ಅಗತ್ಯ ಬಿದ್ದರೆ ಪೊಲೀಸ್ ಠಾಣೆಗಳ ಸೀಲ್ ಡೌನ್ : ಬಸವರಾಜ ಬೊಮ್ಮಾಯಿ

ಮೈಸೂರು. ಮೇ.22- ಪೊಲೀಸ್ ಸಿಬ್ಬಂದಿಗಳಿಗೆ ಸುರಕ್ಷತಾ ಕ್ರಮ ಕೈಗೊಂಡಿದ್ದೇವೆ. ಸುರಕ್ಷತಾ ಕ್ರಮ ಕೈಗೊಂಡಿದ್ದರೂ ಕೂಡ ಕೆಲವು ಸಿಬ್ಬಂದಿಗಳಲ್ಲಿ ಕೊರೋನಾ ಪಾಸಿಟಿವ್ ಕಾಣಿಸಿಕೊಂಡಿದೆ. ವಿಶೇಷವಾಗಿ ಪೊಲೀಸ್ ಸಿಬ್ಬಂದಿಗಳಿಗೆ ಶಿಫ್ಟ್ ಬೇಸಿಸ್ ಹಾಕಿ ಅಂತ ಹೇಳಿದ್ದೇನೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.
ಮೈಸೂರಿನಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು ಕೆ.ಆರ್.ಪೇಟೆ. ಬೆಂಗಳೂರು ಪೊಲೀಸ್ ಓರ್ವರಲ್ಲಿ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ, ಕೆ.ಆರ್.ಪೇಟ್ ಹೆಡ್ ಕಾನ್ಸಟೇಬಲ್, ಶಿವಮೊಗ್ಗದಲ್ಲೂ ಆಗಿದೆ. ಪೊಲೀಸರ ಇನ್ನೊಂದು ಮಾನವೀಯತೆ ಮುಖ ನೋಡಲು ಲಾಕ್ ಡೌನ್ ವೇಳೆ ಸಿಕ್ತು. ವಿಶೇಷವಾಗಿ ಕರ್ನಾಟಕದಲ್ಲಿ ತಬ್ಲಿಘಿ ಜಮಾತ್ ನಿಂದ ಗುರುತಿಸಿ ನಿಯಂತ್ರಿಸುವಲ್ಲಿ ಪ್ರಮುಖಪಾತ್ರ ವಹಿಸಿದ್ದಾರೆ. ಇಲ್ಲದಿದ್ದಲ್ಲಿ ನಮ್ಮ ರಾಜ್ಯದಲ್ಲೂ ಪಕ್ಕದ ರಾಜ್ಯದಂತೆ ಆಗ್ತಿತ್ತು. ಈ ಸಂದರ್ಭದಲ್ಲಿ ಬಹಳಷ್ಟು ಸಲ ಖೈದಿಗಳಾಗಲಿ, ಅಪರಾಧಿಗಳಾಗಲಿ ಪಾಸಿಟಿವ್ ಇರುವವರ ಜೊತೆ ಸಂಪರ್ಕಕ್ಕೆ ಬಂದು ಕೆಲವು ಘಟನೆ ನಡೆದಿದೆ. ಬೇರೆ ರಾಜ್ಯಕ್ಕೆ ಹೋಲಿಸಿದರೆ ಬಹಳ ಕಡಿಮೆ ಇದೆ. ಆದರೂ ಕೂಡ ನಾವು ಮುನ್ನೆಚ್ಚರಿಕಾ ಕ್ರಮವನ್ನು ತೆಗೆದುಕೊಂಡಿದ್ದೇವೆ.ವಿಶೇಷವಾಗಿ ಪೊಲೀಸ್ ಸಿಬ್ಬಂದಿಗಳಿಗೆ ಶಿಫ್ಟ್ ಬೇಸಿಸ್ ಹಾಕಿ ಅಂತ ಹೇಳಿದ್ದೇನೆ. 55ವರ್ಷ ಮೇಲಿನವರಿಗೆ ಠಾಣೆಯಲ್ಲಿಯೇ ಕೆಲಸ ಕೊಡಿ. ಯುವಕರಿಗೆ ಶಿಫ್ಟ್ ಹಾಕಿ ಪ್ರತಿ ವಾರ-10ದಿನಗಳಿಗೆ ರಜೆ ನೀಡಿ ಎಂದಿದ್ದೇನೆ. ಕೆ.ಆರ್.ಪೇಟೆಯಲ್ಲಿ ಎರಡು ಪೊಲೀಸ್ ಠಾಣೆ ಶೀಲ್ ಡೌನ್ ಮಾಡಿದ್ದೇವೆ. ಬೆಂಗಳೂರಿನಲ್ಲಿ ಅವರ ಮೂವ್ ಮೆಂಟ್ ನೋಡಿ ಅವಶ್ಯಕತೆ ಇದ್ದರೆ ಫ್ರೀಜರ್ ಟೌನ್ ಶೀಲ್ ಡೌನ್ ಮಾಡ್ತೇವೆ ಎಂದು ತಿಳಿಸಿದರು.
