ಅಜಯ ಚಕ್ರವರ್ತಿ ಶಾಸ್ತ್ರೀಯ ಗಾಯನ 20 ರಂದು

 

ಕಲಬುರಗಿ ಅ 18: ನಾದಲಹರಿ ಚಾರಿಟೇಬಲ್ ಟ್ರಸ್ಟ್ ಮತ್ತು ಸಂಶೋಧನ ಕೇಂದ್ರ ಹಾಗೂ ಕಲಬುರಗಿಯ ಸಾಂಬ್ರಾಣಿ ಕುಟುಂಬದವರ ಸಹಯೋಗದಲ್ಲಿ ದಿವಂಗತ ವಾಮನ ಸಾಂಬ್ರಾಣಿ ಅವರ ಸ್ಮರಣಾರ್ಥ ಅಕ್ಟೋಬರ್.20 ರಂದು ಸಂಜೆ 6 ಗಂಟೆಗೆ ನಗರದ ಡಾ ಎಸ್ ಎಂ ಪಂಡಿತ ರಂಗಮಂದಿರದಲ್ಲಿ  ಪ್ರಖ್ಯಾತ ಹಿಂದುಸ್ತಾನಿ ಗಾಯಕ ಪದ್ಮಶ್ರೀ ಪಂ. ಅಜಯ ಚಕ್ರವರ್ತಿ ಅವರ  ಶಾಸ್ತ್ರೀಯ ಗಾಯನ ಕಾರ್ಯಕ್ರಮ ಆಯೋಜಿಸಲಾಗಿದೆ.

ಕಾರ್ಯಕ್ರಮಕ್ಕೂ ಮುಂಚೆ  ಕಲಬುರಗಿಯ  ಮಾಧುರಿ ಕುಲಕರ್ಣಿ ಅವರ  ಗಾಯನ ಕಾರ್ಯಕ್ರಮವಿದೆ ಎಂದು ನಾದಲಹರಿ ಚಾರಿಟೇಬಲ್ ಟ್ರಸ್ಟ್  ಅಧ್ಯಕ್ಷ ಡಾ. ಪ್ರಶಾಂತ ಕಮಲಾಪುರಕರ್ ಮತ್ತು ಡಾ. ಅಜಯ್ ಸಾಂಬ್ರಾಣಿ ಅವರು ಇಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸಂಗೀತ ಕಾರ್ಯಾಗಾರ:

ನೂತನ ವಿದ್ಯಾಲಯದ ಅನಂತರಾವ ದೇಶಮುಖ ಸಭಾಗೃಹದಲ್ಲಿ ನಾಳೆ ( ಅ.19 ) ಸಂಜೆ 5 ಗಂಟೆಗೆ ಪಂ. ಅಜಯ ಚಕ್ರವರ್ತಿ ಅವರಿಂದ ಸಂಗೀತ ಕಾರ್ಯಾಗಾರ ಏರ್ಪಡಿಸಲಾಗಿದೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾಧವ ಜೋಶಿ,ಓಂ ಪ್ರಕಾಶ ತೋಸ್ನಿವಾಲ್, ಡಾ. ಸಿದ್ಧಾಪುರಕರ್ ಉಪಸ್ಥಿತರಿದ್ದರು.

Leave a Comment