ಚಿತ್ರ ಮಾಡಿದ್ದೀರ ಎಂದು ಬೆನ್ನು ತಟ್ಟಿ ಪ್ರೋತ್ಸಾಹ ನೀಡಿರುವುದು ಖುಷಿ ಕೊಟ್ಟಿದೆ. ಚಿತ್ರದಲ್ಲಿ ಯಾವುದೇ ಕೆಟ್ಟ ಸಂಭಾಷಣೆಗಳು ಇಲ್ಲ. ಚಿತ್ರವನ್ನು ಕುಟುಂಬ ಸಮೇತ ಎಲ್ಲರೂ ನೋಡಿ ಮೆಚ್ಚಿಕೊಳ್ಳುತ್ತಾರೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು.

ನಾಯಕ ತಾರಕ್, ಮೊದಲ ಚಿತ್ರ, ಚಿತ್ರದ ಬಗ್ಗೆ ಜನರಿಂದ ಈಗಾಗಲೇ ವ್ಯಕ್ತವಾಗಿರುವ ಮಾತುಗಳನ್ನು ಕೇಳಿ ಖುಷಿಯಾಗಿದೆ. ಹೊಸಬರ ಹೊಸ ಪ್ರಯತ್ನಕ್ಕೆ ಬೆಂಬಲ ನೀಡಿ ನಿಮ್ಮ ನಿರೀಕ್ಷೆಯನ್ನು ಎಲ್ಲಿಯೂ ಹುಸಿ ಮಾಡುವುದಿಲ್ಲ ಎಂದು ಭರವಸೆ ನೀಡಿದರು.

ನಾಯಕಿ ರೋಶಿನಿ, ಹೊಸಬರಾದರೂ ಪಾತ್ರಕ್ಕೆ ನ್ಯಾಯ ಒದಗಿಸಿದ್ದೇವೆ. ಚಿತ್ರ ನೋಡಿದ ಮಂದಿಗೆ ಹೊಸಬರು ಅನ್ನಿಸುವುದೇ ಇಲ್ಲ ಎಲ್ಲರ ಬೆಂಬಲ ಮತ್ತು ಸಹಕಾರ ಬೇಕು ಎಂದು ಕೇಳಿಕೊಂಡರು.

ಚಿತ್ರಕ್ಕೆ ಡೇವಿಡ್ ಬಾಂಜಿ ಬಂಡವಾಳ ಹಾಕಿದ್ದು, ಅಭಯ್ ಜಿ.ಗಂಜ್ಯಾಳ ಸಹ ನಿರ್ಮಾಪಕರಾಗಿದ್ದಾರೆ. ಹೊಸಬರು ಚಿತ್ರರಂಗದ ಒಳ ಹೊರಗು ಗೊತ್ತಿಲ್ಲ. ಒಳ್ಳೆಯ ಚಿತ್ರ ಮಾಡುವುದು ನಮ್ಮ ಉದ್ದೇಶ ಎಲ್ಲರ ಸಹಕಾರ ಮತ್ತು ಬೆಂಬಲ ಬೇಕು ಎಂದು ಕೇಳಿಕೊಂಡರು.

ಹಿರಿಯ ಛಾಯಾಗ್ರಾಹಕ, ಮನೋಹರ್, ಹೊಸಬರಾದರೂ ಹೊಸಬರು ಅಂತ ಎಲ್ಲಿಯೂ ಅನ್ನಿಸುವುದಿಲ್ಲ. ಎಲ್ಲರ ಬೆಂಬಲ ಈ ಕಲಾವಿದರ ಮೇಲೆ ಇರಲಿ ಎಂದು ವಿನಂತಿಸಿಕೊಂಡರು.

Leave a Comment