ಮೈಸೂರಿನಲ್ಲಿ ಕೊರೋನಾ ನಿಯಂತ್ರಣಕ್ಕೆ ಜಿಲ್ಲಾಡಳಿತ ಒಳ್ಳೆಯ ಕೆಲಸ ಮಾಡಿದೆ. ಆಶಾಕಾರ್ಯಕರ್ತರು, ಪೊಲೀಸರು, ವೈದ್ಯರು ಅಧಿಕಾರಿಗಳು ಒಳ್ಳೆ ಕೆಲಸ ಮಾಡಿದ್ದಾರೆ. ಅವರಿಗೆ ಅಭಿನಂದನೆ ಮುಕ್ತಕಂಠದಿಂದ ಶ್ಲಾಘಿಸುತ್ತೇನೆ ಎಂದರು. ಇದು ಲಾಕ್ ಡೌನ್ 4ರ ನಂತರದ ಸಂದರ್ಭ. ಮೈಸೂರು ಬಹಳ ವಿಶಿಷ್ಟವಾಗಿರುವ ಊರು. ಕೇರಳ, ತಮಿಳುನಾಡಿ ಗಡಿ ಇದೆ. ಕಟ್ಟಿನಿಟ್ಟಿನ ಕ್ರಮಕ್ಕೆ ಮೈಸೂರಿನ ಜನತೆ ಒಳ್ಳೆಯ ಸಹಕಾರ ನೀಡಿದ್ದಾರೆ. ಈಗ ಅಂತರ್ ಜಿಲ್ಲೆ ತೆರವು ಮಾಡಲಾಗಿದೆ. ಲಾಕ್ ಡೌನ್ ಓಪನ್ ಆದಮೇಲೆ ಕೊರೋನಾ ಸೋಂಕಿತರ ನಂಬರ್ ಹೆಚ್ಚಾಗ್ತಿದೆ. 100ರಿಂದ 150 ಆಗ್ತಿದೆ ಎಂದರು.
ಅಂತಾರಾಜ್ಯ ಚಲನವಲನಗಳನ್ನು ನಿಯಂತ್ರಿಸುತ್ತಿದ್ದೇವೆ. ಕೊರೊನಾ ಕೇಸ್‌ಗಳು ಜಾಸ್ತಿ ಆಗುತ್ತಿವೆ.‌ ಆದ್ದರಿಂದ ಅಂತರ ಜಿಲ್ಲಾ ಪ್ರವಾಸದ ಮೇಲೂ ನಿಯಂತ್ರಣ ಬೇಕು. ಮುಂಬೈನಿಂದ ಬಂದ ವಲಸಿಗರಿಂದ ಕೊರೊನಾ ಕೇಸ್‌ಗಳು ಹೆಚ್ಚಾಗುತ್ತಿವೆ. ಆದ್ದರಿಂದ ಚೆಕ್‌ಪೋಸ್ಟ್‌ಗಳಲ್ಲಿ ಕಟ್ಟುನಿಟ್ಟಿನ ತಪಾಸಣೆ ಮಾಡಲಾಗುತ್ತಿದೆ. ಲಾಕ್‌ಡೌನ್ 4 ಮುಗಿದ ಮೇಲೆ ಏನು ಮಾಡಬೇಕು ಎಂಬುದನ್ನು ಚಿಂತನೆ ಮಾಡಬೇಕಿದೆ. ಈ ಬಗ್ಗೆ ಇನ್ನಷ್ಟೇ ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇವೆ. ಮೈಸೂರು ಜಿಲ್ಲಾಡಳಿತ ಜ್ಯುಬಿಲಿಯೆಂಟ್, ದೆಹಲಿ ಮೂಲದಿಂದ ಬಂದಿದ್ದ ಕೇಸ್ ಗಳನ್ನು ಯಶಸ್ವಿಯಾಗಿ ನಿರ್ವಹಣೆ ಮಾಡಿದೆ. ಮುಂಬೈ ಮೂಲದ ಕೇಸ್‌ಗಳ ಸವಾಲನ್ನೂ ಯಶಸ್ವಿಯಾಗಿ ನಿರ್ವಹಿಸಲೇಬೇಕಿದೆ. ಜಿಲ್ಲಾಡಳಿತ ಕೈಗೊಂಡ ಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಲೇಬೇಕು ಎಂದರು.
ಜ್ಯುಬಿಲಿಯೆಂಟ್ ಕಾರ್ಖಾನೆ ಪುನಾರಂಭ ವಿಚಾರಕ್ಕೆ ಪ್ರತಿಕ್ರಿಯಿಸಿ ಕಠಿಣ ಮುಂಜಾಗ್ರತಾ ಕ್ರಮಗಳೊಂದಿಗೆ ಕಾರ್ಖಾನೆ ತೆರೆಯಲು ಅನುಮತಿ ನೀಡಿದ್ದೇವೆ. ಜ್ಯುಬಿಲಿಯೆಂಟ್ ಫಾರ್ಮಾಸಿಟಿಕಲ್ ಕಂಪನಿ. ಬಾಗಿಲು ಹಾಕಲು ಸಾಧ್ಯವಿಲ್ಲ. ಕಾರ್ಖಾನೆ ತೆರೆಯಲು ಅನುಮತಿ ಕೇಳಿದ್ದರು. ಲಾಕ್‌ಡೌನ್ ಅವಧಿಯಲ್ಲಿ ಸಂಪೂರ್ಣವಾಗಿ ಬಂದ್ ಮಾಡಲಾಗಿತ್ತು. ತೆರೆಯುವ ಸಂದರ್ಭದಲ್ಲಿ ಹೇಗಿದೆ, ಅಲ್ಲಿನ ಪರಿಸ್ಥಿತಿ ಏನು ಎಂಬುದನ್ನು ನೋಡಬೇಕಿದೆ. ಅದನ್ನು ನೋಡಿಕೊಂಡು ಕಾರ್ಖಾನೆ ತೆರೆಯಲಾಗುವುದು ಎಂದರು.
ಆನೇಕಲ್ ಗಡಿ ಪ್ರದೇಶದಲ್ಲಿ ಬಂದ್ ಮಾಡಿದ್ದರೂ ಕಳ್ಳಕಿಂಡಿಯಲ್ಲಿ ಬರ್ತಿದ್ದಾರೆ ಎಂಬ ಮಾಧ್ಯಮದ ಪ್ರಶ್ನೆಗೆ ಪ್ರತಿಕ್ರಿಯಿಸಿ ಅತ್ತಿಬೆಲೆ ಹತ್ತಿರ ಹೋಗಿ ಖುದ್ದು ಹೋಗಿ ಸೀಲ್ ಡೌನ್ ಮಾಡಿಸಿದ್ದೇನೆ. ಅಲ್ಲಲ್ಲಿ ಬರ್ತಾ ಇದ್ದಾರೆ. ವಿಶೇಷ ಸ್ಕ್ವಾಡ್ ಮಾಡಲಾಗಿದೆ. ಎಸ್ಪಿ ರವಿಚನ್ನಣ್ಣನವರ್ ಹೋಗಿ ಪ್ರಕರಣ ದಾಖಲು ಮಾಡಿದ್ದಾರೆ. ವಿಶೇಷ ಎಕ್ಸೈಸ್ ಓಪನ್ ಆದಾಗ ಬಂದು ಹೋಗಿದ್ದಾರೆ. ಹೊರಗಡೆ ರಾಜ್ಯದಿಂದ ಬಂದವರಿಗೆ ಕ್ವಾರೆಂಟೈನ್ ಮಾಡಲಾಗುವುದು ಅನ್ನೋದು ಗೊತ್ತಾಗಿದೆ ಎಂದರು. ಸೋನಿಯಾಗಾಂಧಿ ವಿರುದ್ಧ ದೂರು ದಾಖಲಾಗಿರುವ ಕುರಿತು ಪ್ರತಿಕ್ರಿಯಿಸಿ ಸುಪ್ರೀಂಕೋರ್ಟ್ ಜಡ್ಜ್ ಮೆಂಟ್ ಇದೆ.ದೂರು ಬಂದರೆ ಏನು ಮಾಡಬೇಕು ಅಂತ ಅದರಂತೆ ನಮ್ಮ ಅಧಿಕಾರಿಗಳು ಕೆಲಸ ಮಾಡ್ತಿದ್ದಾರೆ. ಕಾಂಗ್ರೆಸ್ ಅಬ್ಜೆಕ್ಷನ್ ಹೇಳಿದ್ದಾರೆ ಅವೆಲ್ಲವೂ ಕೂಡ ತನಿಖೆಯ ಭಾಗ ಅವರೇಳಿದಾರೆ . ಅವೆಲ್ಲ ತನಿಖೆಯಲ್ಲಿ ಬರಲಿದೆ. ಕಾಂಗ್ರೆಸ್ ಗೆ ನನ್ನ ಪ್ರಶ್ನೆ ಕಳೆದ 15ದಿನಗಳ ಹಿಂದೆ ರಿಪಬ್ಲಿಕ್ ಟಿವಿಯ ಅರ್ನಬ್ ಗೋಸ್ವಾಮಿ ಏನೋ ಸ್ಟೇಟ್ ಮೆಂಟ್ ಕೊಟ್ಟರು ಅಂತ ಇಡೀ ದೇಶಾದ್ಯಂತ ಅವನ ಮೇಲೆ ಹದಿನೈದ್ನೂರಕ್ಕೂ ಅಧಿಕ ಎಫ್ ಐ ಆರ್ ಹಾಕಿದ್ರಲ್ಲ ಆಗ ನಿಮಗೆ ಹೊಳೆಯಲಿಲಲ್ಲವಾ? ಅವರಿಗೆ ಕೇಳೋ ಅಧಿಕಾರ ಇಲ್ಲವಾ ?ದ್ವಿಮುಖ ನೀತಿಯಾಕೆ ಎಂದು ಪ್ರಶ್ನಿಸಿದರು.
ಈ ಸಂದರ್ಭ ಸಚಿವ ಎಸ್.ಟಿ.ಸೋಮಶೇಖರ್ ಮತ್ತಿತರರಿದ್ದರು.

Leave a Comment